ಬೆಂಗಳೂರಲ್ಲಿ ಮತ್ತೆ ಗ್ಯಾಂಗ್ ವಾರ್: ಇಬ್ಬರು ರೌಡಿಗಳ ಬರ್ಬರ ಹತ್ಯೆ
ಬೆಂಗಳೂರು, ನವೆಂಬರ್ 22: ಬೆಂಗಳೂರಲ್ಲಿ ಮತ್ತೆ ಗ್ಯಾಂಗ್ ವಾರ್ ನಡೆದಿದ್ದು ಬುಧವಾರ ತಡರಾತ್ರಿ ಇಬ್ಬರು ರೌಡಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಮುರುಗನ್ (34) ಹಾಗೂ ಪಳನಿ ಎನ್ನುವ ರೌಡಿಗಳನ್ನು ಕೋಣನಕುಂಟೆಯ ವೀವರ್ಸ್ ಕಾಲೊನಿಯಲ್ಲಿ ಹತ್ಯೆ ಮಾಡಲಾಗಿದೆ. ತಮಿಳುನಾಡು ಮೂಲದ ಮುರುಗನ್ ಹಾಗೂ ಬಿಡಿಎಸ್ ಮಂಜನ ಮಧ್ಯೆ ಸುಮಾರು ಏಳು ವರ್ಷಗಳಿಂದ ವೈಷಮ್ಯವಿತ್ತು. ಮುರಿಗನ್ ಮತ್ತು ಪಳನಿ ಇಬ್ಬರು ಬಾರ್‌ನಲ್ಲಿ ಮಧ್ಯಪಾನ ಮಾಡಿ ಮನೆಗೆ ತೆರಳುತ್ತಿದ್ದಾಗ ಮಂಜ ಮತ್ತು 8 ಮಂದಿಯಿಂದ ದಾಳಿ ನಡೆಸಿ ಲಾಂಗ್‌ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.

ಮಧ್ಯರಸ್ತೆಯಲ್ಲಿಯೇ ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications