ನೆಲಮಂಗಲದ ಕುಣಿಗಲ್ ವೃತ್ತದಲ್ಲಿ ಕಾರಿನಲ್ಲಿ ಶವ ಪತ್ತೆ
ಬೆಂಗಳೂರು, ಜನವರಿ 27: ಬೆಂಗಳೂರಿನ ಗ್ರಾಮಾಂತರ ನೆಲಮಂಗಲ ತಾಲೂಕಿನ ಕುಣಿಗಲ್ ವೃತ್ತದ ಬಳಿ ಕಾರಿನಲ್ಲಿ ಶವವೊಂದು ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.
ನೆಲಮಂಗಲ ಟೌನಿನ ಕುಣಿಗಲ್ ಸರ್ಕಲ್ ಬಳಿ ಇರುವ ಅರುಣ್ ಗ್ಯಾರೇಜಿನಲ್ಲಿ ಕೆಟ್ಟು ನಿಂತ ಕಾರಿನಲ್ಲಿ ಶವ ಕಂಡು ಬಂದಿದೆ. ಕಾರಿನಲ್ಲಿ ಕುಳಿತ ರೀತಿ ವ್ಯಕ್ತಿಯೊಬ್ಬರಿದ್ದಾರೆ. ಸುಮಾರು 40-45 ವರ್ಷ ವಯಸ್ಸು ಇರಬಹುದು ಎಂದು ಅಂದಾಜು ಮಾಡಲಾಗಿದೆ. ಚಳಿಗೆ ಮುದುಡಿಕೊಂಡು ಕುಳಿತಂತೆ ಕಾಣುತ್ತದೆ.
ಹೆದ್ದಾರಿ ಪಕ್ಕದಲ್ಲೇ ಇರುವ ಗ್ಯಾರೇಜ್ ಮುಂದೆ ನಿಲ್ಲಿಸಿರುವ ಕಾರಿನಲ್ಲಿ ಶವ ಕೊಳತೆ ವಾಸನೆ ಬರಲಾರಂಭಿಸಿದೆ. ರಸ್ತೆಯಲ್ಲಿ ಓಡಾಡುವರೊಬ್ಬರು ಕೆಟ್ಟ ವಾಸನೆ ಬಂದಿದ್ದರಿಂದ ಕಾರಿನ ಬಳಿ ತೆರಳಿ ಪರೀಕ್ಷಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆ ಇನ್ನೂ ಆಗಿಲ್ಲ, ಕಾರಿನಲ್ಲಿ ವ್ಯಕ್ತಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿಲ್ಲ. ಚಳಿಗೆ ಉಸಿರುಗಟ್ಟೆ ಮೃತಪಟ್ಟಿರಬಹುದು, ಅಥವಾ ಕಾರಿನ ಎಸಿ ಗಾಳಿ ವಿಷವಾಗಿ ಸತ್ತಿರಬಹುದು ಎಂಬ ಅನುಮಾನ ಮೂಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಗ್ಯಾರೇಜಿನ ಬಳಿ ಇರುವ ಸಿಸಿಟಿವಿ ದೃಶ್ಯಗಳು ಇನ್ನು ಲಭ್ಯವಾಗಿಲ್ಲ. ಸಿಸಿಟಿವಿ ಕ್ಲಿಪ್ಪಿಂಗ್ ಸಿಕ್ಕರೆ ಕಾರು ಈ ಸ್ಥಳಕ್ಕೆ ಯಾವಾಗ ಬಂದಿದ್ದು, ಎಂಬುದರ ಬಗ್ಗೆ ತಿಳಿಯಲಿದೆ ಎಂದು ಪೊಲೀಸರು ಹೇಳಿದರು.












Click it and Unblock the Notifications