ಸಿಎಎಫ್ ಸಲ್ಲಿಸದಿದ್ದರೆ ಕೇಬಲ್ ಸಂಪರ್ಕ ಕಟ್

ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಕರ್ನಾಟಕ-ಕೇರಳ ವಿಭಾಗ ಸಲಹೆಗಾರ ಡಾ. ಸಿಬಿಚ್ಚನ್ ಕೆ.ಮ್ಯಾಥ್ಯೂ ಗ್ರಾಹಕ ಅರ್ಜಿ ನಮೂನೆ ಅರ್ಜಿಯನ್ನು ಜ.31ರೊಳಗೆ ಸಲ್ಲಿಸದಿದ್ದರೆ, ಕೇಬಲ್ ಸಂಪರ್ಕ ಕಡಿತ ಮಾಡಲಾಗುವುದು ಎಂದು ಹೇಳಿದ್ದಾರೆ. [ಸದ್ದಿಲ್ಲದೇ ಕೇಬಲ್ ಬಿಲ್ ಹೆಚ್ಚಳ]
ಸಿಎಫ್ ಸಲ್ಲಿಕೆಗೆ ಮೂರು ಬಾರಿ ಗಡುವು ನೀಡಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಶೇ.80 ಹಾಗೂ ಮೈಸೂರಿನಲ್ಲಿ ಶೇ.90ರಷ್ಟು ಅರ್ಜಿಗಳು ಮಾತ್ರ ಸಲ್ಲಿಕೆಯಾಗಿದೆ. ಆದ್ದರಿಂದ ಗ್ರಾಹಕರಿಗೆ ಜ.31ರ ಗಡುವು ನೀಡಿದ್ದು, ನಂತರವೂ ಸಲ್ಲಿಸದಿದ್ದರೆ, ಕೇಬಲ್ ಪ್ರಸಾರ ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಸೆಟ್ ಬಾಕ್ಸ್ ಅಳವಡಿಕೆ ಮಾಡಿದ ದೇಶದ 23 ನಗರಗಳಲ್ಲಿ ಸಿಎಎಫ್ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ. ಇದರಲ್ಲಿ ಬೆಂಗಳೂರು ಹೊರತುಪಡಿಸಿ ಉಳಿದ ನಗರಗಳಲ್ಲಿ ಶೇ.90ರಷ್ಟು ಸಲ್ಲಿಕೆಯಾಗಿವೆ. ಕೇಬಲ್ ಆಪರೇಟರ್‌ಗಳು ಸೆಟ್ ಟಾಪ್ ಬಾಕ್ಸ್, ಬಾಡಿಗೆ ಹಾಗೂ ಚಾನೆಲ್ ಪ್ರಸಾರ ಆಧರಿಸಿ ನಿಯಮದಂತೆ ಶುಲ್ಕ ವಸೂಲಿ ಮಾಡುತ್ತಿದ್ದು, ನಮೂನೆ ಸಂಗ್ರಹವೂ ಆ ಸಂಸ್ಥೆಗಳ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ ಎಂದರು.
ಡಿಜಿಟಲೀಕರಣ ವಿಸ್ತರಣೆ : ಮುಂಬರು ಮಾರ್ಚ್ ನೊಳಗೆ ದೇಶದ ಎರಡನೇ ಹಂತದಲ್ಲಿ ಮಹಾನಗರ ಪಾಲಿಕೆ ಹಾಗೂ ನಗರ-ಪಟ್ಟಣ ಪ್ರದೇಶದ ಗ್ರಾಹಕರು ಸಿಎಎಫ್‌ಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. 2014ರ ಅಂತ್ಯದಲ್ಲಿ ದೇಶದ ಎಲ್ಲಾ ನಗರಗಳ ಗ್ರಾಹಕರಿಂದ ಸಿಎಎಫ್ ಗಳನ್ನು ಪಡೆಯಲಾಗುವುದು ಎಂದು ಮ್ಯಾಥ್ಯೂ ಹೇಳಿದರು.
