ರಾಹುಲ್ ಹಣಿಯಲು ಜಯಂತಿ ಪತ್ರ ಸಾಕು : ಸ್ವಾಮಿ ಟ್ವೀಟ್
ಬೆಂಗಳೂರು, ಜ.30: ಗಾಂಧಿ ಕುಟುಂಬದ ಸಮೀಪವರ್ತಿ,ಪಕ್ಷದ ನಿಷ್ಠಾವಂತೆ ಮತ್ತು ಕೇಂದ್ರದ ಮಾಜಿ ಸಚಿವೆ ಜಯಂತಿ ನಟರಾಜನ್ ಪಕ್ಷ ತೊರೆಯುವುದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ಕಾಂಗ್ರೆಸ್ ನಾಯಕರು ನಗೆ ಪಾಟಲಿಗೆ ಗುರಿಯಾಗಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್‌ಗೆ ಭಾರೀ ಮುಜುಗರ ಸೃಷ್ಟಿಸಿದ್ದರೆ, ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆಗೊಳಪಟ್ಟಿದೆ.
ಯುಪಿಎ-2ರ ಅವಧಿಯಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆಯ ಸಚಿವರಾಗಿದ್ದ ಜಯಂತಿ ನಟರಾಜನ್ ಗಾಂಧಿ ಕುಟುಂಬದ ಅತ್ಯಂತ ನಿಷ್ಠಾವಂತೆಯಾಗಿದ್ದ ಕಾರಣಕ್ಕೆ ಸಚಿಸ್ಥಾನ ಸಿಕ್ಕಿತ್ತು.[ರಾಹುಲ್ ವಿರುದ್ಧ ಕಿಡಿಕಾರಿ ಕಾಂಗ್ರೆಸ್ ತೊರೆದ ಜಯಂತಿ]
ಅದರೆ, ಕಾರ್ಪೊರೇಟ್ ಕಂಪನಿಗಳ ಪರ ನಿಲ್ಲದೆ ಪರಿಸರವಾದಿಯಂತೆ ರಾಹುಲ್ ವಿರುದ್ಧ ತಿರುಗಿಬಿದ್ದಿದ್ದರು. ಸುಮಾರು ಐದು ಪುಟಗಳ ಪತ್ರದಲ್ಲಿ ಕಳೆದ 11 ತಿಂಗಳಿನಿಂದ ತಾವು ಅನುಭವಿಸುತ್ತಿರುವ ನೋವು, ಸಂಕಟ, ಪಕ್ಷದಲ್ಲಿ ಉಂಟಾಗುತ್ತಿರುವ ಅವಮಾನ, ಮುಜುಗರ ಸೇರಿದಂತೆ ಪ್ರತಿಯೊಂದು ಘಟನೆಗಳನ್ನು ಬಿಡಿಸಿಟ್ಟಿದ್ದರು. [ಜಯಂತಿ ನಟರಾಜನ್ ಯಾರು?]
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಭೇಟಿ ಸಾಧ್ಯವಾಗದ ಹಿನ್ನೆಲೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಪಕ್ಷ ತೊರೆಯುವುದಾಗಿ ಘೋಷಿಸಿದರು. ಈ ಎಲ್ಲಾ ಘಟನೆ ನಂತರವೂ ಕಾಂಗ್ರೆಸ್ ಹಿರಿಯ ನಾಯಕರನ್ನು ಸಮರ್ಥಿಸಿಕೊಳ್ಳುತ್ತಿರುವ ಮೋಯ್ಲಿ, ದಿಗ್ವಿಜಯ್ ಸಿಂಗ್ ರಂಥ ನಾಯಕರಿಗೆ ಸಾರ್ವಜನಿಕರು ಟ್ವಿಟ್ಟರ್ ನಲ್ಲಿ ಛೀಮಾರಿ ಹಾಕಿದ್ದಾರೆ.ರಾಜಕೀಯ ಮುಖಂಡರು, ಸಾರ್ವಜನಿಕರ ಪ್ರತಿಕ್ರಿಯೆಗಳ ಸಂಗ್ರಹ ಇಲ್ಲಿದೆ...

