ಮೂರು ಕಾರುಗಳಿಗೆ ವಿಚ್ಛೇದನ ನೀಡಿದ ಸಿದ್ದರಾಮಯ್ಯ!

ಬೆಂಗಳೂರು, ಆಗಸ್ಟ್ 18 : ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜಯದ ಹಾರ ತೊಡಿಸಬೇಕಲು ಎಂದು ಹಠ ತೊಟ್ಟು ಬೆಂಗಳೂರು ಸುತ್ತುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಜತೆಗೆ ಸಿದ್ದರಾಮಯ್ಯ ಸಂಚಾರದಿಂದ ಜನರಿಗೂ ಸಮಸ್ಯೆಯಾಗಿದೆ.

ಇದನ್ನು ಮನಗಂಡ ಸಿಎಂ ತಮ್ಮ ಬೆಂಗಾವಲು ಪಡೆಯ ಮೂರು ಕಾರುಗಳನ್ನು ಕಡಿಮೆ ಮಾಡಿದ್ದಾರೆ. ನಗರವನ್ನು ಸುತ್ತುತ್ತಿರುವ ಸಿದ್ದರಾಮಯ್ಯ ಮೂರು ದಿನಗಳಿಂದ ರೋಡ್‌ ಶೋ ದಲ್ಲಿ ತೊಡಗಿಕೊಂಡಿದ್ದಾರೆ. ಸೋಮವಾರ ಸಹ ಪೀಣ್ಯ ದಾಸರಹಳ್ಳಿಯಲ್ಲಿ ಪ್ರಚಾರ ಮಾಡಿದ್ದಾರೆ. [ರಾಜಕಾರಣಿಗಳೇ ರೈಟ್ ಹೇಳಿ, ನೋ ರೋಡ್, ನೋ ಓಟ್]

Traffic problem: CM Siddaramaiah left 3 Escort cars

ಸಿಎಂ ಈ ರೋಡ್ ಶೋನಿಂದಾಗಿ ಆಂಬ್ಯುಲೆನ್ಸ್‌ನಿಂದ ಹಿಡಿದು ಸಾಮಾನ್ಯ ಜನರ ತನಕ ಎಲ್ಲರೂ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದರು. ಕಲವರು ಬಹಿರಂಗವಾಗಿಯೇ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಸಿದ್ದುಗೂ ತಟ್ಟಿದ ಟ್ರಾಫಿಕ್ ಜಾಮ್ ಬಿಸಿ
ಮಂಗಳವಾರ ಸಿದ್ದರಾಮಯ್ಯ ಅವರಿಗೇ ಟ್ರಾಫಿಕ್ ಜಾಮ್ ಬಿಸಿ ತಟ್ಟಿತ್ತು. ಕೆ.ಆರ್ ಪುರಂಗೆ ತೆರಳುತ್ತಿದ್ದ ವೇಳೆ ವೈಟ್ ಫೀಲ್ಡ್ ಸರ್ಕಲ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸುಮಾರು ಅರ್ಧ ಗಂಟೆಗೂ ಹೆಚ್ಚಿನ ಕಾಲ ವಾಹನಗಳು ಮುಂದೆ ಸಾಗದೇ ನಿಂತಿದ್ದವು. ಈ ಸಂಚಾರ ದಟ್ಟಣೆಯಲ್ಲಿ ಸಿಕ್ಕಿಬಿದ್ದ ಟೆಕ್ಕಿಗಳು ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+