ವಿ.ಸೋಮಣ್ಣ ಬಟ್ಟೆ ಕದ್ದು ಸಿಕ್ಕಿಬಿದ್ದಿದ್ದ: ಕುಮಾರಸ್ವಾಮಿ ವಾಗ್ದಾಳಿ
ಬೆಂಗಳೂರು, ನವೆಂಬರ್ 29: ಬಿಜೆಪಿ ಸಚಿವ ವಿ.ಸೋಮಣ್ಣ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ದೇವೇಗೌಡರ ಮುಂದೆ ವಿ.ಸೋಮಣ್ಣ ಬಚ್ಚಾ, ಅವರಿಗೆ ದೇವೇಗೌಡರ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯಾ?' ಎಂದು ಪ್ರಶ್ನೆ ಮಾಡಿದ್ದಾರೆ.
'ವಿ.ಸೋಮಣ್ಣ ಜನತಾ ಬಜಾರ್ ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡಿದ್ದರು. ಯಾರ್ಯಾರಿಗೆ, ಯಾವಾಗೆಲ್ಲಾ ಕಾಲಿಗೆ ಬಿದ್ದು ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ ಎಂಬುದು ಗೊತ್ತಿದೆ' ಎಂದು ಕುಮಾರಸ್ವಾಮಿ ತೀಕ್ಷ್ಣ ವಾಗ್ದಾಳಿ ನಡೆಸಿದರು.

ದೇವೇಗೌಡರು ಈ ವಯಸ್ಸಿನಲ್ಲೂ ಪಕ್ಷ ಸಂಘಟನೆಗಾಗಿ ರಾಜ್ಯದಾದ್ಯಂತ ಸಂಚರಿಸುತ್ತಿದ್ದಾರೆ, ಸೋಮಣ್ಣನ ಹಾಗೆ ಪಕ್ಷದಲ್ಲಿ ಬೆಳೆದು ನಂತರ ಅದೇ ಪಕ್ಷಕ್ಕೆ ಚೂರಿ ಹಾಕಲಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.












Click it and Unblock the Notifications