ಟ್ರಾಫಿಕ್ ಉಲ್ಲಂಘನೆ ದಂಡ ಕಟ್ಟಿ ಸಾಕಾಗಿ ಚಾಲಕರಿಗೆ ತರಬೇತಿ ನೀಡಲು ಹೊರಟಿದೆ ಬಿಎಂಟಿಸಿ
ಬೆಂಗಳೂರು, ಮಾರ್ಚ್ 12: ರಸ್ತೆಗಳಲ್ಲಿ ಬಿಎಂಟಿಸಿ ಬಸ್ ಬಂದರೆ ನಮ್ಮ ಸುರಕ್ಷತೆಗಾಗಿ ನಾವೇ ಪಕ್ಕಕ್ಕೆ ಸರಿಯುವ ಸಂದರ್ಭಗಳು ಹಲವು ಬಾರಿ ವಾಹನ ಸವಾರರಿಗೆ ಎದುರಾಗುತ್ತವೆ. ಬಸ್ ನಿಲ್ದಾಣ ಬಿಟ್ಟು ಎಲ್ಲೋ ಗಾಡಿ ನಿಲ್ಲಿಸುವುದು, ರಸ್ತೆಗಳಲ್ಲೇ ಬಸ್ ಸ್ಟಾಪ್ ಕೊಡುವುದು, ವೇಗದ ಚಾಲನೆ ಸೇರಿ ಹಲವು ನಿಯಮ ಉಲ್ಲಂಘನೆಗೆ ತಡೆ ಹಾಕಲು ಬಿಎಂಟಿಸಿ ಹೊರಟಿದೆ.
ಸಂಚಾರಿ ಪೊಲೀಸ್ ಇಲಾಖೆಯಿಂದ ಶೇ 50ರಷ್ಟು ರಿಯಾಯಿತಿ ಪಡೆದ ನಂತರ ಸಂಚಾರ ನಿಯಮ ಉಲ್ಲಂಘನೆಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 33 ಲಕ್ಷ ರೂ.ಗಳ ಭಾರಿ ದಂಡವನ್ನು ಪಾವತಿಸಿದೆ. ಇದಾದ ನಂತರ ಎಚ್ಚೆತ್ತುಕೊಂಡಂತೆ ಕಾಣುತ್ತಿರುವ ಬಿಎಂಟಿಸಿ ತನ್ನ ಚಾಲಕರಿಗೆ ತರಬೇತಿ ನೀಡಲು ಮತ್ತು ಸಂಚಾರ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದೆ.

ಬಿಎಂಟಿಸಿ ಅಧಿಕಾರಿಗಳ ಪ್ರಕಾರ, 33 ಲಕ್ಷ ರೂ.ಗಳ ಭಾರಿ ದಂಡದ ಪ್ರಮುಖ ಭಾಗವು ಜಂಪಿಂಗ್ ಸಿಗ್ನಲ್‌ಗಳಿಗೆ ಮತ್ತು ತಪ್ಪು ತಪ್ಪು ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವುದಕ್ಕೆ ಸಂಬಂಧಿಸಿದೆ. ಇವುಗಳಿಗೆ ತರಬೇತಿ ನೀಡಲಾಗುತ್ತದೆ ಇದರ ಜೊತೆಗೆ ರಸ್ತೆ ಅಪಘಾತಗಳಲ್ಲಿ ಭಾಗಿಯಾದ ಚಾಲಕರಿಗೆ ಸುರಕ್ಷಿತ ಚಾಲನೆ ಕುರಿತು ತರಬೇತಿ ಅವಧಿಗಳನ್ನು ಸಹ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Methanol Run Buses: ಬೆಂಗಳೂರಿನ ಮೊದಲ ಮೆಥೆನಾಲ್ ಬಸ್‌ಗಳಿಗೆ ಚಾಲನೆ ನೀಡಲಿರುವ ಸಚಿವ ನಿತಿನ್ ಗಡ್ಕರಿ
ಹೆಚ್ಚು ಸಮಯ ರಸ್ತೆಗಿಳಿಯುವ ಚಾಲಕರಿಗೆ ನಿಯಮಿತವಾಗಿ ಕೆಲವು ಪಾಠಗಳ ಅಗತ್ಯವಿದೆ ಎಂದು ಬಿಎಂಟಿಸಿ ಮೂಲಗಳು ಒಪ್ಪಿಕೊಂಡಿವೆ. ಬಿಎಂಟಿಸಿ ಬಸ್ ಚಾಲಕರೊಬ್ಬರು ಈ ಬಗ್ಗೆ ಹೇಳಿದ್ದು ಹೀಗೆ. ಬೆಂಗಳೂರಿನಲ್ಲಿ ಟ್ರಾಫಿಕ್ ಪರಿಸ್ಥಿತಿಗಳು ವರ್ಷಗಳಿಂದ ಹದಗೆಟ್ಟಿರುವುದರಿಂದ, ನಾವು ವೇಳಾಪಟ್ಟಿಯ ಪ್ರಕಾರ ಸಂಚರಿಸಲು ಹೆಣಗಾಡುತ್ತಿದ್ದೇವೆ. ನಮ್ಮ ಟ್ರಿಪ್‌ಗಳನ್ನು ಮುಗಿಸಲು ನಮಗೆ ನಿರ್ದಿಷ್ಟ ಸಮಯವನ್ನು ನೀಡಲಾಗಿದೆ. ಆದ್ದರಿಂದ ಅವುಗಳನ್ನು ಮುಗಿಸುವ ಅವಸರದಲ್ಲಿ, ಚಾಲಕರು ಸಿಗ್ನಲ್‌ಗಳನ್ನು ಜಂಪ್ ಮಾಡುತ್ತಾರೆ ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ಬಿಎಂಟಿಸಿ ಬಸ್ ಚಾಲಕರು ಉದ್ದೇಶಪೂರ್ವಕವಾಗಿ ಸಿಗ್ನಲ್‌ಗಳನ್ನು ಜಂಪ್ ಮಾಡುವುದಿಲ್ಲ. ಸಂಚಾರ ನಿಯಮಗಳನ್ನು ಬೇಕು ಎಂದು ಉಲ್ಲಂಘಿಸುವುದಿಲ್ಲ, ಆದರೆ ಸಂಚಾರ ನಿಯಮ ಉಲ್ಲಂಘಿಸುವಾಗ ರಸ್ತೆಯಲ್ಲಿ ಇತರರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳಿರುವುದರಿಂದ ಸಂಚಾರ ನಿಯಮಗಳ ಬಗ್ಗೆ ಅವರು ಜಾಗೃತರಾಗಬೇಕು ಎಂದ ಹೇಳಿದ್ದಾರೆ.

