ಬಿಎಂಟಿಸಿ ವಿರುದ್ಧ ವಾಟಾಳ್ ಪ್ರತಿಭಟನೆ

ಬಿಎಂಟಿಸಿ ದರ ಏರಿಕೆಯನ್ನು ಖಂಡಿಸಿ ವಾಟಾಳ್ ನಾಗರಾಜ್ ಮತ್ತು ಸಂಘಟಕರು ಮೈಸೂರು ಬ್ಯಾಂಕ್ ವೃತ್ತದಿಂದ ಮೆಜೆಸ್ಟಿಕ್ ವರೆಗೆ ಜಟಕ ಗಾಡಿಯಲ್ಲಿ ಕುಳಿತು ಸವಾರಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.[ಬಿಎಂಟಿಸಿ ಆಘಾತ: ಪ್ರಯಾಣಿಕರಿಗೆ ದರ ಏರಿಕೆ ಶಾಕ್]
ಬಿಎಂಟಿಸಿಗೆ ಹೇಳುವವರು,ಕೇಳುವವರು ಯಾರು ಇಲ್ಲದಂತಾಗಿದೆ.ಯಾರೊಂದಿಗೆ ಚರ್ಚಿಸದೇ ಅವೈಜ್ಞಾನಿಕವಾಗಿ ದರವನ್ನು ಏರಿಸಿದೆ.ಸಾರಿಗೆ ಸಚಿವರು ಕೂಡಲೇ ಬೆಲೆ ಏರಿಕೆ ಆದೇಶವನ್ನು ಹಿಂಪಡೆಯಬೇಕೆಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.[ದರ ಹೆಚ್ಚಳಕ್ಕೆ ಜನ ಏನಂತಾರೆ]
ಬಿಎಂಟಿಸಿ ಈ ರೀತಿ ಪದೇ ಪದೇ ದರ ಏರಿಸುವ ಕ್ರಮ ಸರಿಯಲ್ಲ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಹದಗೆಟ್ಟಿರುವ ಬಿಎಂಟಿಸಿ ಆಡಳಿತವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.












Click it and Unblock the Notifications