ಸೋನಿಯಾಗಾಂಧಿಗೆ ಬರೆದ ಪತ್ರ ಸಾಕು
ಕಾರ್ಪೋರೇಟ್ ವಿರುದ್ಧ ಲಾಬಿ ನಡೆಸಿರುವ ರಾಹುಲ್ ಗಾಂಧಿ ಅವರ ನಿಜ ಬಣ್ಣ ಬಯಲು ಮಾಡಲು ಅವರ ಜಯಂತಿ ಪತ್ರ ಸಾಕು ಎಂದು ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಎಎನ್ ಐ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
|
ಕಾಂಗ್ರೆಸ್ ಭ್ರಷ್ಟಾಚಾರದ ಬಣ್ಣ ಬಯಲು
ಕಾಂಗ್ರೆಸ್ ಭ್ರಷ್ಟಾಚಾರದ ಬಣ್ಣ ಬಯಲು ಮಾಡಲು ಸುಜಾತಾ ಅವರ ನೆರವು ಬೇಕಾದರೆ ಪಡೆದುಕೊಳ್ಳುವೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಲು ಸುಜಾತಾ ಅವರು ರಾಹುಲ್ ವಿರುದ್ಧ ಬರೆದಿರುವ ಪತ್ರ ನೆರವಾಗಲಿದೆ ಎಂದು ಸುಬ್ರಮಣ್ಯ ಸ್ವಾಮಿ ಹೇಳಿದ್ದಾರೆ.
| Array |
ಮಾಜಿ ಸಚಿವ ವೀರಪ್ಪ ಮೊಯ್ಲಿರಿಂದ ಸಮರ್ಥನೆ
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಎಂದಿಗೂ ಯಾರಿಗೂ ಕೇಡು ಬಯಸಿಲ್ಲ. ಸುಜಾತಾ ಅವರು ನಿಭಾಯಿಸುತ್ತಿದ್ದ ಪರಿಸರ ಖಾತೆಯಲ್ಲಿ ಮೂಗು ತೂರಿಸಿಲ್ಲ ಎಂದು ಮೋಯ್ಲಿ ಸಮರ್ಥನೆ ನೀಡಿದ್ದಾರೆ.
| Array |
ಮೊಯ್ಲಿ ಸಮರ್ಥನೆಗೆ ಸಾರ್ವಜನಿಕರ ಪ್ರತಿಕ್ರಿಯೆ
ಮೊಯ್ಲಿ ಸಮರ್ಥನೆಗೆ ಸಾರ್ವಜನಿಕರ ಪ್ರತಿಕ್ರಿಯೆ ಹರಿದು ಬರುತ್ತಿದ್ದು, ಜೋಕ್ ಆಫ್ ದಿ ಡೇ, ಪಿಜೆ ಆಫ್ ದಿ ಸೆಂಚುರಿ ಎಂದು ಗೇಲಿ ಮಾಡುತ್ತಿದ್ದಾರೆ.
|
ಜಯಂತಿ ಕಾಂಗ್ರೆಸ್ ಗೆ ದ್ರೋಹ ಬಗೆದಿದ್ದಾರೆ
ಜಯಂತಿ ಕಾಂಗ್ರೆಸ್ ಗೆ ದ್ರೋಹ ಬಗೆದಿದ್ದಾರೆ. ವಕ್ತಾರೆಯಾಗಿದ್ದು ಮೋದಿ ವಿರುದ್ಧ ಸ್ಕೂಪ್ ಗೇಟ್ ಪ್ರಕರಣದ ಬಗ್ಗೆ ಮಾತನಾಡಲು ನಿರಾಕರಿಸಿದ್ದೇಕೆ ಎಂದು ಅಭಿಷೇಕ್ ಸಿಂಘ್ವಿ ಪ್ರಶ್ನಿಸಿದ್ದಾರೆ.












Click it and Unblock the Notifications