ಬಿಎಂಟಿಸಿ ಎಂಡಿ ಸತ್ಯವತಿ ಮಾತನಾಡಿ, ಬಸ್ ಚಾಲಕರಿಗೆ ತರಬೇತಿ ನೀಡುವುದು ನಿರಂತರ ಪ್ರಕ್ರಿಯೆಯಾಗಿದ್ದು, ಇದನ್ನು ವರ್ಷವಿಡೀ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. "ನಾವು ನಮ್ಮ ಚಾಲಕರಿಗೆ ಬ್ಯಾಚ್‌ಗಳಲ್ಲಿ ತರಬೇತಿ ನೀಡುತ್ತಿದ್ದೇವೆ. ಸುರಕ್ಷಿತ ಚಾಲನೆ ಕುರಿತು ಅವರಿಗೆ ತರಬೇತಿ ನೀಡುತ್ತೇವೆ. ಇತ್ತೀಚೆಗೆ ಅಪಘಾತಕ್ಕೀಡಾದ 182 ಚಾಲಕರಿಗೆ ತರಬೇತಿ ನೀಡಲಾಗಿದೆ" ಎಂದು ಹೇಳಿದ್ದಾರೆ.
ಟ್ರಾಫಿಕ್ ಪೊಲೀಸರಿಗೆ ಪಾವತಿಸುವ ದಂಡದ ಪ್ರಮುಖ ಭಾಗವು ಸಿಗ್ನಲ್ ಜಂಪಿಂಗ್‌ಗೆ ಸಂಬಂಧಿಸಿದೆ. ಚಾಲಕರಿಗೆ ಸಂಚಾರ ನಿಯಮಗಳನ್ನು ಅನುಸರಿಸಲು ತರಬೇತಿ ನೀಡುವ ಬಳಿಕ ಅವರು ಸಂವೇದನಾಶೀಲರಾಗುತ್ತಾರೆ. ಸಿಗ್ನಲ್‌ಗಳನ್ನು ಜಂಪ್ ಮಾಡಿದ ಚಾಲಕರಿಂದ ಬಸ್ ನಿಗಮವು ಪಾವತಿಸಿದ ದಂಡವನ್ನು ವಸೂಲಿ ಮಾಡಲಾಗಿದ್ದು, ಇದರಿಂದ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಲು ಭಯಪಡುತ್ತಾರೆ ಎಂದು ಬಿಎಂಟಿಸಿ ಮೂಲಗಳು ಸಮರ್ಥಿಸಿಕೊಂಡಿವೆ.











Click it and Unblock the Notifications