ವಂದೇ ಭಾರತ್ ಮಿಷನ್; ಬೆಂಗಳೂರಿಗೆ ಬಂದ 353 ಕನ್ನಡಿಗರು
ಬೆಂಗಳೂರು, ಮೇ 24 : ವಂದೇ ಭಾರತ್ ಮಿಷನ್ ಅಡಿ 15 ಮತ್ತು 16ನೇ ವಿಮಾನ ಬೆಂಗಳೂರಿಗೆ ಆಗಮಿಸಿದೆ. ಟೊರೊಂಟೊ ಮತ್ತು ಮೆಲ್ಬೋರ್ನ್‌ನಿಂದ ಒಟ್ಟು 353 ಪ್ರಯಾಣಿಕರು ನಗರಕ್ಕೆ ಆಗಮಿಸಿದ್ದು, ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.
ಕೆನಡಾದ ಟೊರೊಂಟೊದಿಂದ ಹೊರಟಿದ್ದ ವಿಮಾನ ಭಾನುವಾರ ಮುಂಜಾನೆ 3.45ಕ್ಕೆ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ವಂದೇ ಭಾರತ್ ಮಿಷನ್ ಅಡಿ ಬೆಂಗಳೂರಿಗೆ ಬಂದ 16ನೇ ವಿಮಾನವಿದು.
ಏರ್ ಇಂಡಿಯಾ ವಿಮಾನದಲ್ಲಿ 11 ಮಕ್ಕಳು ಸೇರಿದಂತೆ 84 ಪುರುಷರು ಮತ್ತು 62 ಮಹಿಳೆಯರು ಸೇರಿ 146ಜನರು ಆಗಮಿಸಿದರು. ಇದ್ದಾರೆ. ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳು ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದು, ಯಾವುದೇ ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ.
ವಿಮಾನ ಹೈದರಾಬಾದ್‌ಗೆ ತೆರಳಿದ್ದು, ಎಲ್ಲಾ ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್‌ಗಾಗಿ ಹೋಟೆಲ್‌ಗಳಿಗೆ ಕಳುಹಿಸಿಕೊಡಲಾಗಿದೆ.

15ನೇ ವಿಮಾನ: ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಿಂದ ಶನಿವಾರ ರಾತ್ರಿ 9.55ಕ್ಕೆ 15ನೇ ವಿಮಾನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿತು. ವಿಮಾನದಲ್ಲಿ 1 ಮಗು, 99 ಪುರುಷರು ಮತ್ತು 107 ಮಹಿಳೆಯರು ಸೇರಿ 207 ಜನರಿದ್ದರು. ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದು, 14 ದಿನಗಳ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.
ಶನಿವಾರ ದುಬೈನಿಂದ 180, ಸಿಂಗಪುರದಿಂದ 148 ಪ್ರಯಾಣಿಕರು ಬೆಂಗಳೂರು ನಗರಕ್ಕೆ ಆಗಮಿಸಿದ್ದಾರೆ. ಸೋಮವಾರದಿಂದ ದೇಶಿಯ ವಿಮಾನ ಹಾರಾಟ ಆರಂಭವಾಗಲಿದ್ದು ವಿಮಾನ ನಿಲ್ದಾಣದಲ್ಲಿ ಜನ ಸಂದಣಿ ಹೆಚ್ಚಲಿದೆ.












Click it and Unblock the Notifications