ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್ ನಿಯಮ ಉಲ್ಲಂಘನೆ: ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಕಟ್ಟಬೇಕಿರುವ ದಂಡ ಕೇಳಿದರೇ ತಲೆ ತಿರುಗುವುದು ಗ್ಯಾರಂಟಿ!

ರಸ್ತೆಯಲ್ಲಿ ಬೇಕಾಬಿಟ್ಟಿ ಓಡುಡುತ್ತಿರುವ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೋಡಿ ಪೊಲೀಸರ ಮೇಲೆ ಬೇಜಾರಾಗಿದ್ಯಾ? ಇವರಿಗ್ಯಾಕೆ ದಂಡ ಕಟ್ಟಿಸಲ್ಲ ಅಂತ ಅನ್ನಿಸಿದ್ಯಾ? ಇವರಿಗೂ ದಂಡ ಹಾಕಲಾಗು್ತತೆ. ಅದು ಸಾವಿರಗಟ್ಟಲೆಯಲ್ಲ.. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಉಳಿಸಿಕೊಂಡಿರೋದು ಕ

|
Google Oneindia Kannada News

ಬೆಂಗಳೂರು, ಜನವರಿ. 30: ರಸ್ತೆಗಳಲ್ಲಿ ವಾಹನ ಓಡಿಸುವಾಗ ಪಕ್ಕದಲ್ಲಿ ಬಿಎಂಟಿಸಿನೋ, ಕೆಡಸ್‌ಆರ್‌ಟಿಸಿ ಬಸ್ ಬಂದರೆ ನಿಜಕ್ಕೂ ಒಂದು ಕ್ಷಣ ಗಾಬರಿಯಾಗಿಬೇಕು ಹಾಗಾಗಿದೆ ಪರಿಸ್ಥಿತಿ. ಏಕೆಂದರೆ ಅಷ್ಟು ವೇಗವಾಗಿ ಚಲಿಸುತ್ತಿರುತ್ತವೆ ಈ ಬಸ್‌ಗಳು. ಇಂತಹ ಅನುಭವಗಳು ಪ್ರತಿದಿನ ಸಾವಿರಾರು ಜನರಿಗೆ ಆಗುತ್ತವೆ. ಪೊಲೀಸರು ಇವರ ಮೇಲೆ ಕ್ರಮ ಏಕೆ ತೆಗೆದುಕೊಳ್ಳುವುದಿಲ್ಲ ಎಂದು ಅನೇಕ ವಾಹನ ಸವಾರರು ಪ್ರಶ್ನಿಸಿಕೊಳ್ಳುತ್ತಾರೆ.

ಇದಕ್ಕೆ ಉತ್ತರವಾಗಿ ಸಂಚಾರಿ ಪೊಲೀಸರು ಕೂಡ ಎರಡು ಸಂಸ್ಥೆಗಳಿಗೆ ಬಾಕಿ ದಂಡ ಕಟ್ಟಿ ಎಂದು ನೋಟಿಸ್ ನೀಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿಗೆ ಪೊಲೀಸರು 1.4 ಕೋಟಿ ರೂಪಾಯಿ ದಂಡ ವಿಧಿಸಿದ್ದಾರೆ.

ಬೆಂಗಳೂರಿನಲ್ಲಿ ಓಡಿಸಿದ ಹಳೇ BMTC ಬಸ್‌ಗಳನ್ನು ಬೆಳಗಾವಿಗೆ ಬಿಡಲು ನಿರ್ಧಾರ: ಈ ನಿಲುವು ಸರಿಯೇ?ಬೆಂಗಳೂರಿನಲ್ಲಿ ಓಡಿಸಿದ ಹಳೇ BMTC ಬಸ್‌ಗಳನ್ನು ಬೆಳಗಾವಿಗೆ ಬಿಡಲು ನಿರ್ಧಾರ: ಈ ನಿಲುವು ಸರಿಯೇ?

ಸಂಚಾರ ನಿಯಮ ಉಲ್ಲಂಘನೆಯಲ್ಲಿ ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಹೆಚ್ಚು ಕಿರಿಕಿರಿ ಮಾಡುವ ಬಿಎಂಟಿಸಿಗಳ ಪಾತ್ರ ತುಂಬಾ ದೊಡ್ಡದು. ಬಿಎಂಟಿಸಿ ಒಂದೇ ಬರೋಬ್ಬರಿ 1.3 ಕೋಟಿ ರೂಪಾಯಿ ದಂಡ ಕಟ್ಟಬೇಕಿದೆ.

