ವಂದೇ ಭಾರತ್ ಮಿಷನ್; ಬೆಂಗಳೂರಿಗೆ ಬಂದ 17 ಮತ್ತು 18ನೇ ವಿಮಾನ
ಬೆಂಗಳೂರು, ಮೇ 26 : ವಂದೇ ಭಾರತ್ ಮಿಷನ್ ಅಡಿ 17 ಮತ್ತು 18ನೇ ವಿಮಾನ ಬೆಂಗಳೂರಿಗೆ ಆಗಮಿಸಿದೆ. ಕೆನಡಾದಿಂದ 45 ಮತ್ತು ಮನಿಲಾದಿಂದ 176 ಪ್ರಯಾಣಿಕರು ನಗರಕ್ಕೆ ಆಗಮಿಸಿದ್ದು, ಎಲ್ಲರನ್ನೂ ಕ್ವಾರಂಟೈನ್‌ಗೆ ಕಳಿಸಲಾಗಿದೆ.
ಕೆನಡಾದ ವ್ಯಾಂಕೋವರ್‌ನಿಂದ ಮಂಗಳವಾರ ಬೆಳಗ್ಗೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 18ನೇ ಏರ್ ಇಂಡಿಯಾ ವಿಮಾನ ಆಗಮಿಸಿತು. 45 ಮಂದಿ ಪುರುಷ ಪ್ರಯಾಣಿಕರು ವಿಮಾನದಲ್ಲಿ ಆಗಮಿಸಿದರು.
ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದು, ಯಾರಲ್ಲಿಯೂ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್‌ಗಾಗಿ ಹೋಟೆಲ್‌ಗಳಿಗೆ ಕಳುಹಿಸಲಾಗಿದೆ.

ಫಿಲಿಪ್ಪೀನ್ಸ್‌ನ ಮನಿಲಾದಿಂದ ಆಗಮಿಸಿದ ಏರ್ ಇಂಡಿಯಾ ವಿಮಾನದಲ್ಲಿ 176 ಪ್ರಯಾಣಿಕರು ಬೆಂಗಳೂರಿಗೆ ಆಗಮಿಸಿದರು. ಒಟ್ಟು 176 ಮಂದಿ ಪ್ರಯಾಣಿಕರಲ್ಲಿ 115 ಪುರುಷರು ಮತ್ತು 61 ಮಹಿಳೆಯರು ಇದ್ದರು.
ವಿಮಾನ ನಿಲ್ದಾಣದಲ್ಲಿ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳು ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದರು. ಯಾರಿಗೂ ಕೊರೊನಾ ವೈರಸ್ ಸೋಂಕಿನ ಲಕ್ಷಣ ಪತ್ತೆಯಾಗಿಲ್ಲ. ಕ್ವಾರಂಟೈನ್‌ಗಾಗಿ ಎಲ್ಲರನ್ನು ಹೋಟೆಲ್‌ಗೆ ಕಳಿಸಲಾಗಿದೆ.












Click it and Unblock the Notifications