• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರವಾಸ ಪ್ರಿಯರ ಮನಗೆದ್ದ ಬೆಂಗಳೂರಿನ ಟ್ರಾವೆಲ್ ಟ್ರೇಡ್ ಫೇರ್

|

ಬೆಂಗಳೂರು, ಫೆಬ್ರವರಿ 09: ದೇಶದ ಅತಿದೊಡ್ಡ ಟ್ರಾವೆಲ್ ಟ್ರೇಡ್ ಫೇರ್ ನಗರದ ಅರಮನೆ ಮೈದಾನದ ತ್ರಿಪುರಾವಾಸಿನಿಯಲ್ಲಿ ಕಳೆದ ಮೂರು ದಿನಗಳಿಂದ ನಡೆದಿದ್ದು, ಈ ಉತ್ಸವವು ಫೆಬ್ರವರಿ 9 ರಂದು ಅಂತ್ಯಕಂಡಿದೆ.

ಕಳೆದ 30 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಟ್ರಾವೆಲ್ ಟ್ರೇಡ್ ಫೇರ್ (ಟಿಟಿಎಫ್)ನ ಪ್ರಮುಖ ಉದ್ದೇಶ ದೇಶಾದ್ಯಂತ ಮತ್ತು ವಿದೇಶಗಳ ಟ್ರಾವೆಲ್ ಏಜೆನ್ಸಿಗಳು, ಪ್ರವಾಸೋದ್ಯಮ ಇಲಾಖೆಗಳು-ಸಂಸ್ಥೆಗಳು ಸೇರಿದಂತೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ತಮ್ಮ ಸೇವೆಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವುದಾಗಿದೆ.

ಭರಚುಕ್ಕಿಯಲ್ಲಿ ಬಯೋ ಡೈವರ್ಸಿಟಿ ಪಾರ್ಕ್‌; ಏನೇನೆಲ್ಲಾ ಇರುವುದಿಲ್ಲಿ?

ಬೆಂಗಳೂರಿನಲ್ಲಿ ಆರಂಭವಾಗಿರುವ ದಕ್ಷಿಣ ಭಾರತದ ಅತಿದೊಡ್ಡ ಪ್ರವಾಸೋದ್ಯಮ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಈ ಟಿಟಿಎಫ್‍ನಲ್ಲಿ 10 ದೇಶಗಳು ಮತ್ತು ಭಾರತದ 23 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 200 ಕ್ಕೂ ಹೆಚ್ಚು ಪ್ರದರ್ಶನಕಾರರು ಪಾಲ್ಗೊಂಡಿದ್ದರು.

ಈ ಮೂರು ದಿನಗಳ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವಾಲಯ, ವಿವಿಧ ರಾಜ್ಯಗಳ ಪ್ರವಾಸೋದ್ಯಮ ಮಂಡಳಿಗಳು, ರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆಗಳು, ಖಾಸಗಿ ಪೂರೈಕೆದಾರ ಸಂಸ್ಥೆಗಳು ಮತ್ತು ವಾಣಿಜ್ಯ ಸಂಘಗಳು ಸಹಕಾರ ನೀಡುತ್ತಿವೆ. ಈ ಫೇರ್ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರವಾಸೋದ್ಯಮ ಕ್ಷೇತ್ರದ ಸಂಸ್ಥೆಗಳು ಒಂದೇ ಸೂರಿನಡಿ ಜಗತ್ತಿನ ನಾನಾ ಭಾಗಗಳ ಪ್ರವಾಸೋದ್ಯಮ ಸಂಸ್ಥೆಗಳನ್ನು ಸಂಪರ್ಕಿಸಲು ನೆರವಾಗುತ್ತದೆ.

