ಉನ್ನತ ಶಿಕ್ಷಣದಲ್ಲಿ ಮೌಲ್ಯಗಳು : 2 ದಿನಗಳ ವಿಚಾರ ಸಂಕಿರಣ

ಬೆಂಗಳೂರು, ಫೆ.3 : 'ವ್ಯಾಲ್ಯೂ ಎಜುಕೇಷನ್‌ ಅಂಡ್‌ ಏನ್ಶಿಯಂಟ್‌ ಇಂಡಿಯನ್‌ ವಿಸ್ಡಂ' ಎಂಬ ವಿಷಯದ ಕುರಿತ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯುತ್ತಿದೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಮಂಗಳವಾರ ಸಮ್ಮೇಳನವನ್ನು ಉದ್ಘಾಟಿಸಿದ್ದಾರೆ.

ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜು ಮತ್ತು ದಿಶಾ ಚಾರಿಟೇಬಲ್‌ ಟ್ರಸ್ಟ್‌ ಜಂಟಿಯಾಗಿ ಫೆ.3 ಮತ್ತು 4ರಂದು ಎರಡು ದಿನಗಳ ಈ ಸಮ್ಮೇಳನವನ್ನು ಆಯೋಜಿಸಿವೆ. ಮಲ್ಲೇಶ್ವರಂ 18ನೇ ಕ್ರಾಸ್‌ನಲ್ಲಿರುವ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜಿನ ಕೆಎನ್‌ವಿ ಶಾಸ್ತ್ರಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.

national conference

ಮಂಗಳವಾರ ಬೆಳಗ್ಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಎರಡು ದಿನಗಳ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಆಶಯ ಭಾಷಣವನ್ನು ಕೋಲ್ಕತ್ತ ಆರ್‌ಕೆಎಂ ವಿವೇಕಾನಂದ ವಿಶ್ವವಿದ್ಯಾಲಯದ ಕುಲಪತಿ ಸ್ವಾಮಿ ಆತ್ಮಪ್ರಿಯಾನಂದಜಿ ಮಹಾರಾಜ ಮಾಡಲಿದ್ದಾರೆ.

'ವ್ಯಾಲ್ಯೂ ಎಜುಕೇಷನ್‌ ಅಂಡ್‌ ಏನ್ಶಿಯಂಟ್‌ ಇಂಡಿಯನ್‌ ವಿಸ್ಡಂ' ವಿಷಯದ ಕುರಿತು ಚರ್ಚೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜಲಂಧರ್‌ ಪಂಜಾಬ್‌ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ರಜನೀಶ್‌ ಅರೋರಾ, ವಿದ್ಯಾಭಾರತಿ ಉಪಾಧ್ಯಕ್ಷ ರಾಮಕೃಷ್ಣ ರಾವ್‌. ಉದಯಪುರ ಪೆಸಿಫಿಕ್‌ ವಿಶ್ವವಿದ್ಯಾಲಯದ ಅಧ್ಯಕ್ಷ ಬಿ.ಪಿ. ಶರ್ಮಾ, ಅಕಾಡೆಮಿ ಫಾರ್‌ ಕ್ರಿಯೇಟಿವ್‌ ಟೀಚಿಂಗ್‌ನ ನಿರ್ದೇಶಕ ಗುರುರಾಜ ಕರಜಗಿ ಪಾಲ್ಗೊಳ್ಳಲಿದ್ದಾರೆ.

ಫೆಬ್ರವರಿ 4ರಂದು ಸಿವಿ ರಾಮನ್ ನಗರದಲ್ಲಿರುವ, ಇಂಡಿಯನ್ ಇನ್ಸಿಟಿಟ್ಯೂಟ್ ಆಫ್‌ ಸೈನ್ಸ್‌ನ, ಜೆ.ಎನ್‌.ಟಾಟಾ ಆಡಿಟೋರಿಯಂನಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ವೆಂಕಟಾಚಲಯ್ಯ ಪಾಲ್ಗೊಳ್ಳಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ರಾಜೇಶ್ ಪದಮಾರ್ 9880621824 ಅಥವ ಪ್ರಮೋದ್ ನಟರಾಜ್ ಅವರನ್ನು 9916381599 ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+