ಜ್ಯೂಸ್ ಎಂದು ಆ್ಯಸಿಡ್ ಕುಡಿದ ಬಾಲಕರಿಬ್ಬರ ಸಾವು
ಬೆಂಗಳೂರು, ಸೆಪ್ಟೆಂಬರ್ 28: ಚಿನ್ನ ಕರಗಿಸುವ ಉದ್ದೇಶದಿಂದ ತಮ್ಮ ತಂದೆ ತಂದಿಟ್ಟಿದ್ದ ಸಲ್ಫೂರಿಕ್ ಆ್ಯಸಿಡ್ ಅನ್ನು ಜ್ಯೂಸ್ ಎಂದು ತಿಳಿದು ಕುಡಿದ ಬಾಲಕರಿಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ನಗರದ ಅವೆನ್ಯೂ ರಸ್ತೆಯ ಕಿಲಾರಿ ಮಾರ್ಕೆಟ್ ಬಳಿಯಲ್ಲಿ ನಡೆದಿದೆ.
ಮೃತರನ್ನು ಆರ್ಯನ್ ಸಿಂಗ್ (9), ಸಾಯಿಲ್ ಶಂಕರ್ (8) ಎಂದು ಗುರುತಿಸಲಾಗಿದೆ. ಇವರಲ್ಲಿ, ಸಾಯಿಲ್ ಶಂಕರ್ ಇಂದೇ (ಸೆ. 28) ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವವನಿದ್ದ. ಆದರೆ, ಇದೇ ದಿನ ಆತ ಸಾವನ್ನಪ್ಪಿದ್ದಾನೆ.

ಚಿನ್ನದ ಕುಸುರಿ ಕೆಲಸ ಮಾಡುತ್ತಿದ್ದ ಈ ಮಕ್ಕಳ ತಂದೆ ಸಲ್ಫ್ಯೂರಿಕ್ ಆ್ಯಸಿಡ್ ಅನ್ನು ತಂದು ಜ್ಯೂಸ್ ಬಾಟಲಿಯಲ್ಲಿ ಇರಿಸಿದ್ದರು. ಹಾಗಾಗಿಯೇ, ಇದನ್ನು ಜ್ಯೂಸ್ ಎಂದು ತಿಳಿದ ಇಬ್ಬರೂ ಬಾಲಕರು ಯಾರನ್ನೂ ಕೇಳದೆ ಕುಡಿದಿದ್ದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ.












Click it and Unblock the Notifications