ಕರ್ನಾಟಕ ರಾಜ್ಯವು ಆತಿಥ್ಯ ವಹಿಸಿದೆ

ಕರ್ನಾಟಕ ರಾಜ್ಯವು ಆತಿಥ್ಯ ವಹಿಸಿದೆ

ಶ್ರೀಲಂಕಾ ಮತ್ತು ನೇಪಾಳ ದೇಶಗಳ ಪ್ರವಾಸೋದ್ಯಮ ಸಂಸ್ಥೆಗಳು, ಭಾರತದ ಗುಜರಾತ್, ಒಡಿಶಾ ಮತ್ತು ಗೋವಾ ರಾಜ್ಯಗಳು ಈ ಟಿಟಿಎಫ್‍ಗೆ ಪಾಲುದಾರ ರಾಜ್ಯಗಳಾಗಿದ್ದು, ಕರ್ನಾಟಕ ರಾಜ್ಯವು ಆತಿಥ್ಯ ವಹಿಸಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರಾಟಗಾರರು ತಮ್ಮ ಪ್ರಯಾಣ ಮತ್ತು ಪ್ರವಾಸೋದ್ಯಮದ ಸೇವೆಗಳ ಬಗ್ಗೆ ಪೂರಕ ಮಾಹಿತಿಗಳನ್ನು ನೀಡುತ್ತಿದ್ದಾರೆ. ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಒಡಿಶಾ ಮತ್ತು ತ್ರಿಪುರ ಸೇರಿದಂತೆ ವಿವಿಧ ರಾಜ್ಯಗಳ ಪ್ರವಾಸೋದ್ಯಮ ಮಂಡಳಿಗಳು ಪಾಲ್ಗೊಳ್ಳುವ ಮೂಲಕ ಈ ಉತ್ಸವಕ್ಕೆ ಮೆರಗು ತಂದಿವೆ.

ಹೊಟೇಲ್ ಬ್ರ್ಯಾಂಡ್‍ಗಳೂ ಸಹ ಪಾಲ್ಗೊಂಡಿವೆ

ಹೊಟೇಲ್ ಬ್ರ್ಯಾಂಡ್‍ಗಳೂ ಸಹ ಪಾಲ್ಗೊಂಡಿವೆ

ಇದಲ್ಲದೇ, ಅಸ್ಸಾಂ, ದೆಹಲಿ, ಹರ್ಯಾಣ, ಲಡಾಖ್, ಮಹಾರಾಷ್ಟ್ರ, ಪಾಂಡಿಚೆರಿ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳೂ ಸಹ ಈ ಮೇಳದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿವೆ.

ಕಾರವಾರ ಕಡಲ ತೀರದಲ್ಲಿ ಕ್ಷೀಣಿಸುತ್ತಿವೆ "ಸೀಬರ್ಡ್' ಪಕ್ಷಿಗಳು

ನ್ಯಾಷನಲ್ ಟೂರಿಸ್ಟ್ ಆರ್ಗನೈಸೇಷನ್ಸ್ ಆಫ್ ಇಂಡಿಯಾ, ಶ್ರೀಲಂಕಾ ಮತ್ತು ನೇಪಾಳವಲ್ಲದೇ, ಭೂತಾನ್, ಚೀನಾ, ಫಿಲಿಪೈನ್ಸ್, ಸ್ವಿಟ್ಜರ್ಲೆಂಡ್, ಥೈಲ್ಯಾಂಡ್, ಯುಎಸ್‍ಎ ಮತ್ತು ಯುಎಇ ದೇಶಗಳನ್ನು ಡೆಸ್ಟಿನೇಷನ್ ಮ್ಯಾನೇಜ್‍ಮೆಂಟ್ ಕಂಪನಿಸ್(ಡಿಎಂಸಿಗಳು) ಮತ್ತು ಹಲವಾರು ಟ್ರಾವೆಲ್ ಆಪರೇಟರ್ ಗಳು ಹಾಗೂ ಹೊಟೇಲ್ ಬ್ರ್ಯಾಂಡ್‍ಗಳೂ ಸಹ ಪಾಲ್ಗೊಂಡಿವೆ.

