ಜೀವನ ಉತ್ಸಾಹಿ ಕವಿ ಎಚ್ಚೆಸ್ವಿಗೆ ಹುಟ್ಟುಹಬ್ಬದ ಹಾರೈಕೆ
ಕನ್ನಡದ ಹೆಸರಾಂತ ಕವಿ ಎಚ್.ಎಸ್ ವೆಂಕಟೇಶ ಮೂರ್ತಿ ಅವರ ಹುಟ್ಟುಹಬ್ಬದ ನಿಮಿತ್ತ ಸಂಗೀತಗಾರ ಉಪಾಸನಾ ಮೋಹನ್ ಅವರು ಬರೆದಿರುವ ಆತ್ಮೀಯ ನುಡಿಗಳು ಇಲ್ಲಿವೆ ತಪ್ಪದೇ ಓದಿ...
ಸುಗಮ ಸಂಗೀತ ಕ್ಷೇತ್ರದಲ್ಲಿ ಕಳೆದ ದಶಕದಿಂದ ನಾನು ಗಮನಿಸುತ್ತಾ ಬಂದಂತೆ ನಮ್ಮಲ್ಲಿ ಬಹುತೇಕ ಕವಿಗಳು ಭಾವಗೀತೆಗಳನ್ನು ಬರೆಯುವಲ್ಲಿ ಯಾಕೋ ಮಂಕಾದಂತೆ ತೋರುತ್ತಾರೆ. ಕೆಲವರಂತೂ ಕವಿತೆ ಬರೆಯುವುದನ್ನೆ ನಿಲ್ಲಿಸಿಬಿಟ್ಟಿದ್ದಾರೆ. ಅವರಿಗೆ ಸಾಕಾಗಿ ಹೋದಂತೆ ತೋರುತ್ತದೆ. ನನ್ನಂತ ಕೆಲವು ಸಂಗೀತ ನಿರ್ದೇಶಕರ ಬಲವಂತಕ್ಕೆ ಒಂದೋ ಎರಡೋ ಕವಿತೆಗಳನ್ನು ಬರೆದದ್ದೂ ಇದೆ.
ಅದರೂ ಅವರ ಆರಂಭದ ದಿನಗಳಲ್ಲಿದ್ದ ಆಸಕ್ತಿ ಇಂದು ಕಡಿಮೆಯಾಗಿರುವುದಂತೂ ನಿಜ. ಭಾವಗೀತೆಗಳಿಗಾಗಿ ಹೋರಾಟ ಮಾಡಿ ಶ್ರೇಷ್ಠತೆಯನು ತಂದ ಇಂಥವರೇ ಇಂದು ಸುಮ್ಮನೆ ಇರುವುದು ಸುಗಮ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವೇ ಸರಿ.
ಕವಿತೆಗಳು ಸುಖಾಸುಮ್ಮನೆ ಹುಟ್ಟುವಂಥದ್ದಲ್ಲ ಇದು ನನಗೂ ತಿಳಿದಿದೆ, ಕವಿತೆಗಳು ಹುಟ್ಟುವುದಕ್ಕೆ ಮುನ್ನ ಮನಸನ್ನು ಹದಗೊಳಿಸಿದರೆ ಖಂಡಿತ ಕವಿತೆಗಳು ಆಕಾರ ಪಡೆಯುತ್ತವೆ. ಇಂದು ಕವಿಗಳು ಜನಮಾನಸದಲ್ಲಿ ನೆಲೆಯೂರಿದ್ದರೆ ಅದರ ಸಿಂಹಪಾಲು ಭಾವಗೀತೆಯದ್ದಾಗಿದೆ.

ಈ ಅಪವಾದಕ್ಕೆ ಹೊರತಾಗಿ ನಾನು ಕಂದ ಕ್ರಿಯಾಶೀಲ ಕವಿಗಳಲ್ಲಿ ಬಹು ಮುಖ್ಯರು ಎಚ್ಚೆಸ್ವಿ. ಇವರ ಬತ್ತಳಿಕೆಯಿಂದ ನೂರಾರು ಕವಿತೆಗಳು ನಿರಂತರವಾಗಿ ಹೊರ ಬರುತ್ತಲೇ ಇವೆ. ಬೇರೆ ಪ್ರಕಾರದ ಸಾಹಿತ್ಯದಲ್ಲೂ ತಮ್ಮ ಹಿರಿಮೆಯನ್ನು ಮೆರೆಯುತ್ತಾ ಭಾವಗೀತೆಗಳ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿರುವ ಕೆಲವೇ ಕೆಲವು ಕವಿಗಳಲ್ಲಿ ಎಚ್ಚೆಸ್ವಿ ಮೊದಲಿಗರು.
