Hebbal flyover: ವಾಹನ ಸವಾರರೇ.. ಏರ್‌ಪೋರ್ಟ್ ರಸ್ತೆ ಕಡೆ ಹೋಗುವ ಮುನ್ನ ಗಮನಿಸಿ
ಬೆಂಗಳೂರು, ಜುಲೈ. 11: ಸಿಲಿಕಾನ್ ಸಿಟಿಯ ಪ್ರಮುಕ ಸಂಪರ್ಕ ಸೇತುವೆಗಳಲ್ಲಿ ಹೆಬ್ಬಾಳ ಫೈಓವರ್ ಕೂಡ ಒಂದು. ಬಳ್ಳಾರಿ ರಸ್ತೆ, , ವಿಮಾನ ನಿಲ್ದಾಣ ಮತ್ತು ಹೊರಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಈ ಫೈಓವರ್ ಮೇಲೆ ಪ್ರತಿದಿನ ಲಕ್ಷಾಂತರ ವಾಹನಗಳು ಓಡಾಡುತ್ತವೆ. ಆದರೆ, ಈಗ ಈ ಫೈಓವರ್ ಕಡೆ ಹೋಗುವ ಮುನ್ನ ಸುದ್ದಿಯನ್ನು ತಪ್ಪದೆ ಓದಿ.
ಬೆಂಗಳೂರು ಸಂಚಾರಿ ಪೊಲೀಸರು ಹೆಬ್ಬಾಳ ಫೈಓವರ್ ಮೇಲೆ ಓಡಾಡುವ ವಾಹನ ಸವಾರರಿಗೆ ಸಮಚಾರ ಸಲಹೆ ನೀಡಿದ್ದಾರೆ. ಪ್ರೈಓವರ್ ಆಗಲೀಕರಣ ಕಾಮಗಾರಿ ನಡೆಯುತ್ತಿರುವ ಕಾರಣ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

"ಹೆಬ್ಬಾಳ ಫೈಓವರ್ ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿದ್ದು, ವಿಮಾನ ನಿಲ್ದಾಣ ಮತ್ತು ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುತ್ತದೆ. ಪ್ರತಿದಿನ 2.5 ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸುವುದರಿಂದ ಹಾಗೂ ಹೆಬ್ಬಾಳ ಫೈಓವರ್ ನ ನಿಗಧಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರದಿಂದ ಸಂಚಾರ ದಟ್ಟಣೆಯುಂಟಾಗುತ್ತಿರುತ್ತದೆ. ಸಂಚಾರ ದಟ್ಟಣೆಯನ್ನು ನಿವಾರಿಸಲು ವಿವಿಧ ಪೌರ ಸಂಸ್ಥೆಗಳಿಂದ ಈ ಕೆಳಕಂಡಂತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ" ಎಂದು ಸಂಚಾರಿ ಪೊಲೀಸರು ಮಾಹಿತಿ ಹಮಚಿಕೊಂಡಿದ್ದಾರೆ.
ಎಲ್ಲೆಲ್ಲಿ ಕಾಮಗಾರಿ..?
1. ಕೆ.ಆರ್ ಪುರಂ ಅಪ್ ಕ್ಯಾಂಪ್ ನಿಂದ ಹೆಬ್ಬಾಳ ಪ್ರೈಓವರ್ ಕಡೆಗೆ (200 ) ಇರುವ ರಸ್ತೆಯಲ್ಲಿ ಬಿಡಿಎ ವತಿಯಿಂದ ಪ್ರೈಓವರ್ ಆಗಲೀಕರಣ ಕಾಮಗಾರಿ ನಡೆಯುತ್ತಿದೆ.
