ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ದಾಳಿ, ಗುಜರಾತ್ ಶಾಸಕರಿಗೆ ಇಟಲಿಯೇ ಸೇಫ್!

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 02: ಗುಜರಾತ್ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿರುವ ಈಗಲ್ ಟನ್ ಗಾಲ್ಫ್ ರೆಸಾರ್ಟ್ ಮೇಲೆ ಬುಧವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬಂದಿರುವ ಪ್ರತಿಕ್ರಿಯೆಗಳು ಇಲ್ಲಿವೆ...

ಈಗಲ್ ಟನ್ ರೆಸಾರ್ಟ್ ಗೆ 982 ಕೋಟಿ ದಂಡ ಹಾಕಿದ್ದು ಏಕೆ? ಈಗಲ್ ಟನ್ ರೆಸಾರ್ಟ್ ಗೆ 982 ಕೋಟಿ ದಂಡ ಹಾಕಿದ್ದು ಏಕೆ?

ನಂತರ ಕರ್ನಾಟಕದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ನಿವಾಸದ ಮೇಲೆಯೂ ದಾಳಿ ನಡೆಸಲಾಗಿದೆ. ಆದರೆ, ಈ ದಾಳಿಗೂ ಗುಜರಾತ್ ಶಾಸಕರಿಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ಸಿಕ್ಕಿದೆ.

ಡಿಕೆ ಶಿವಕುಮಾರ್ ಸಂಕ್ಷಿಪ್ತ ಪರಿಚಯಡಿಕೆ ಶಿವಕುಮಾರ್ ಸಂಕ್ಷಿಪ್ತ ಪರಿಚಯ

ಆದರೆ, ಟ್ವಿಟ್ಟರ್ ನಲ್ಲಿ ಡಿಕೆ ಶಿವಕುಮಾರ್ ಗಿಂತ ಗುಜರಾತ್ ಕಾಂಗ್ರೆಸ್ ಶಾಸಕರ ಕಥೆ ಏನು? ಎಂಬುದರ ಬಗ್ಗೆ ಟ್ವಿಟ್ಟಿಗರು ಹೆಚ್ಚು ಆಸಕ್ತರಾಗಿದ್ದಾರೆ.

ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ : 10 ಬೆಳವಣಿಗೆ ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ : 10 ಬೆಳವಣಿಗೆ

ಗುಜರಾತ್ ಕಾಂಗ್ರೆಸ್ ಶಾಸಕರ ವಾಸ್ತವ್ಯದ ವ್ಯವಸ್ಥೆಯನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ, ಅವರ ನಿವಾಸ ಮೇಲೆ ದಾಳಿ ನಡೆಸಲಾಗಿದೆ. ಸುಮಾರು 20 ಅಧಿಕಾರಿಗಳ ತಂಡ ಡಿ.ಕೆ.ಶಿವಕುಮಾರ್ ಅವರ ಕನಕಪುರ ನಿವಾಸ, ಬೆಂಗಳೂರಿನ ಸದಾಶಿವನಗರದ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.

ಡಿಕೆಶಿ ಮೇಲೆ ಐಟಿ ದಾಳಿ

ಡಿಕೆಶಿ ಮೇಲೆ ಐಟಿ ದಾಳಿ

ಗುಜರಾತ್ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿರುವ ಈಗಲ್ ಟನ್ ಗಾಲ್ಫ್ ರೆಸಾರ್ಟ್ ಮೇಲೆ ಬುಧವಾರ ಬೆಳಗ್ಗೆ ಐಟಿ ದಾಳಿ ನಡೆಸಿದೆ. ಕರ್ನಾಟಕದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ನಿವಾಸದ ಮೇಲೆಯೂ ದಾಳಿ ನಡೆಸಲಾಗಿದೆ. ಆದರೆ, ಐಟಿ ದಾಳಿ ಹಿಂದಿನ ಉದ್ದೇಶ ಇನ್ನೂ ನಿಗೂಢವಾಗಿದೆ.

ಶಾಸಕರಿಗೆ ಸಂಬಂಧವಿಲ್ಲ

ಡಿಕೆ ಶಿವಕುಮಾರ್ ಮೇಲೆ ನಡೆದಿರುವ ಐಟಿ ದಾಳಿಗೂ ಗುಜರಾತ್ ಶಾಸಕರಿಗೂ ಸಂಬಂಧವಿಲ್ಲ ಎಂಬ ಸುದ್ದಿ ಬಂದಿದೆ. ಆದರೆ, ರಾಜ್ಯಸಭಾ ಚುನಾವಣೆ ಹಿನ್ನಲೆಯಲ್ಲಿ ಶಾಸಕರನ್ನು ಬೆದರಿಸಲು ಈ ತಂತ್ರ ಹೂಡಲಾಗಿದೆ ಎಂಬ ಮಾತು ಇದೆ. ಶಾಸಕರಲ್ಲಿ ಗೊಂದಲ ಮೂಡಿರುವುದಂತೂ ನಿಜ.

ಇಟಲಿಯೇ ದಿಕ್ಕು

ಬೆಂಗಳೂರಿನಲ್ಲಿ ಸುರಕ್ಷಿತ ಎಂದು ಬಂದಿದ್ದ ಗುಜರಾತಿನ ಶಾಸಕರು ಈಗ ಐಟಿ ದಾಳಿಯಿಂದ ಬೆದರಿದ್ದಾರೆ. ಈಗ ಈ ಶಾಸಕರಿಗೆ ಇಟಲಿಯೇ ದಿಕ್ಕು.

ಏನು ಪ್ರಯೋಜನ?

ಯುವಕರಿಗೆ ಉದ್ಯೋಗ ಕೊಡಲಾಗದ ಸರ್ಕಾರಗಳು, ಐಟಿ, ಸಿಬಿಐ ದಾಳಿ ನಡೆಸಿ ಏನು ಪ್ರಯೋಜನ?

ರಾಜ್ಯ ಸರ್ಕಾರ ವಿಫಲ

ರಾಜ್ಯ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ವಿಫಲವಾಗಿದೆ.

English summary
The Income Tax department is conducting raids at the Eagleton Golf resort near Bengaluru in which the Gujarat MLAs are staying. Around 10 officers of the IT department are conducting the raids at Eagleton with the protection from the Central Reserve Police Force. Here are the twitter reaction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X