ದೇಶದ ಎಲ್ಲಾ ನಗರಗಳಲ್ಲಿ ಸಿಎಎಫ್ ಸಲ್ಲಿಕೆಯಾದ ನಂತರ ಪೂರ್ಣ ಪ್ರಮಾಣದಲ್ಲಿ ಕೇಬಲ್ ಪ್ರಸಾರವೂ ಡಿಜಿಟಲೀಕರಣ ಆಗುತ್ತದೆ. ಇದಕ್ಕಾಗಿ ಸೆಟ್ ಟಾಪ್ ಬಾಕ್ಸ್ ಅಭಾವ ಅಥವಾ ಇನ್ಯಾವುದೇ ಸಮಸ್ಯೆ ಇಲ್ಲ. ಗ್ರಾಹಕರ ದೃಷ್ಟಿಯಿಂದ ಮಲ್ಟಿ ಸಿಸ್ಟಂ ಆಪರೇಟರ್‌ಗಳು ತಮ್ಮ ವ್ಯಾಪ್ತಿಯಲ್ಲಿ ದೂರು ಸ್ವೀಕಾರ ಕೇಂದ್ರಗಳನ್ನು ತೆರೆಯುವುದು ಕಡ್ಡಾಯಗೊಳಿಸಲಾಗಿದೆ ಎಂದರು.
ಬಿಲ್ ನೀಡುವುದು ಕಡ್ಡಾಯ : ಕೇಬಲ್ ಆಪರೇಟರ್‌ಗಳು ಗ್ರಾಹಕರು ಬಳಸುವ ಚಾನೆಲ್ ಆಧಾರದ ಮೇಲೆ ಶುಲ್ಕ ವಸೂಲು ಮಾಡಬೇಕಾಗುತ್ತದೆ. ಹೆಚ್ಚುವರಿ ಹಣ ಪಡೆದರೆ ದೂರು ನೀಡಿಲು ಅವಕಾಶವಿದೆ. ಗ್ರಾಹಕರು ಬಳಸುವ ಚಾನೆಲ್ ಗಳಿಗೆ ಅನ್ವಯವಾಗಿ ಬಿಲ್ ನೀಡಿಕೆ ವ್ಯವಸ್ಥೆ ಮಾ.1ರಿಂದ ಜಾರಿಗೆ ಬರಲಿದೆ. ಕೇಬಲ್ ಆಪರೇಟರ್ ಗಳಿಗೆ ಬಿಲ್ ನೀಡುವಂತೆ ಕಡ್ಡಾಯವಾಗಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ದರ ನಿಗದಿ ಮಾಡಿಲ್ಲ : ಜನರು ಸೆಟ್ ಟಾಪ್ ಬಾಕ್ಸ್ ಉಪಕರಣವನ್ನು ನಿರ್ದಿಷ್ಟ ಕಂಪನಿಯಿಂದ ಖರೀದಿಸುವಂತೆ ಟ್ರಾಯ್ ಯಾವುದೇ ಸೂಚನೆ ನೀಡಿಲ್ಲ. ಬಾಕ್ಸ್ ದರವನ್ನು ನಿಗದಿಗೊಳಿಸಿಲ್ಲ. ಮಾರುಕಟ್ಟೆಯಲ್ಲಿ ಗುಣಮಟ್ಟ ಹಾಗೂ ಬ್ರಾಂಡ್ ಆಧರಿಸಿ ದರ ನಿಗದಿ ಆಗಿರುತ್ತದೆ. ಇದರಲ್ಲಿ ಟ್ರಾಯ್ ಪಾತ್ರ ಇಲ್ಲ ಎಂದು ಮ್ಯಾಥ್ಯೂ ಸ್ಪಷ್ಟಪಡಿಸಿದರು. [ಸೆಟ್ ಟಾಪ್ ಬಾಕ್ಸ್ ಗೆ ಎಷ್ಟು ಕೊಟ್ರಿ]
ಸಿಎಎಫ್ ಸಲ್ಲಿಸದಿದ್ದರೆ ನಿಮ್ಮ ಕೇಬಲ್ ಟಿವಿ ಪ್ರಸಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಅರ್ಜಿ ಸಲ್ಲಿಸಿದ್ದೀರಾ? ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಈ ಕುರಿತು ಹೆಚ್ಚಿನ ಮಾಹಿತಿಗೆ ನಿಮ್ಮ ಕೇಬಲ್ ಆಪರೇಟರ್ ಅವರನ್ನು ಸಂಪರ್ಕಿಸಿ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications