Bengaluru - Mysuru Expressway: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಟ್ರಾಫಿಕ್ ಜಾಮ್: ಸವಾರರು ಸುಸ್ತೋಸುಸ್ತು

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಚಾಲನೆ ನೀಡಿದ್ದು, ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರವಾಗಬೇಕಿದ್ದ ಹೆದ್ದಾರಿ ಇದೀಗ ಮೈಸೂರು-ಬೆಂಗಳೂರು ಅವಳಿ ನಗರದಲ್ಲಿ ಸಂಚಾರ ದಟ್ಟಣೆಯನ್ನು ಇನ್ನಷ್ಟು ಹದಗಟ್ಟಿದೆ.

ಬೆಂಗಳೂರು ಮಾರ್ಚ್ 14: ಟ್ರಾಫಿಕ್ ಜಾಮ್‌ಗೆ ಪರಿಹಾರವಾಗಬೇಕಾಗಿದ್ದ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾಗಿ ಎರಡನೇ ದಿನವೂ ವಾಹನ ದಟ್ಟಣೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿರುವುದು ಕಂಡು ಬಂದಿದೆ. ಭಾನುವಾರ ಕರ್ನಾಟಕಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದರು. ಇದರ ಉದ್ದೇಶ ಸಂಪರ್ಕ ವೇಗವನ್ನು ಹೆಚ್ಚಿಸುವುದಾಗಿದೆ. ಟೋಲ್ ಸಂಗ್ರಹದಲ್ಲಿ ವಿಳಂಬದಿಂದಾಗಿ ರಸ್ತೆಯಗಲಕ್ಕೂ ವಾಹನಗಳು ನಿಂತಿರುವುದು ಇಂದು ಕಂಡುಬಂದಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಚಾಲನೆ ನೀಡಿದ್ದು, ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರವಾಗಬೇಕಿದ್ದ ಹೆದ್ದಾರಿ ಇದೀಗ ಮೈಸೂರು-ಬೆಂಗಳೂರು ಅವಳಿ ನಗರದಲ್ಲಿ ಸಂಚಾರ ದಟ್ಟಣೆಯನ್ನು ಇನ್ನಷ್ಟು ಹದಗೆಡಿಸುವ ಸಾಧ್ಯತೆಯಿದೆ ಎಂದು ಸಂಚಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Traffic jam on the Mysore-Bengaluru Expressway

ದಶಪಥ ರಸ್ತೆ ನಿರ್ಮಾಣದಿಂದ ಬೆಂಗಳೂರಿನಿಂದ ಮೈಸೂರಿಗೆ ಕೇವಲ 90 ನಿಮಿಷದಲ್ಲಿ ಬರಬಹುದು. ಆದರೆ, ಈ ಖುಷಿ ಮೈಸೂರಿನ ಪ್ರವೇಶ ದ್ವಾರಕ್ಕೆ ಬರುವಷ್ಟರಲ್ಲೇ ಕರಗಿ ಹೋಗುತ್ತದೆ.ಹೌದು, ಇದಕ್ಕೆ ಕಾರಣ ಟ್ರಾಫಿಕ್‌ ಜಾಮ್‌. ಮಣಿಪಾಲ್‌ ಆಸ್ಪತ್ರೆ ಸಿಗ್ನಲ್‌ ಬಳಿ ವಾಹನ ದಟ್ಟಣೆ ಉಂಟಾದರೆ ಅಲ್ಲಿಂದ ಪಾರಾಗಲು ಹರ ಸಾಹಸ ಪಡಬೇಕು.

ಇಷ್ಟು ಮಾತ್ರವಲ್ಲದೆ ವಾರಾಂತ್ಯದಲ್ಲಂತೂ ಈ ಜಂಕ್ಷನ್‌ನಿಂದ ಪಾರಾಗಿ ಬರಲು ಕನಿಷ್ಠ 30 ನಿಮಿಷ ಬೇಕು. ರಾಜಧಾನಿ ಬೆಂಗಳೂರು ನಂತರ ಸಾಂಸ್ಕೃತಿಕ ನಗರಿ ಮೈಸೂರು ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರು ಮತ್ತು ಮೈಸೂರು ನಡುವೆ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿವೆ. ಕಚೇರಿ, ವೈಯಕ್ತಿಕ ಕೆಲಸ ಹಾಗೂ ಜೀವನೋಪಾಯಕ್ಕಾಗಿ ಲಕ್ಷಾಂತರ ಮಂದಿ ಉಭಯ ನಗರಗಳ ನಡುವೆ ಸಂಚರಿಸುತ್ತಿದ್ದಾರೆ.

ಈ ಮೊದಲು ಉಭಯ ನಗರಗಳಿಗೆ ಹೋಗಲು ಕನಿಷ್ಠ ಮೂರರಿಂದ ನಾಲ್ಕು ಗಂಟೆ ಹಿಡಿಯುತ್ತಿತ್ತು. ಈ ಸಂಚಾರ ಪ್ರಯಾಸ ತಪ್ಪಿಸಲು ದಶಪಥ ರಸ್ತೆ ನಿರ್ಮಾಣ ಮಾಡಲಾಯಿತು. ಇದರಿಂದ ಪ್ರಯಾಣದ ಅವಧಿ ಅರ್ಧದಷ್ಟು ಕಡಿಮೆ ಆಗಿರುವುದಕ್ಕೆ ಖುಷಿ ಇದೆ. ಆದರೆ, ಬೆಂಗಳೂರಿನಿಂದ ಕಡಿಮೆ ಅವಧಿಯಲ್ಲಿ ಬರುವ ವಾಹನಗಳು ಮೈಸೂರಿನ ಪ್ರವೇಶ ದ್ವಾರ ಸಿದ್ದಲಿಂಗಪುರ ಬಳಿ ಟ್ರಾಫಿಕ್‌ ಜಾಮ್‌ಗೆ ಸಿಲುಕುತ್ತಿವೆ. ಅಲ್ಲಿಂದ ಮಣಿಪಾಲ್‌ ಆಸ್ಪತ್ರೆ ದಾಟುವವರೆಗೂ ಪ್ರಯಾಣಿಕರ ಪಾಡು ಹೇಳತೀರದು.

Traffic jam on the Mysore-Bengaluru Expressway

ಒಟ್ಟಿನಲ್ಲಿ ಸಂಚಾರಕ್ಕೆ ಸುಗಮವಾಗಬೇಕಿದ್ದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಸದ್ಯ ವಾಹನ ಸವಾರರಿಗೆ ಕಿರಿಕಿರಯನ್ನುಂಟು ಮಾಡಿದೆ. ಇದಕ್ಕೆ ಪರಿಹಾರ ತ್ವರಿತ ಟೋಲ್ ಸಂಗ್ರಹಣೆ, ಹ್ಯಾಶ್ ಟ್ಯಾಗ್ ವ್ಯವಸ್ಥೆ ಆಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+