Bengaluru Traffic Police asked BMTC & KSRTC to pay Rs 1.4 cr pending fines for traffic offences in last 3 years

ಕೆಎಸ್‌ಆರ್‌ಟಿಸಿ ಹತ್ತು ಲಕ್ಷ ರೂಪಾಯಿ ದಂಡ ಕಟ್ಟಬೇಕಿದೆ. ಈ ಬಗ್ಗೆ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಅವರು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಕ್ಯಾಬ್‌ಗಳು, ಟ್ಯಾಕ್ಸಿಗಳು, ಆಟೋಗಳು ಮತ್ತು ಸರಕುಗಳ ವಾಹನಗಳು (ಹಳದಿ ನಂಬರ್‌ಪ್ಲೇಟ್‌ಗಳೊಂದಿಗೆ) ಆರ್‌ಟಿಒದಲ್ಲಿ ಫಿಟ್‌ನೆಸ್ ಪ್ರಮಾಣಪತ್ರವನ್ನು (ಎಫ್‌ಸಿ) ನವೀಕರಿಸುವಾಗ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಚಾರ ದಂಡವನ್ನು ಪಾವತಿಸಬೇಕಾಗುತ್ತದೆ. ಆದರೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಎಫ್‌ಸಿಗಳಿಗಾಗಿ ಆರ್‌ಟಿಒಗೆ ವರದಿ ಮಾಡಬೇಕಾಗಿಲ್ಲ. ಹೀಗಾಗಿ ಬಾಕಿ ವಸೂಲಿ ಮಾಡಲು ಸಂಚಾರ ಪೊಲೀಸರು ಎರಡು ಕಂಪನಿಗಳ ಮೊರೆ ಹೋಗಿದ್ದಾರೆ.

Bengaluru Traffic Police asked BMTC & KSRTC to pay Rs 1.4 cr pending fines for traffic offences in last 3 years

ತಪ್ಪು ತಪ್ಪಾಗಿ ಮತ್ತು ಅಡ್ಡಾದಿಡ್ಡಿ ಪಾರ್ಕಿಂಗ್, ಸಿಗ್ನಲ್‌ಗಳನ್ನು ಜಂಪ್ ಮಾಡುವುದು, ಅತಿವೇಗ ಮತ್ತು ಅಜಾಗರೂಕ ಚಾಲನೆಯು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಚಾಲಕರು ಮಾಡುವ ಹೆಚ್ಚಿನ ಸಂಚಾರ ಉಲ್ಲಂಘನೆಯಾಗಿದೆ ಎಂದು ಡಾ ಸಲೀಂ ತಿಳಿಸಿದ್ದಾರೆ.

ಇನ್ನು ಸಂಚಾರ ಉಲ್ಲಂಘನೆ ಕಾಣಿಸುತ್ತಿದ್ದರೂ ನಾವು ಈ ಬಸ್‌ಗಳನ್ನು ನಿಲ್ಲಿಸುವುದಿಲ್ಲ. ಏಕೆಂದರೆ , ಪ್ರಯಾಣಿಕರಿಗೆ ಅನಾನುಕೂಲವಾಗುತ್ತದೆ ಎಂಬ ಕಾರಣಕ್ಕೆ. ಚಾಲಕರು ಕಾನೂನನ್ನು ಪಾಲಿಸುವಂತೆ ಮಾಡಲು ದಂಡವನ್ನು ಸಂಗ್ರಹಿಸುವುದು ಸ್ಪಲ್ಪ ಪ್ರಯೋಜನಕ್ಕೆ ಬರಬಹುದು ಎಂದು ವಿಸ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಆಘಾತಕಾರಿ ಸಂಗತಿಯೆಂದರೆ, ಕಳೆದ ಮೂರು ವರ್ಷಗಳಲ್ಲಿ ಸಂಚಾರ ಪೊಲೀಸರು ಬಿಎಂಟಿಸಿಗೆ ಅಡ್ಡಾದಿಡ್ಡಿ ವಾಹನ ನಿಲುಗಡೆಗಾಗಿ 26,000 ನೋಟಿಸ್‌ಗಳನ್ನು ನೀಡಿದ್ದಾರೆ.

English summary
Bengaluru Traffic Police asked BMTC and KSRTC to pay Rs 1.4 cr pending fines for traffic offences in last 3 years. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X