ಮೇಕ್‍ಮೈಟ್ರಿಪ್ ಹಾಲಿಡೇ ಪಾರ್ಟ್ನರ್

ಮೇಕ್‍ಮೈಟ್ರಿಪ್ ಹಾಲಿಡೇ ಪಾರ್ಟ್ನರ್

ಈ ಟಿಟಿಎಫ್ ಬೆಂಗಳೂರಿಗೆ ಮೇಕ್‍ಮೈಟ್ರಿಪ್ ಹಾಲಿಡೇ ಪಾರ್ಟ್ನರ್ ಆಗಿದೆ. ಫೆಬ್ರವರಿ 8 ರ ಮಧ್ಯಾಹ್ನ 2 ರವರೆಗೆ ಟ್ರಾವೆಲ್ ಟ್ರೇಡ್ ವಿಸಿಟರ್ ಗಳಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿತ್ತು. ಫೆಬ್ರವರಿ 9 ಅಂದರೆ ಭಾನುವಾರ ಇಡೀ ದಿನ ಈ ಮೇಳಕ್ಕೆ ಎಲ್ಲರಿಗೂ ಪ್ರವೇಶ ಅವಕಾಶವನ್ನು ಕಲ್ಪಿಸಲಾಗಿತ್ತು. ಟ್ರಾವೆಲ್ ನ್ಯೂಸ್ ಡೈಜೆಸ್ಟ್ ಈ ಮೇಳದ ಅಧಿಕೃತ ಪ್ರಚಾರ ಸಂಸ್ಥೆಯಾಗಿದೆ. ಫೇರ್ ಫೆಸ್ಟ್ ಮೀಡಿಯಾ ಲಿಮಿಟೆಡ್, ಟಿಟಿಎಫ್‍ನ ಆಯೋಜಕರು, ಒಟಿಎಂ ಮತ್ತು ಬಿಎಲ್‍ಟಿಎಂ ಬ್ರ್ಯಾಂಡೆಡ್ ಟ್ರಾವೆಲ್ ಶೊಗಳನ್ನು ಆಯೋಜಿಸಲಾಗಿತ್ತು.

ಈ ಮೇಳಕ್ಕೆ ಬೆಂಬಲ ನೀಡಿದ ಸಂಸ್ಥೆಗಳು

ಈ ಮೇಳಕ್ಕೆ ಬೆಂಬಲ ನೀಡಿದ ಸಂಸ್ಥೆಗಳು

ಇನ್‍ಕ್ರೆಡಿಬಲ್ ಇಂಡಿಯಾ, ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಟಿಎಎಐ), ಔಟ್‍ಬೌಂಡ್ ಟೂರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಒಟಿಒಎಐ), ದಿ ಇವೆಂಟ್ ಅಂಡ್ ಎಂಟರ್‍ಟೇನ್‍ಮೆಂಟ್ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್(ಇಇಎಂಎ), ಅಡ್ವೆಂಚರ್ ಟೂರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಟಿಒಎಐ), ಸೌತ್ ಇಂಡಿಯಾ ಗ್ಲೋಬಲ್ ಟೂರ್ ಆಪರೇಟರ್ಸ್ ಅಸೋಸಿಯೇಷನ್ (ಎಸ್‍ಐಜಿಟಿಒಎ), ಟ್ರಾವೆಲ್ ಏಜೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಟಿಎಎಫ್‍ಐ), ಅಸೋಸಿಯೇಷನ್ ಆಪ್ ಡೊಮೆಸ್ಟಿಕ್ ಟೂರ್ ಆಪರೇಟರ್ಸ್ ಆಫ್ ಇಂಡಿಯಾ(ಎಡಿಟಿಒಐ), ಇಂಡಿಯನ್ ಅಸೋಸಿಯೇಷನ್ ಆಫ್ ಟೂರ್ ಆಪರೇಟರ್ಸ್(ಐಎಟಿಒ) ಐಎಟಿಎ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಐಎಎಐ), ಎಸ್‍ಕೆಎಲ್ ಇಂಟರ್ ನ್ಯಾಷನಲ್ ಅಂಡ್ ಎಂಟರ್‍ಪ್ರೈಸಿಂಗ್ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್(ಇಟಿಎಎ) ಸಂಸ್ಥೆಗಳು ಈ ಮೇಳಕ್ಕೆ ಬೆಂಬಲವನ್ನು ನೀಡುತ್ತಿವೆ.

English summary
India’s leading exhibition for the travel & tourism industry. The show will be held on 07 – 09 February, 2020 in Bengaluru, India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X