2 ಯೋಗೇಶ್ವರನಗರ (ಕೆಂಪಾಪುರ ಕ್ರಾಸ್) ಕೆ.ಆರ್ ಪುರಂನಿಂದ ಹೆಬ್ಬಾಳ ಜಂಕ್ಷನ್ ಕಡೆಯ ರಸ್ತೆಯಲ್ಲಿ ಬಿಎಂಆರ್‌ಸಿಎಲ್ ವತಿಯಿಂದ ಮೆಟ್ರೋ ಕಾಮಗಾರಿ ನಡೆಯುತ್ತಿದೆ.

3 ಕೊಡಿಗೇಹಳ್ಳಿ ಜಂಕ್ಷನ್ ರಸ್ತೆಯಲ್ಲಿ ಬಿಎಂಆರ್‌ಸಿಎಲ್ ವತಿಯಿಂದ ಮೆಟ್ರೋ ಕಾಮಗಾರಿ ನಡೆಯುತ್ತಿದೆ.
4 ಬ್ಯಾಟರಾಯನಪುರ ಜಂಕ್ಷನ್ ರಸ್ತೆಯಲ್ಲಿ ಬಿಎಂಆರ್‌ಸಿಎಲ್ ವತಿಯಿಂದ ಮೆಟ್ರೋ ಕಾಮಗಾರಿ ನಡೆಯುತ್ತಿದೆ.
5 ಹೆಬ್ಬಾಳ ಪಿಎಸ್ ಜಂಕ್ಷನ್ ಬೆಂಗಳೂರು ಕಡೆಗೆ ಬರುವ ರಸ್ತೆಯಲ್ಲಿ ಬಿಡಿಎ ವತಿಯಿಂದ ಹೆಚ್ಚುವರಿ ಪ್ರೈಓವರ್ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಬಿಡಿಎ ವತಿಯಿಂದ ಫೈಓವರ್ ಅಗಲೀಕರಣ ಹಾಗೂ ಬಿಎಂಆರ್‌ಸಿಎಲ್ ನಿಂದ ಮೆಟ್ರೋ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪೀಕ್ ಅವರ್ಸ್ ನಲ್ಲಿ ಸಂಚಾರ ನಿಧಾನಗತಿಯಲ್ಲಿರುತ್ತದೆ. ಇದರಿಂದಾಗಿ ಏರ್‌ಪೋರ್ಟ್‌ಗೆ ಚಲಿಸುವ ವಾಹನಗಳು ನಿಗಧಿತ ವೇಳೆಗೆ ಏರ್‌ಪೋರ್ಟ್ ತಲುಪಲು ಸಾಧ್ಯವಾಗುವುದಿಲ್ಲ ಆದ್ದರಿಂದ ನಿಗಧಿತ ಅವಧಿಗಿಂತ ಎರಡು ಗಂಟೆ ಮುಂಚಿತವಾಗಿ ಪ್ರಯಾಣ ಪ್ರಾರಂಭಿಸುವುದು ಒಳ್ಳೆಯದು ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಕೆ.ಆರ್ ಪುರಂ ಕಡೆಯಿಂದ ಏರ್ ಪೋರ್ಟ್ ಕಡೆಗೆ ಬಳಸಬೇಕಾದ ಮಾರ್ಗಗಳು:
• ಹೊರವರ್ತುಲ ರಸ್ತೆಯಲ್ಲಿ ಬಲ ತಿರುವು ಪಡೆದು ಹೆಣ್ಣೂರು ಕ್ರಾಸ್-ಬಾಗಲೂರು ರಸ್ತೆಯ ಏರ್‌ಪೋರ್ಟ್ ಪರ್ಯಾಯ ರಸ್ತೆಯ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗುವುದು.
• ಹೊರವರ್ತುಲ ರಸ್ತೆಯಲ್ಲಿ ನಾಗವಾರ ಜಂಕ್ಷನ್ ಬಳಿ ಬಲ ತಿರುವು ಪಡೆದು ಥಣಿಸಂದ್ರ- ಹೆಗಡೆನಗರ ಮುಖ್ಯರಸ್ತೆ, ಬೆಳ್ಳಳ್ಳಿ ಸೇತುವೆ-ರೇವಾ ಜಂಕ್ಷನ್ ಮೂಲಕ ಬಲ ತಿರುವು ಪಡೆದು ಬಾಗಲೂರು ರಸ್ತೆಯ ಏರ್‌ಪೋರ್ಟ್ ಪರ್ಯಾಯ ರಸ್ತೆಯ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗುವುದು.
