Cauvery Dispute: ತಮಿಳುನಾಡು ವಿರುದ್ಧ ಸೆ.13ಕ್ಕೆ ವಾಟಾಳ್ ನಾಗರಾಜ್ ಪ್ರತಿಭಟನೆ
ಬೆಂಗಳೂರು, ಸೆಪ್ಟಂಬರ್ 12: ಕಾವೇರಿ ನದಿ ನೀರು ವಿಚಾರ ಹಾಗೂ ಪ್ರಮುಖ ಯೋಜನೆಯಲ್ಲಿ ನೆರೆಯ ತಮಿಳುನಾಡು ರಾಜ್ಯದ ಧೋರಣೆ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ನಾಳೆ ಸೆಪ್ಟಂಬರ್ 13ರಂದು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಲಾಗಿದ್ದು, ವಾಟಾಳ್ ನಾಗರಾಜ್ ಅವರು ಬೆಂಗಳೂರು ಗಡಿಭಾಗದ ಅತ್ತಿಬೆಲೆ ಬಳಿ ಬುಧವಾರ ಮಧ್ಯಾಹ್ನ 12 ಗಂಟೆಗೆ ತಮಿಳುನಾಡು ರಾಜ್ಯದ ಗಡಿ ಭಾಗ ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ.
ತಮಿಳುನಾಡು ರಾಜ್ಯ ಕಾವೇರಿ ನೀರು ಹಂಚಿಕೆಯಲ್ಲಿ ಒತ್ತಾಯ ಮಾಡುತ್ತಿದೆ. ಸದ್ಯ ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ಇನ್ನೂ ಮೇಕೆದಾಟು ಯೋಜನೆ ಸಾಕಾರಕ್ಕೂ ಸಹ ತಮಿಳುನಾಡು ಅಡ್ಡಿ ಪಡಿಸಿತ್ತಿಎ. ಇದೆಲ್ಲ ಕಾರಣದಿಂದ ವಾಟಾಳ್ ನಾಗರಾಜ್ ಅವರು ಪ್ರತಿಭಟಿಸುತ್ತಿದ್ದಾರೆ.

ಪ್ರತಿಭಟನೆಯ ಒತ್ತಾಯಗಳೇನು?
* ತಮಿಳುನಾಡು ರಾಜ್ಯ ಸರ್ಕಾರ ಮೇಕೆದಾಟು ಬಗ್ಗೆ ತಂಟೆ ತೆಗೆಯಬಾರದು.
* ಮೇಕೆದಾಟು ಯೋಜನೆ ಆಗಲೇಬೇಕು.
* ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಅನುಕೂಲವಾಗಲಿದೆ.
* ಮೇಕದಾಟು ಯೋಜನೆಗೆ ವಿರೋಧಿಸುವುದನ್ನು ಬಿಡಬೇಕು.
* ಕಾವೇರಿ ನೀರಿಗಾಗಿ ಒತ್ತಾಯ ಸರಿಯಲ್ಲ. ಕಾವೇರಿ ನೀರಿದ್ದರೆ ನಾವೇ ಬಿಡುತ್ತೇವೆ.
* ಸದ್ಯ ಸ್ಥಿತಿಯಲ್ಲಿ ಕರ್ನಾಟಕ ರೈತರಿಗೆ ಮತ್ತು ಕುಡಿಯಲು ನೀರಿಲ್ಲದೆ ಕಷ್ಟವಾಗಿದೆ.
* ಸುಪ್ರೀಂ ಕೋರ್ಟ್‌ನಲ್ಲಿ ನೀರಿಗಾಗಿ ಕರ್ನಾಟಕದ ವಿರುದ್ಧ ಮೊಕದ್ಧಮೆ ಹಾಕಿರುವುದು ತೀವ್ರ ಖಂಡನೀಯ.
* ಈ ವಿಚಾರದಲ್ಲಿ ತಮಿಳುನಾಡಿನ ಧೋರಣೆ ಬದಲಾಗಬೇಕು.
ಕರ್ನಾಟಕ ಸರ್ಕಾರ ನಮ್ಮ ರೈತರನ್ನು ಕಡೆಗಣಿಸಿ ಯಾರಿಗೂ ಹೇಳದೆ ಧಾರಾಳವಾಗಿ ನೀರು ಬಿಟ್ಟಿದ್ದಾರೆ. ಜಲಾಶಯಕ್ಕೆ ಎಷ್ಟು ನೀರು ಬಂತು, ಎಷ್ಟು ನೀರು ಹೊರಬಿಟ್ಟಿದ್ದಾರೆ ಹಾಗೂ ಕರ್ನಾಟಕ ಜಲಾಶಯಗಳ ಪರಿಸ್ಥಿತಿ ಬಗ್ಗೆ ತಕ್ಷಣ ಶ್ವೇತಪತ್ರ ಹೊರಡಿಸಬೇಕು ಎಂದು ವಾಟಾಳ್ ನಾಗರಾಜ್ ಪ್ರತಿಭಟನೆ ವೇಳೆ ಸರ್ಕಾರವನ್ನು ಮತ್ತು ತಮಿಳುರಾಜ್ಯವನ್ನು ಆಗ್ರಹಿಸಲಿದ್ದಾರೆ.












Click it and Unblock the Notifications