ಪುತ್ರನಿಗೆ ಚೂರಿ ಇರಿತ, ಸುಮ್ಮನೆ ನಿಂತಿದ್ರು ಜನ: ಜಗ್ಗೇಶ್

ಬೆಂಗಳೂರು, ಆಗಸ್ಟ್ 14: ಬೆಂಗಳೂರಿನ ಆರ್ ಟಿ ನಗರದಲ್ಲಿ ನಟ ಜಗ್ಗೇಶ್ ಪುತ್ರ ಗುರುವಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಅವರ ಕಾಲಿಗೆ ಚಾಕುವಿನಿಂದ ಇರಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ತಮ್ಮ ಮಗನನ್ನು ಶಾಲೆಗೆ ಬಿಡಲೆಂದು ಹೋಗಿದ್ದ ಗುರುವಿನ ಕೆಲ ಅಪರಿಚಿತ ದುಷ್ಕರ್ಮಿಗಳು ಚೂರಿಯಿಂದ ದಾಳಿ ನಡೆಸಿದ್ದು, ಈ ಕೃತ್ಯ ಎಸಗಿದ್ದು ಯಾರೆಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

Unknown men attack on Kannada film actor Jaggesh's son in Bengaluru

ಈ ಕುರಿತು ಪ್ರತಿಕ್ರಿಯೆ ನೀಡಿದ ನಟ ಜಗ್ಗೇಶ್, ತಮ್ಮ ಪುತ್ರ ಚೇತರಿಸಿಕೊಳ್ಳುತ್ತಿದ್ದಾರೆ, ಗಾಬರಿ ಪಡುವುದು ಬೇಡ ಎಂದಿದ್ದಾರೆ.

ತಮ್ಮ ಮಗನ ಮೇಲೆ ದಾಳಿ ನಡೆಯುತ್ತಿದ್ದರೂ ಆತನ ಸುತ್ತ ಇದ್ದ ಜನರ್ಯಾರೂ ನೆರವಿಗೆ ಬರದಿದ್ದನ್ನು ಖಂಡಿಸಿದ ನವರಸ ನಾಯಕ ಬೇಸರ ವ್ಯಕ್ತಪಡಿಸಿದರು. 'ಸಾರ್ವಜನಿಕ ಸ್ಥಳಗಳಲ್ಲಿ ಯಾರಿಗೇ ತೊಂದರೆಯಾದರೂ ಸಯಾಯ ಮಾಡುವುದು ಮಾನವೀಯತೆ. ನಿಮಗೆ ನಿಜಕ್ಕೂ ಸಾಮಾಜಿಕ ಕಾಳಜಿ ಇದ್ರೆ ಇಂಥ ಸಂದರ್ಭದಲ್ಲಿ ಸಂತ್ರಸ್ಥರಿಗೆ ಸಹಾಯ ಮಾಡಿ, ಮೊಬೈಲ್ ನಲ್ಲಿ ಫೋಟೋ ತೆಗ್ಯೋದು, ವಿಡಿಯೋ ಮಾಡೋದ್ರಲ್ಲೆ ಬ್ಯುಸಿ ಆಗಿ ಮಾನವೀಯತೆ ಮರೆಯಬೇಡಿ' ಎಂದು ಮನವಿ ಮಾಡಿಕೊಂಡರು.

ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡಿ, ಸ್ಟೇಟಸ್ ಹಾಕಿ ಕಾಳಜಿ ತೋರಿಸಿದರೆ ಸಾಲದು, ಅದು ವಾಸ್ತವದಲ್ಲಿರಬೇಕೆಂದೂ ಅವರು ಈ ಸಂದರ್ಭದಲ್ಲಿ ಹೇಳಿದರು.

ಸದ್ಯಕ್ಕೆ ಗುರು ಅವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಆರ್ ಟಿ ನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ದಾಳಿಗೆ ಕಾರಣವೂ ತಿಳಿದುಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+