5,00,000 ಐಟಿ ಉದ್ಯೋಗಿಗಳು ದಿಢೀರ್ ಕೆಲಸ ಕಳೆದುಕೊಳ್ಳುವ ಭೀತಿ... IT Jobs
ಕನ್ನಡಿಗರ ರಾಜಧಾನಿ ಬೆಂಗಳೂರು ಐಟಿ ತವರು ಅಂತಾ ಪ್ರಪಂಚದ ಮೂಲೆ ಮೂಲೆಯಲ್ಲೂ ಭಾರಿ ಸೌಂಡ್ ಮಾಡುತ್ತಿದೆ. ಅದರಲ್ಲೂ ಇಂಡಿಯಾದ ಮುಕ್ಕಾಲು ಭಾಗ ಐಟಿ ಕಂಪನಿಗಳು ಬೆಂಗಳೂರಿನಲ್ಲೇ ಮನೆ ಮಾಡಿಕೊಂಡಿವೆ. ಹೀಗಾಗಿ ಲಕ್ಷ ಲಕ್ಷ ಐಟಿ ಉದ್ಯೋಗಿಗಳು ನಮ್ಮ ಬೆಂಗಳೂರಲ್ಲೇ ಕೆಲಸವನ್ನ ಮಾಡ್ತಿದ್ದಾರೆ, ಅದರಲ್ಲೂ ಲಕ್ಷಾಂತರ ಕನ್ನಡಿಗರಿಗೆ ಕೂಡ ಹೀಗೆ ಕೆಲಸ ಕೊಟ್ಟಿವೆ ದೊಡ್ಡ ದೊಡ್ಡ ಐಟಿ ಕಂಪನಿಗಳು. ಆದರೆ ಈಗ, ದಿಢೀರ್ 5,00,000 ಐಟಿ ಉದ್ಯೋಗಿಗಳು ದಿಢೀರ್ ಕೆಲಸ ಕಳೆದುಕೊಳ್ಳುವ ಭೀತಿ...
ಭಾರತದ ಐಟಿ ಉದ್ಯಮಕ್ಕೆ ಕರ್ನಾಟಕದ ಕೊಡುಗೆ ಅಪಾರ, ಏಕೆಂದರೆ ನಮ್ಮ ಕನ್ನಡ ನಾಡಲ್ಲೇ ಲಕ್ಷ ಲಕ್ಷ ಐಟಿ ಕಂಪನಿ ಹುಟ್ಟಿವೆ. ಐಟಿ ತವರು ನಮ್ಮ ಬೆಂಗಳೂರು ಆಗಿದ್ದು, ಹೀಗಿದ್ದಾಗಲೇ ಐಟಿ ಕ್ಷೇತ್ರ ಬೆಳೆಸಲು ಯುವಕರ ಪಾತ್ರವೂ ದೊಡ್ಡದು. ಹೀಗಾಗಿ ಕರ್ನಾಟಕ ಸರ್ಕಾರ ಕೂಡ ಐಟಿ ಉದ್ಯಮಗಳ ಬೆಳವಣಿಗೆ & ಅಭಿವೃದ್ಧಿಗೆ ಲಕ್ಷಾಂತರ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಮತ್ತೊಂದು ಕಡೆ, ಭವಿಷ್ಯದಲ್ಲಿ ತಮ್ಮ ಜೀವನ ಉತ್ತಮವಾಗಿ ಇರಲಿ ಅಂತಾ ಲಕ್ಷಾಂತರ ಯುವಕರು ಐಟಿ ಕ್ಷೇತ್ರದ ಕುರಿತು ಕೋರ್ಸ್ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ.

5,00,000 ಐಟಿ ಉದ್ಯೋಗಿಗಳು...
ಎಚ್1ಬಿ ವೀಸಾ ಅಂದ್ರೆ ಒಂದು ದೊಡ್ಡ ಮಟ್ಟಿಗೆ ನಿರೀಕ್ಷೆ ಇಟ್ಟುಕೊಂಡು ಭಾರತೀಯರು ಕಾಯುತ್ತಾ ಇರುತ್ತಾರೆ. ಆದರೆ ಇದೀಗ ಇದೇ ಎಚ್1ಬಿ ವೀಸಾ ಅರ್ಥಾತ್ ಕೆಲಸದ ವೀಸಾ ಮೇಲೆ ಭರ್ಜರಿ 1,00,000 ಯುಎಸ್ ಡಾಲರ್ ಅಂದ್ರೆ ಸುಮಾರು 88,00,000 ರೂಪಾಯಿ ಮೀರಿ ಶುಲ್ಕ ವಿಧಿಸುವ ಕುತಂತ್ರದ ಈ ಯೋಜನೆಗೆ ಸಹಿ ಹಾಕಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಹೀಗೆ ಭಾರತದ ವಿರುದ್ಧ ಭಾರಿ ಕುತಂತ್ರ ಮಾಡಿಯೇ ಟ್ರಂಪ್ ಸರ್ಕಾರವು ಶುಲ್ಕ ಏರಿಕೆ ಮಾಡಿದೆ ಎಂಬ ಆರೋಪದ ನಡುವೆ, ಈಗಿನ ನಿರ್ಧಾರದ ಪರಿಣಾಮ 5,00,000 ಐಟಿ ಉದ್ಯೋಗಿಗಳು ದಿಢೀರ್ ಕೆಲಸ ಕಳೆದುಕೊಳ್ಳುವ ಭೀತಿ ಕೂಡ ಆವರಿಸಿದೆ.
ಭಾರತದ ಯುವಕರಿಗೆ ಭಾರಿ ಆಘಾತ...
ಹೌದು, ಇದೀಗ ಡೊನಾಲ್ಡ್ ಟ್ರಂಪ್ ನಿರ್ಧಾರದ ಪರಿಣಾಮ 5,00,000 ಐಟಿ ಉದ್ಯೋಗಿಗಳು ದಿಢೀರ್ ಕೆಲಸ ಕಳೆದುಕೊಳ್ಳುವ ಭೀತಿ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಭಾರತ ಮೂಲದಿಂದ ವಿದೇಶಗಳಿಗೆ ಸೇವೆ ನೀಡುತ್ತಿರುವ ಕಂಪನಿಗಳಲ್ಲಿ ಭಾರಿ ದೊಡ್ಡ ಉದ್ಯೋಗ ಕಡಿತವು ಸಂಭವಿಸುತ್ತಾ? ಎಂಬ ಚಿಂತೆ ಶುರುವಾಗಿದೆ. ಮತ್ತೊಂದು ಕಡೆ ಇದು ಅಸಾಧ್ಯ ಎಂಬ ಅಭಿಪ್ರಾಯ ಕೂಡ ಇದೀಗ ಕೇಳಿಬಂದಿದೆ. ಇನ್ನೊಂದು ಕಡೆ ಅಮೆರಿಕದಲ್ಲಿ ಕೆಲಸ ಮಾಡಬೇಕು ಅಂತಾ ಕನಸು, ಆಸೆ ಇಟ್ಟುಕೊಂಡಿದ್ದ ಭಾರತದ ಕೋಟ್ಯಂತರ ಯುಕವರಿಗೆ ದೊಡ್ಡ ಆಘಾತವೇ ಎದುರಾಗಿದೆ.












Click it and Unblock the Notifications