ಧಾರವಾಡ-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಅಪಡೇಟ್
ಬೆಂಗಳೂರು, ಏಪ್ರಿಲ್ 29: ನೈಋತ್ಯ ರೈಲ್ವೆ (SWR) ಮತ್ತು ರೈಲ್ವೆ ವಿದ್ಯುದ್ದೀಕರಣ ಕೇಂದ್ರ ಸಂಸ್ಥೆ (CORE) ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ಬಾಕಿ ಉಳಿದಿರುವ ವಿದ್ಯುದ್ದೀಕರಣ ಪೂರ್ಣಗೊಳಿಸಲು ಕಾಮಗಾರಿಗಳನ್ನು ವೇಗಗೊಳಿಸಿದ್ದು, ಎಲ್ಲವೂ ಅಂದುಕೊಂಡಂತೆ ಮುಗಿದರೆ ಜೂನ್ ವೇಳೆಗೆ ಧಾರವಾಡ-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸುವ ಸಾಧ್ಯತೆ ಇದೆ.
ರೈಲ್ವೆ ವಿದ್ಯುದ್ದೀಕರಣ ಕೇಂದ್ರ ಸಂಸ್ಥೆ ಬಿಡುಗಡೆ ಮಾಡಿದ ದಾಖಲೆಯ ಪ್ರಕಾರ, ಭಾರತೀಯ ರೈಲ್ವೇಯು ಏಪ್ರಿಲ್ 12 ರಂದು ಬೆಂಗಳೂರು ಮತ್ತು ಧಾರವಾಡ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಾಯೋಗಿಕ ಓಡಾಟವನ್ನು ನಡೆಸಬೇಕಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಕಾಮಗಾರಿಯನ್ನು ಮುಂದೂಡಲಾಗಿತ್ತು.

ಈಗ ಹುಬ್ಬಳ್ಳಿ ಮತ್ತು ಸೌಂಶಿ ನಡುವಿನ ಡೌನ್‌ಲೈನ್‌ನ ವಿದ್ಯುದ್ದೀಕರಣ ಕಾಮಗಾರಿಯನ್ನು ಏಪ್ರಿಲ್ 30 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ ನಡುವಿನ ರೈಲುಗಳು ಮೇ 30 ರೊಳಗೆ ಎಲೆಕ್ಟ್ರಿಕ್ ಲೊಕೊಸ್ ಮೂಲಕ ಚಲಿಸುವ ಸಾಧ್ಯತೆಯಿದೆ. ಟ್ರಾಕ್ಷನ್ ಸಬ್‌ಸ್ಟೇಷನ್ (ಟಿಎಸ್‌ಎಸ್) ನಿರ್ಮಾಣವು ಕೆಲವು ಸ್ಥಳಗಳಲ್ಲಿ ಪ್ರಗತಿಯಲ್ಲಿದೆ.
2023 ರ ಮಾರ್ಚ್ 31 ರಂದು ದೇವರಗುಡ್ಡ ಹುಬ್ಬಳ್ಳಿ ವಿಭಾಗ (ಅಪ್ ಲೈನ್ ಮಾತ್ರ) ನಡುವೆ ಎಲೆಕ್ಟ್ರಿಕ್ ಲೋಕೋ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಯಿತು, ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಲಾಯಿತು. ಇತ್ತೀಚೆಗಷ್ಟೇ ಸೌಂಶಿಯಿಂದ ಹುಬ್ಬಳ್ಳಿ ಮತ್ತು ಹಾವೇರಿ ಯಾರ್ಡ್ ನಡುವಿನ ಪ್ಯಾಚ್ ಡಬ್ಲಿಂಗ್ ಪೂರ್ಣಗೊಂಡಿದೆ. ರೈಲ್ವೆ ವಿದ್ಯುದ್ದೀಕರಣ, ಬೆಂಗಳೂರು ಬಾಕಿ ಉಳಿದಿರುವ ವಿದ್ಯುದ್ದೀಕರಣ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ, ಕರ್ನಾಟಕ ವಿಧಾನಸಭೆ ಚುನಾವಣೆ 2023 ಮುಗಿದ ನಂತರ ಜೂನ್ ವೇಳೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಂಗಳೂರು ಮತ್ತು ಹುಬ್ಬಳ್ಳಿ ಧಾರವಾಡ ನಡುವೆ ಓಡಲಿದೆ. ಕರ್ನಾಟಕದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಹೊಸ ರೈಲುಗಳ ಉದ್ಘಾಟನೆಗೆ ರಾಜಕೀಯ ಮುಖಂಡರಿಗೆ ಅವಕಾಶವಿಲ್ಲ. ಹಾಗಾಗಿ ಉದ್ಘಾಟನೆಯನ್ನು ಮುಂದೂಡಲಾಗಿದೆ.












Click it and Unblock the Notifications