ಬೆಂಗಳೂರು: ಕಿಮ್ಸ್ ವೈದ್ಯನ ಪತ್ನಿ ಸೋನಲ್ ಆತ್ಮಹತ್ಯೆ ನಿಗೂಢತೆ
ಬೆಂಗಳೂರು, ಸೆಪ್ಟೆಂಬರ್ 17: ನಗರದ ಕಿಮ್ಸ್ ಆಸ್ಪತ್ರೆ ವೈದ್ಯ ಡಾ. ಅವಿನಾಶ್ ಅವರ ಪತ್ನಿ ತಮ್ಮ ಅಪಾರ್ಟ್ಮೆಂಟ್ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಉತ್ತರಹಳ್ಳಿ ಮುಖ್ಯರಸ್ತೆ ಪಟಾಲಮ್ಮ ದೇವಸ್ಥಾನದ ಸಮೀಪವಿರುವ ಮಂತ್ರಿ ಆಲ್ ಪೈನ್ ಅಪಾರ್ಟ್ ಮೆಂಟ್ ನ ಐದನೇ ಮಹಡಿಯಿಂದ ಹಾರಿ ಸೋನಲ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾವಿನ ಬಗ್ಗೆ ಶಂಕೆ ಏಕೆ?: ಸೋನಲ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತಮ್ಮ ಫ್ಲಾಟ್ ನಲ್ಲಲ್ಲ. ತನ್ನ ಸ್ನೇಹಿತರ ಅಪಾರ್ಟ್ಮೆಂಟ್ಗೆ ಹೋಗಿದ್ದ ಸೋನಾಲ್, ಸ್ನೇಹಿತರ ಮನೆಯಿಂದ ಕೆಳಗೆ ಹಾರಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಡಾ. ಅವಿನಾಶ್ ಅವರು ಕೆಳ ಮಹಡಿಯಲ್ಲಿ ಸ್ನೇಹಿತರ ಜತೆ ಮಾತನಾಡುತ್ತಿದ್ದರು.

ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಪಶ್ಚಿಮ ವಲಯದ ಡಿಸಿಪಿ ರವಿ ಡಿ ಚನ್ನಣ್ಣನವರ್ ಅವರು ಆಗಮಿಸಿದ್ದಾರೆ. ಮೃತ ಸೋನಾಲ್ ಅವರ ಬಳಿ ಒಳ ಉಡುಪು, ಮೊಬೈಲ್, ಮನೆ ಕೀ ಅಮೆರಿಕನ್ ಡಾಲರ್, ಚಿನ್ನದ ಸರ ಪತ್ತೆಯಾಗಿದೆ.
ಕಳೆದ ಒಂದು ವಾರದ ಕೆಳಗೆ ನಾಪತ್ತೆಯಾಗಿದ್ದ ಫ್ಲಾಟ್ ಕೀಗಳು ಈಗ ಸೋನಾಲ್ ಮೃತದೇಹದ ಬಳಿ ಕಾಣಿಸಿಕೊಂಡಿದೆ.
ಸಾಧ್ಯತೆಗಳು: ಡಾ. ಅವಿನಾಶ್ ಹಾಗೂ ಸೋನಾಲ್ ಅವರು ಮದುವೆಯಾಗಿ ಮೂರು ವರ್ಷವಾಗಿದ್ದು, 2 ತಿಂಗಳ ಮಗುವಿದೆ. ಭಾನುವಾರ ಸಂಜೆ 4.30 ರ ಸುಮಾರಿಗೆ ತಮ್ಮ ಮನೆಯಿಂದ ಸ್ನೇಹಿತೆಯ ಮನೆಗೆ ಹೋಗಿದ್ದಾರೆ. 6.30ರ ಸುಮಾರಿಗೆ ಕೆಳಗೆ ಹಾರಿದ್ದಾರೆ.
ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಅಥವಾ ಆಕಸ್ಮಿಕವಾಗಿ ನಡೆದ ಘಟನೆಯಂತೆ ಕಂಡು ಬರುತ್ತಿದೆ. ಶನಿವಾರ, ಭಾನುವಾರದಂದು ಅಪಾರ್ಟ್ಮೆಂಟ್ ಗೆ ಬಂದು ಹೋಗಿರುವವರ ವಿವರಗಳನ್ನು ಪಡೆಯಲಾಗಿದೆ. ಸಿಸಿಟಿವಿ ಫುಟೇಜ್ ಪರಿಶೀಲಿಸಲಾಗುತ್ತಿದೆ.
ಫ್ಲಾಟ್ ಕೀ, ಚಿನ್ನಾಭರಣ ನೋಡಿದರೆ, ಬಹುಶಃ ಸ್ನೇಹಿತರ ಮನೆಯಿಂದ ಅದನ್ನು ಕಸಿದುಕೊಂಡು ಹೋಗುವಾಗ ಸಿಕ್ಕಿ ಬೀಳುವ ಭಯದಿಂದ ಆಕೆ ಆತ್ಮಹತ್ಯೆಗೆ ಮುಂದಾಗಿರಬಹುದು ಅಥವಾ ಅಕಸ್ಮಾತ್ ಮೇಲಿಂದ ಹಾರಿರಬಹುದು. ಸದ್ಯಕ್ಕೆ ಆರ್ ಆರ್ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ರವಿ ಹೇಳಿದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications