Bengaluru Traffic Advisory: ವಿಐಪಿ ಸಂಚಾರ, ಕಾಮಗಾರಿ! ಪ್ರಯಾಣಿಕರಿಗೆ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ವಿವರ
ಬೆಂಗಳೂರು, ಆಗಸ್ಟ್ 07: ಬೆಂಗಳೂರಿನಲ್ಲಿ ನಿತ್ಯ ಒಂದಲ್ಲ ಒಂದು ಕಡೆ ಸಂಚಾರ ಸಮಸ್ಯೆಗಳು, ಕಾಮಗಾರಿ, ಮಳೆ ಇತ್ಯಾದಿ ಕಾರಣಗಳಿಂದ ಸಾರ್ವಜನಿಕರಿಗೆ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ಅನುಸರಿಸುವಂತೆ ಸೂಚನೆಗಳು ನೀಡಲಾಗುತ್ತದೆ. ಅದೇ ರೀತಿ ಗಣ್ಯವ್ಯಕ್ತಿಗಳ ಸಂಚಾರ ಹಾಗೂ ವೈಟ್ ಟಾಪಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರಿಗೆ ಸಂಚಾರ ಬಂದ್ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸರು ಸೂಚನೆ ನೀಡಿದ್ದಾರೆ. ಆಗಸ್ಟ್ 08 ಮತ್ತು 11ರವರೆಗೆ ವಾಹನ ಸವಾರರಿಗೆ ಮಹತ್ವದ ಸೂಚನೆ ಇದೆ. ಪರ್ಯಾಯ ಮಾರ್ಗಗಳು ಯಾವುವು? ಇಲ್ಲಿದೆ ಮಾಹಿತಿ.
ಆಗಸ್ಟ್ 08ರಂದು ಶುಕ್ರವಾರ ಬೆಂಗಳೂರಿಗೆ ಅತಿಗಣ್ಯ ವ್ಯಕ್ತಿಗಳು ಭೇಟಿ ನೀಡಲಿರುವ ಪ್ರಯುಕ್ತ ಈ ಕೆಳಕಂಡ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಈ ಕೆಳಕಂಡ ಸಮಯದ ಅವಧಿಯಲ್ಲಿ ಈ ಕೆಳಕಂಡ ರಸ್ತೆಗಳ ಬದಲಾಗಿ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಬೆಂಗಳೂರು ನಗರ ಪೊಲೀಸರು ಕೋರಿದ್ದಾರೆ. ಅದರ ವಿವರ ಮುಂದಿದೆ.

ನಾಳೆ ಶುಕ್ರವಾರ ಬೆಳಗ್ಗೆ 10:30 ಗಂಟೆಯಿಂದ 11:30 ಗಂಟೆಯವರೆಗೆ 'ಹಳೆ ವಿಮಾನ ನಿಲ್ದಾಣ ರಸ್ತೆ, ಎಂ.ಜಿ.ರಸ್ತೆ, ಕಬ್ಬನ್ ರಸ್ತೆಗಳಲ್ಲಿ ಹಾಗೂ ಸಂಜೆ 03:30 ಗಂಟೆಯಿಂದ 04:30 ಗಂಟೆಯವರೆಗೆ ಹಳೆ ವಿಮಾನ ನಿಲ್ದಾಣ ರಸ್ತೆ. ಎಂ.ಜಿ.ರಸ್ತೆ ಮತ್ತು ಕಬ್ಬನ್ ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಕೋರಲಾಗಿದೆ.
ವೈಟ್ ಟಾಪಿಂಗ್ ಕಾಮಗಾರಿ, ಸಂಚಾರ ಬಂದ್
ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಳಗೆರೆ ಟಿ ಜಂಕ್ಷನ್‌ನಿಂದ ಪಣತ್ತೂರು ರೈಲ್ವೆ ಬ್ರಿಡ್ಜ್ ಜಂಕ್ಟನ್‌ವರೆಗೆ ಬಿ.ಬಿ.ಎಂ.ಪಿ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ ಎಂದು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.
#ಸಂಚಾರಸಲಹೆ#TrafficAdvisory @DgpKarnataka @KarnatakaCops @CPBlr @Jointcptraffic @BlrCityPolice @blrcitytraffic @acpwfieldtrf @acpeasttraffic @mahadevapuratrf @halairporttrfps @KRPURATRAFFIC @wftrps @bwaditrafficps @ftowntrfps @jbnagartrfps @halasoortrfps @kghallitrfps… pic.twitter.com/mqxlviMpdo
— DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@DCPTrEastBCP) August 5, 2025
ಆಗಸ್ಟ್ 11ರವರೆಗೆ ಅಂದರೆ ಭಾನುವಾರ ರಾತ್ರಿ 11.00 ಗಂಟೆಯವರೆಗೆ ಪಣತ್ತೂರು ರೈಲ್ವೇ ಬ್ರಿಡ್ಜ್ ರಸ್ತೆಯಿಂದ ಬಳಗೆರೆ ಟಿ ಜಂಕ್ಷನ್‌ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇನ್ನು ಪರ್ಯಾಯ ಮಾರ್ಗ ನೋಡುವುದಾದರೆ, ಪಣತ್ತೂರು ಕಡೆಯಿಂದ ಬಳಗೆರೆ ಕಡೆಗೆ ಹೋಗುವ ವಾಹನ ಸವಾರರು ಪಣತ್ತೂರು ದಿಣ್ಣೆ ರಸ್ತೆಯಲ್ಲಿ ಚಲಿಸಿ ಪಣತ್ತೂರು ದಿಣ್ಣೆ ಬಳಿ ಎಡ ತಿರುವು ಪಡೆದು ಸಿಲ್ವರ್ ಓಕ್ ರಸ್ತೆಯಿಂದ ಬಳಗೆರೆ ಮಾರ್ಗವಾಗಿ ವಿಬ್‌ಗಯಾರ್ ರಸ್ತೆ ಬಳಸಿ ವರ್ತೂರು ಕಡೆಗೆ ಸಂಚರಿಸಬಹುದು.
ಇನ್ನೂ ಬಳಗೆರೆ ಟಿ ಜಂಕ್ಷನ್ ಕಡೆಯಿಂದ ಪಣತ್ತೂರು ಕಡೆಗೆ ಹೋಗುವ ವಾಹನ ಸವಾರರು ಪಣತ್ತೂರು ದಿಣ್ಣೆ ರಸ್ತೆ, ವಿಬ್‌ಗಯಾರ್ ರಸ್ತೆ ಹಾಗೂ ಮಾರತ್ತಹಳ್ಳಿ ಬ್ರಿಡ್ಜ್ ಮೂಲಕ ಪಣತ್ತೂರು ಕಡೆಗೆ ಸಂಚರಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications