ವೈರಲ್ ವೀಡಿಯೋ: ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದ ಟ್ರಾಫಿಕ್ ಪೊಲೀಸರು

Recommended Video

      ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದ ಟ್ರಾಫಿಕ್ ಪೊಲೀಸರು | Oneindia Kannada

      ದೇವನಹಳ್ಳಿ, ಜುಲೈ.05: ದೇವನಹಳ್ಳಿಯ ಹೊಸ ಬಸ್ ನಿಲ್ದಾಣದ ತಿರುವಿನಲ್ಲಿ ಬೃಹತ್ ಗುಂಡಿಯೊಂದಿದೆ. ಈ ಮಾರ್ಗದಲ್ಲಿ ಗುಂಡಿಯಿದ್ದ ಕಾರಣ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದವು. ಇದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಅಷ್ಟೇ ಅಲ್ಲ, ಅನೇಕ ಅಪಘಾತಗಳು ಇಲ್ಲಿ ಸಂಭವಿಸುತ್ತಿದ್ದವು.

      ಇದನ್ನೆಲ್ಲಾ ನೋಡಿ ಬೇಸರಗೊಂಡಿದ್ದ ಟ್ರಾಫಿಕ್ ಪೊಲೀಸರು ಇದೀಗ ಆ ಗುಂಡಿಯನ್ನು ಮುಚ್ಚುವ ಮೂಲಕ ಸ್ಥಳೀಯರ, ಸಾರ್ವಜನಿಕರ ಶ್ಲಾಘನೆಗೆ ಒಳಗಾಗಿದ್ದಾರೆ. ಪೊಲೀಸರು ಗುಂಡಿ ಮುಚ್ಚುತ್ತಿರುವ ವೀಡಿಯೊ ಇದೀಗ ವೈರಲ್ ಆಗಿದೆ.

      ಈ ಗುಂಡಿಗೆ ಸಿಮೆಂಟ್ ಹಾಕಿ ಮುಚ್ಚಿ, ಸ್ಥಳೀಯ ಪುರಸಭೆ ಮಾಡಬೇಕಿದ್ದ ಕೆಲಸವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟ್ರಾಫಿಕ್ ಪೊಲೀಸರು ಮಾಡಿದ್ದಾರೆ.

      Traffic police have closed a huge hole at Devanahallis new bus stop

      ಮೂರು ದಿನಗಳ ಹಿಂದೆ ಸಂಚಾರ ದಟ್ಟಣೆಗೂ ಮುನ್ನವೇ ಬಸ್ ರಿಪೇರಿ ಮಾಡಿ ಟ್ರಾಫಿಕ್ ಪೊಲೀಸರು ತಮ್ಮ ಕರ್ತವ್ಯ ನಿಷ್ಠೆಯನ್ನು ಪಾಲಿಸಿದ್ದರು.

      ಹೆಬ್ಬಾಳ ಪ್ಲೈಓವರ್ ಮೇಲೆ ಕೆಎಸ್ಆರ್ ಟಿಸಿ ಬಸ್ ಪಂಚರ್ ಆಗಿ ನಿಂತಿತ್ತು. ನಗರ ಸಂಚಾರಿ ಪೊಲೀಸರು ಸಂಚಾರ ದಟ್ಟಣೆಗೂ ಮೊದಲೇ ಎಚ್ಚೆತ್ತುಕೊಂಡು ತಮ್ಮ ಕರ್ತವ್ಯ ಪ್ರಜ್ಞೆ ಮೆರೆಯುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದರು.

      ಆರ್.ಟಿ.ನಗರ ಠಾಣೆಯ ಪಿಐ ಫಿರೋಜ್ ಖಾನ್, ಪಿಎಸ್ಐ ನಾಗಭೂಷಣ್, ಪಿಸಿ ರಾಜಣ್ಣ, ಪಿಸಿ ಮಧುಸೂಧನ್ ಅವರು ಕೆಎಸ್ಆರ್ ಟಿಸಿ ಮೆಕ್ಯಾನಿಕ್ ಜೊತೆ ಸೇರಿ ಈ ಕೆಲಸ ಮಾಡಿದ್ದರು. ಈ ಎಲ್ಲ ಪೊಲೀಸರ ಸೇವಾ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ಸಲ್ಲಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+