Cubbon Park: ಕಬ್ಬನ್ ಪಾರ್ಕ್‌ನಲ್ಲಿ ಎಲ್ಲಾ ಶನಿವಾರ ವಾಹನ ಸಂಚಾರಕ್ಕೆ ಅವಕಾಶ
ಬೆಂಗಳೂರು, ಫೆಬ್ರವರಿ.11: ಬೆಂಗಳೂರಿನ ಪ್ರಮುಖ ಪಾರ್ಕ್‌ಗಳಲ್ಲಿ ಕಬ್ಬನ್ ಪಾರ್ಕ್ ಪ್ರಮುಖವಾದದ್ದು. ಪಾರ್ಕ್ ಒಳಗಿನ ದಾರಿಗಲು ನಗರದ ಹಲವು ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಆದರೆ, ಕೆಲ ವರ್ಷಗಳ ಹಿಂದೆ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಎಲ್ಲಾ ಸಾರ್ವಜನಿಕ ರಜಾದಿನಗಳಲ್ಲಿ ಎಲ್ಲಾ ರೀತಿಯ ವಾಹನಗಳ ಪ್ರವೇಶವನ್ನು ಉದ್ಯಾನವನದೊಳಗೆ ನಿಷೇಧಿಸಲಾಗಿದೆ.
ವಾಹನ ಸಂಚಾರ ನಿಷೇಧದ ಬಗ್ಗ ಸರ್ವಾಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಲೆ ಇದ್ದರು. ಸದ್ಯಕ್ಕೆ ತೋಟಗಾರಿಕಾ ಇಲಾಖೆ ಫೆಬ್ರವರಿ 8 ರಂದು ಹೊರಡಿಸಿದ ಆದೇಶದಲ್ಲಿ ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ಎರಡು ಮತ್ತು ನಾಲ್ಕನೇ ಶನಿವಾರದಂದು ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಿದೆ. ಬೆಂಗಳೂರು ಸಂಚಾರಿ ಪೊಲೀಸರು ತೋಟಗಾರಿಕೆ ಇಲಾಖೆಯೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ವರ್ಷಗಳ ಹಿಂದೆ, ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಎಲ್ಲಾ ಸಾರ್ವಜನಿಕ ರಜಾದಿನಗಳಲ್ಲಿ ಎಲ್ಲಾ ರೀತಿಯ ವಾಹನಗಳ ಪ್ರವೇಶವನ್ನು ಉದ್ಯಾನವನದೊಳಗೆ ನಿಷೇಧಿಸಲಾಗಿದೆ. ನಗರ ಸಂಚಾರ ಪೊಲೀಸರು ಇದನ್ನು ಪರಿಹಾರವೆಂದು ಪರಿಗಣಿಸಿದರೆ, ನಾಗರಿಕರು ಏಕಪಕ್ಷೀಯ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
"ಸಾರ್ವಜನಿಕ ಅನುಕೂಲಕ್ಕಾಗಿ ಮತ್ತು ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ, ಮೂರು ತಿಂಗಳ ಕಾಲ ಪ್ರಾಯೋಗಿಕ ಕ್ರಮವಾಗಿ ಎರಡು ಮತ್ತು ನಾಲ್ಕನೇ ಶನಿವಾರದಂದು ಹೈಕೋರ್ಟ್‌ನಿಂದ ಸಿದ್ದಲಿಂಗಯ್ಯ ವೃತ್ತದವರೆಗೆ ಮತ್ತು ಪ್ರತಿಯಾಗಿ ಕಬ್ಬನ್ ಪಾರ್ಕ್‌ಗೆ ವಾಹನಗಳನ್ನು ಪ್ರವೇಶಿಸಲು ಅನುಮತಿಸಲಾಗುವುದು" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜನವರಿ 24 ರಂದು ಮುಖ್ಯ ಕಾರ್ಯದರ್ಶಿ, ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಅವರು ಕರೆದ ಸಭೆಯಲ್ಲಿ, ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡುವುದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿನ ದಟ್ಟಣೆಯನ್ನು ನಿವಾರಿಸಬಹುದು. ಏಕೆಂದರೆ ವಾಹನ ಸಂಚಾರಕ್ಕೆ ಉದ್ಯಾನದೊಳಗೆ ಸಾಕಷ್ಟು ಸ್ಥಳಾವಕಾಶವಿದೆ ಎಂದು ಹೇಳಿದ್ದರು. ಶನಿವಾರ ಬೆಳಗ್ಗೆ, ಅನೇಕ ಸಾಮಾನ್ಯ ಪ್ರವಾಸಿಗರು ಉದ್ಯಾನವನದೊಳಗೆ ವಾಹನಗಳನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.
ಇನ್ನು, ಉದ್ಯಾನವನದಲ್ಲಿ ಛಾಯಾಗ್ರಹಣ ಮತ್ತು ಕ್ಯಾಮೆರಾ ಬಳಕೆಯ ಮೇಲೆ ನಿಷೇಧವಿದೆ. ಇದರ ನಡುವೆ ಈ ಹೊಸ ಆದೇಶವು ವಿವಾದಾಸ್ಪದವಾಗಿದೆ. ಜೊತೆಗೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತದೆ. ಕಬ್ಬನ್ ಪಾರ್ಕ್‌ನ ಗಾಳಿಯ ಗುಣಮಟ್ಟ ಮತ್ತು ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಹಲವು ಪರಿಸರವಾದಿಗಳು ಆರೋಪಿಸಿದ್ದಾರೆ.












Click it and Unblock the Notifications