ಸುಗಮ ಸಂಗೀತದ ಸಣ್ಣ ಸಣ್ಣ ಸಮಾರಂಭಗಳಲ್ಲಿ ತಮ್ಮ ಪಾತ್ರವಿಲ್ಲದಿದ್ದರೂ ಕೇಳುಗರಾಗಿ ಭಾಗವಹಿಸಿ ಕಲಾವಿದರನ್ನು ಉತ್ತೇಜಿಸುವವರಲ್ಲೂ ಎಚ್ಚೆಸ್ವಿ ಅಗ್ರೇಸರರು, ಯುವ ಹಾಗೂ ಹಿರಿಯ ಕಲಾವಿದರನ್ನು ಸದಾ ಪ್ರೀತಿಯಿಂದ ತಮ್ಮ ತೆಕ್ಕೆಗೆ ಸೇರಿಸಿಕೊಳ್ಳುವ ಸಹೃದಯಿ.
ನಾನು ಬಹುತೇಕ ಕವಿಗಳ ಒಡನಾಟದಲ್ಲಿ ಸದಾ ಇರುವ ವ್ಯಕ್ತಿ. ನನಗೆ ಎಚ್ಚೆಸ್ವಿ ಎಲ್ಲರಿಗಿಂತ ಭಿನ್ನರಾಗಿ ತೋರುತ್ತಾರೆ. ಇವರಲ್ಲಿರುವ ಉತ್ಸಾಹ, ಸ್ನೇಹಪರತೆ, ವೃತ್ತಿಪರತೆ, ಸಮಯಪ್ರಜ್ಞೆ ನಮ್ಮಂಥ ಯುವಕರನ್ನೂ ನಾಚಿಸುತ್ತದೆ. ಸದಾ ಸಾಹಿತ್ಯದ ಕೃಷಿಯಲ್ಲಿ ತೊಡಗಿಕೊಂಡೇ ಇರುತ್ತಾರೆ. ನಾವಿಬ್ಬರು ಅದೆಷ್ಟೋ ಬಾರಿ ಸುಗಮ ಸಂಗೀತ ಕ್ಷೇತ್ರದ ಆಗು ಹೋಗುಗಳ ಬಗ್ಗೆ ಹಾಗೂ ಮುಂದಿನ ಸವಾಲುಗಳ ಬಗ್ಗೆ ಚಿಂತನೆ ನಡೆಸುವಾಗ ಅವರು ತೋರುವ ಕಾಳಜಿ ನನಗೆ ಆಪ್ತವಾಗುತ್ತದೆ.
ಹೊಸ ಹೊಸ ಕವಿತೆಗಳಿಗೆ ರಾಗ ಸಂಯೋಜಿಸಿ, ಪ್ರತಿಭಾನ್ವಿತ ಗಾಯಕ-ಗಾಯಕಿಯರನ್ನು ಪ್ರೋತ್ಸಾಹಿಸುವಂತೆ ಸದಾ ಕಿವಿ ಹಿಂಡಿತ್ತಿರುತ್ತಾರೆ. ಕ್ಷೇತ್ರ ನಿಂತ ನೀರಾಗದಂತೆ ನೋಡಿಕೊಳ್ಳುವುದರ ಬಗ್ಗೆ ಆಗಾಗ ನಮ್ಮನ್ನು ಎಚ್ಚರಿಸುತ್ತಲೆ ಇರುತ್ತಾರೆ. ಇವರೊಂದಿಗೆ ವಿದೇಶ ಪ್ರವಾಸದಲ್ಲಿ ಕಳೆದ ಕ್ಷಣಗಳಂತೂ ಅವಿಸ್ಮರಣೀಯ.
ನಾ ಕಂಡಂತೆ ಎಚ್ಚೆಸ್ವಿ ಅವರು ಎಲ್ಲರನ್ನೂ, ಎಲ್ಲವನ್ನೂ ಇಷ್ಟಪಡುವ ಹಾಗೆ ಜೀವನದ ಪ್ರತಿ ಕ್ಷಣವನ್ನು ಅನುಭವಿಸುವಂಥ ಜೀವನೋತ್ಸಾಹಿ. "ಪ್ರತಿ ನಿಮಿಷಕ್ಕೆ ಬೆಲೆ ಇರುವ ಹಾಗೆ ಪ್ರತಿ ಜೀವಿಗೂ ಬೆಲೆ ಇದೆ" ಎಂಬುದು ಇವರ ಸಿದ್ಧಾಂತ ಆದ್ದರಿಂದಲೇ ಇವರು 'ಜನ ಪ್ರೀತಿಯ ಕವಿ' ಯಾಗಿದ್ದಾರೆ.
ಎಚ್ಚೆಸ್ವಿ ಅವರ ರಚನೆಯ 'ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ.. ಹಾಡು ಎಂ.ಡಿ ಪಲ್ಲವಿ ಅವರ ದನಿಯಲ್ಲಿ ಕೇಳಿ...
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications