Uber Bus: ಬೆಂಗಳೂರು ಐಟಿ ಉದ್ಯೋಗಿಗಳಿಗೆ ಗುಡ್ ನ್ಯೂಸ್: ಬರಲಿವೆ ಊಬರ್ ಬಸ್
ಬೆಂಗಳೂರು, ಅಕ್ಟೋಬರ್ 24: ಸಂಚಾರ ದಟ್ಟಣೆಯಲ್ಲಿ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದ ಬೆಂಗಳೂರಿನಲ್ಲಿ ನಿತ್ಯ ಓಡಾಡುವುದೇ ಹರಸಾಹಸವಾಗಿದೆ. ನಿತ್ಯ ಐಟಿ-ಬಿಟಿ ಕಂಪನಿಗಳಿಗೆ ಸಂಚರಿಸುವ ನೌಕರರು ಈ ಟ್ರಾಫಿಕ್ ನಿಂದ ಹೈರಾಣಾಗಿದ್ದಾರೆ. ಇವರೆಗಲ್ಲ 'ಉಬರ್ ಇಂಡಿಯಾ' ಸಂಸ್ಥೆ ಖುಷಿ ಸುದ್ದಿಯೊಂದನ್ನು ನೀಡಿದೆ. ಸಂಚಾರ ಕಿರಿ ಕಿರಿ ತಪ್ಪಿಸಲು ಐಟಿ ಕಾರಿಡಾರ್‌ಗಳಿಗೆ ಹೊಸ ಸಂಚಾರ ಸೇವೆ ನೀಡಲು ಸಂಸ್ಥೆ ಮುಂದಾಗಿದೆ.
ಹೌದು, ಬೆಂಗಳೂರಿನ ಐಟಿ ಕಂಪನಿಗಳಿಗೆ ತೆರಳುವವರಿಗೆ ಉಬರ್ ಸಂಸ್ಥೆಯು 'ಉಬರ್ ಬಸ್' ಸೇವೆಯನ್ನು (Uber Bus Service) ಬೆಂಗಳೂರಿಗೆ ಪರಿಚಯಿಸಲು ಮುಂದಾಗಿದೆ. ಈ ಮೂಲಕ ಕಡಿಮೆ ದರದಲ್ಲಿ ಉತ್ತಮ ಬಸ್ ಸೇವೆ ನೀಡುವುದರ ಜೊತೆಗೆ ಬೆಂಗಳೂರು ಟ್ರಾಫಿಕ್ ನಿಯಂತ್ರಿಸುವಲ್ಲಿ ಉಬರ್ ಮಹತ್ವದ ಕೊಡುಗೆ ನೀಡಲಿದೆ. ಹಾಗಾದರೆ ಎಲ್ಲಿಂದ ಎಲ್ಲಿಗೆ? ಎಷ್ಟು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ಹೊಸ ಬಸ್ ಸೇವೆ ಲಭ್ಯವಾಗಲಿದೆ?. ಯಾವಾಗ ಆರಂಭ? ಮಾಹಿತಿ ಇಲ್ಲಿದೆ.

ದೆಹಲಿ, ಕೊಲ್ಕತ್ತಾ, ಹೈದರಾಬದ್ ಸೇರಿದಂತೆ ಇನ್ನಿತರ ಮಹಾನಗರಗಳಲ್ಲಿ ಸೇವೆ ನೀಡುತ್ತಿರುವ ಈ ಉಬರ್ ಕಂಪನಿಯು ಬೆಂಗಳೂರಿನಲ್ಲಿ ಆರಂಭದಲ್ಲಿ 18 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಐಟಿ ಕಾರಿಡಾರ್/ಕಂಪನಿಗಳಿಗೆ ಸಂಪರ್ಕ ಸೇವೆ ಒದಗಿಸಲಿದೆ.
ಹೆಚ್ಚು ಟ್ರಾಫಿಕ್ ಕಂಡು ಬರುವ ಕೆ.ಆರ್.ಪುರಂ, ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್ ಸಿಟಿ, ಮಾರತ್ತಹಳ್ಳಿ, ಬೊಮ್ಮನಹಳ್ಳಿ, ಮಹಾದೇವಪುರ ಐಟಿ ಕಾರಿಡಾರ್‌ಗಳ ನೌಕರರಿಗೆ ಸೇವೆ ನೀಡುವ ಪ್ಲಾನ್ ಇದೆ ಎಂದು ಉಬರ್ ಇಂಡಿಯಾ ಕಂಪನಿ ಮುಖ್ಯಸ್ಥ ಪ್ರಭಜೀತ್ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.
ಯೋಜನೆ ಕಿಕ್‌ಸ್ಟಾರ್ಟ್ ಬಗ್ಗೆ ಉಬರ್ ಮುಖಸ್ಥ ಹೇಳಿದ್ದೇನು?
ಉಬರ್‌ನ 2024 ರ ಇಂಡಿಯಾ ಎಕನಾಮಿಕ್ ಇಂಪ್ಯಾಕ್ಟ್ ವರದಿ ಬಿಡುಗಡೆ ವೇಳೆ ಮಾತನಾಡಿದ ಉಬರ್ ಇಂಡಿಯಾ ಮುಖ್ಯಸ್ಥ ಪ್ರಭಜೀತ್ ಸಿಂಗ್ ಅವರು, ಸಿಲಿಕಾನ್ ಸಿಟಿಯಲ್ಲಿ ಈ ಬಸ್ ಸೇವೆ ಯೋಜನೆ ಕಿಕ್‌ಸ್ಟಾರ್ಟ್ ಮಾಡಲು ಸಂಬಂಧಿಸಿದವರ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೋಲ್ಕತ್ತಾ, ಹೈದರಾಬಾದ್, ಮುಂಬೈ ಹಾಗೂ ದೆಹಲಿ ಯಲ್ಲಿ ನಮ್ಮ ಉಬರ್ ಬಸ್ ಸೇವೆ ಆರಂಭಿಸಿದ್ದೇವೆ. ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಆರಂಭೀಸಲು ಮಧ್ಯಸ್ಥಗಾರರ ಜೊತೆ ಮಾತನಾಡುತ್ತಿದ್ದೇವೆ. ಈ ಷಟಲ್ ಬಸ್ ಸೇವೆ ಆರಂಭವು ಬೆಂಗಳೂರಿಗೆ ಪೂರಕವಾಗಿದೆ. ಸಂಚಾರ ದಟ್ಟಣೆಗೆ ತುಸು ಬ್ರೇಕ್ ಹಾಕಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

200 ಶಟಲ್ ಬಸ್‌ಗಳು ಓಡಿಸಲು ಪ್ಲಾನ್
ಹೊರ ವರ್ತುಲ ರಸ್ತೆ (ORR) ಮೂಲಕ ಒಮ್ಮ ಈ ಉಬರ್ ಬಸ್ ಸೇವೆ ಐಟಿ ಕಾರಿಡಾರ್‌ನಲ್ಲಿ ಸಂಪರ್ಕ ಕಲ್ಪಿಸುವ ಕೆಲಸ ಆರಂಭಿಸಿದೆ. ಒಟ್ಟಾರೆ ನಗರಾದ್ಯಂತ ಎಸಿ ಸಹಿತ ಸುಮಾರು 200 ಶಟಲ್ ಬಸ್‌ಗಳು ಓಡಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಉದ್ಯೋಗಿಗೆ ಎರಡು-ಮೂರು ನಿಮಿಷಗಳ ಅಂತದಲ್ಲಿ ಸೇವೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಿದ್ದೇವೆ. ಸಾರ್ವಜನಿಕರಿಗೆ ಪರ್ಯಾಯ ಸಾರಿಗೆ ಸೇವೆ ಸಿಕ್ಕಂತಾಗುತ್ತದೆ. ಗಂಟೆಗಟ್ಟಲೇ ಉದ್ಯೋಗಿಗಳು ಟ್ರಾಫಿಕ್‌ನಲ್ಲಿ ಕಾಯುವುದು ತಪ್ಪಲಿದೆ.












Click it and Unblock the Notifications