ಕೆ.ಆರ್ ಪುರಂ ಕಡೆಯಿಂದ ಬೆಂಗಳೂರಿಗೆ ಬಳಸಬೇಕಾದ ಮಾರ್ಗಗಳು:
• ಹೊರವರ್ತುಲ ರಸ್ತೆಯ ಮೂಲಕ ಚಲಿಸುವ ವಾಹನಗಳು ಐಓಸಿ-ಮುಕುಂದ ಥಿಯೇಟರ್ ರಸ್ತೆಯ ಲಿಂಗರಾಜಪುರಂ ಮೇಲ್ಲೇತುವೆ ಮಾರ್ಗ ಮೂಲಕ ನಗರದ ಕಡೆಗೆ ಪ್ರವೇಶಿಸಬಹುದಾಗಿದೆ.
• ನಾಗವಾರ ಮತ್ತು ಟ್ಯಾನರಿ ರಸ್ತೆ ಮಾರ್ಗವಾಗಿ ನಗರದ ಕಡೆಗೆ ಪ್ರವೇಶಿಸಬಹುದಾಗಿದೆ.
ಬೆಂಗಳೂರು-ಬಳ್ಳಾರಿ ರಸ್ತೆಯಿಂದ ನಗರದ ಕಡೆಗೆ ಬರುವ ಭಾರಿ ಮತ್ತು ಮಧ್ಯಮ ಗಾತ್ರದ ಸರಕು ಸಾಗಾಣಿಕೆ ವಾಹನಗಳು ಬಳಸಬೇಕಾದ ಮಾರ್ಗಗಳು:
• ಬೆಂಗಳೂರು-ಬಳ್ಳಾರಿ ರಸ್ತೆಯಿಂದ ಬರುವ ವಾಹನಗಳು ದೇವನಹಳ್ಳಿಯ ರಾಣಿ ಕ್ರಾಸ್ ಬಳಿ ಎಡತಿರುವು ಪಡೆದು ಹೊಸಕೋಟೆ, ಕೋಲಾರ ಕಡೆಗೆ ಚಲಿಸುವುದು.
• ಬೆಂಗಳೂರು-ಬಳ್ಳಾರಿ ರಸ್ತೆಯಿಂದ ಬರುವ ವಾಹನಗಳು ದೇವನಹಳ್ಳಿಯ ದೊಡ್ಡಬಳ್ಳಾಪುರ ಕ್ರಾಸ್ ಬಳಿ ಎಡತಿರುವು ಪಡೆದು ಹೊಸಕೋಟೆ, ಕೋಲಾರ ಕಡೆಗೆ ಚಲಿಸುವುದು.
• ಬೆಂಗಳೂರು-ಬಳ್ಳಾರಿ ರಸ್ತೆಯಿಂದ ಬರುವ ವಾಹನಗಳು ವಿದ್ಯಾನಗರ ಕ್ರಾಸ್ ಬಳಿ ಎಡತಿರುವು ಪಡೆದು ರಜಾಕ್ ಪಾಳ್ಯ-ಬಾಗಲೂರು ಮೂಲಕ ಹೆಣ್ಣೂರು-ಕೆ.ಆರ್ ಪುರಂ ಮಾರ್ಗವಾಗಿ ನಗರದ ಕಡೆಗೆ ಚಲಿಸುವುದು.
• ದೊಡ್ಡಬಳ್ಳಾಪುರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳು ರಾಜಾನುಕುಂಟೆ ಬಳಿ ಬಲ ತಿರುವು ಪಡೆದು ನೆಲಮಂಗಲ ಕಡೆಗೆ ಚಲಿಸುವುದು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications