ಟ್ರಾಫಿಕ್ ದಂಡದಲ್ಲಿ 50% ರಿಯಾಯಿತಿ ವಿಸ್ತರಣೆಗೆ ತಜ್ಞರ ವಿರೋಧ, ಕಾರಣಗಳು ಇಲ್ಲಿವೆ

ರಿಯಾಯಿತಿಗಳನ್ನು ನೀಡುವುದು ಸಂಚಾರ ನಿಯಮ ಉಲ್ಲಂಘನೆ ಮಾಡುವವರನ್ನು ಉತ್ತೇಜಿಸುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಫೆಬ್ರವರಿ. 16: ಟ್ರಾಫಿಕ್ ದಂಡಕ್ಕೆ ಶೇಕಡಾ 50 ರಷ್ಟು ರಿಯಾಯಿತಿ ಘೋಷಿಸಿದ ಮೇಲೆ ಸಾವಿರಾರು ಮಂದಿ ಹಣ ಕಟ್ಟಿದ್ದು, ಬೋಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಹರಿದು ಬಂದಿದೆ. ಜನರು ಕೂಡ ದಂಡ ಪಾವತಿಸಲು ಬರುತ್ತಿದ್ದು, ದಿನವನ್ನು ಮತ್ತಷ್ಟು ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಕೇಳಿ ಬಂದಿತ್ತು. ಇದಕ್ಕೆ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಸಂಚಾರ ದಂಡದ ಮೇಲಿನ ಶೇಕಡಾ 50 ರಷ್ಟು ರಿಯಾಯಿತಿಯನ್ನು ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಿದ್ದರೆ, ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರು ಅದನ್ನು ವಿರೋಧಿಸಿದ್ದಾರೆ.

ಈ ರಿಯಾಯಿತಿ ಯೋಜನೆಯು ದಂಡವನ್ನು ವಿಧಿಸಿದ ಏಕೈಕ ಉದ್ದೇಶಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದು ತಜ್ಞರು ವಾದಿಸಿದ್ದು, ಸಂಚಾರ ನಿಯಮಗಳ ಉಲ್ಲಂಘನೆಯು ಸಾವು ನೋವುಗಳಿಗೆ ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ರೀತಿ ಆಗ್ಗಾಗೆ ರಿಯಾಯಿತಿಗಳನ್ನು ನೀಡುವುದು ಸಂಚಾರ ನಿಯಮ ಉಲ್ಲಂಘನೆ ಮಾಡುವವರನ್ನು ಉತ್ತೇಜಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Traffic fine rebate will encourage violators says Experts

"ಟ್ರಾಫಿಕ್ ದಂಡವನ್ನು ವಿಧಿಸುವ ಮುಖ್ಯ ಉದ್ದೇಶ ನಿಯಮಗಳನ್ನು ಉಲ್ಲಂಘಿಸಿ ತಮಗೆ ಮತ್ತು ಇತರರನ್ನು ಅಪಾಯಕ್ಕೆ ತಳ್ಳುವವರ ವಿರುದ್ಧ ಕಾರ್ಯನಿರ್ವಹಿಸಲು. ಸರ್ಕಾರಕ್ಕೆ ಆದಾಯ ತರುವುದು ಮುಖ್ಯ ಉದ್ದೇಶವಲ್ಲ. ಅಂತಹ ರಿಯಾಯಿತಿಗಳನ್ನು ನೀಡುವ ಮೂಲಕ, ಈ ಉದ್ದೇಶವನ್ನೇ ದುರ್ಬಲಗೊಳಿಸುತ್ತಿದ್ದೀರಿ. ಜೊತೆಗೆ ಸಂಚಾರ ಕಾನೂನು ಜಾರಿಯ ಮುಖ್ಯ ಉದ್ದೇಶವನ್ನು ಸೋಲಿಸುತ್ತಿದ್ದೀರಿ" ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಯ ತಜ್ಞರಾದ ಆಶಿಶ್ ವರ್ಮಾ ಹೇಳಿದ್ದಾರೆ.

"ಸಂಚಾರ ನಿಯಮ ಉಲ್ಲಂಘನೆಗಳಲ್ಲಿ ಹಲವು ಬಾರಿ ರಸ್ತೆ ಅಪಘಾತ ಸಂಬಂಧಿತ ಗಾಯಗಳು ಮತ್ತು ವಾಹನ ಸವಾರರ ಸಾವುಗಳಿಗೆ ಕಾರಣವಾಗುತ್ತವೆ. ಇದರಲ್ಲಿ ಪಾದಚಾರಿಗಳು, ಸೈಕ್ಲಿಸ್ಟ್‌ಗಳು ಮತ್ತು ದ್ವಿಚಕ್ರ ವಾಹನ ಬಳಕೆದಾರರು, ಕಡಿಮೆ ಆದಾಯದ ಕುಟುಂಬಗಳು ಮತ್ತು ಹೆಚ್ಚಿನ ಯುವಕರು ಸಂತ್ರಸ್ತರಾಗುತ್ತಾರೆ. ಇದು ಜನಪರವಾದ ಕ್ರಮವಲ್ಲ ಆದರೆ ವಾಸ್ತವವಾಗಿ ಜನವಿರೋಧಿ ಕ್ರಮವಾಗಿದೆ" ಎಂದು ಆಶಿಶ್ ವರ್ಮಾ ಹೇಳಿದ್ದಾರೆ.

ಈ ರೀತಿ ಪದೇ ಪದೇ ರಿಯಾಯಿತಿಗಳನ್ನು ನೀಡುವ ಮೂಲಕ, ಸಂಚಾರ ಕಾನೂನುಗಳನ್ನು ಉಲ್ಲಂಘಿಸಲು ನಿಮ್ಮನ್ನು ಪ್ರೋತ್ಸಾಹಿಸಲಾಗುತ್ತದೆ ಎಂಬ ಸಂದೇಶವನ್ನು ನಾವು ಜನಸಾಮಾನ್ಯರಿಗೆ ನೀಡುತ್ತಿದ್ದೇವೆ. ವಿಧಿಸಿರುವ ಭಾರೀ ದಂಡವನ್ನು ಪಾವತಿಸಬೇಕಾಗಿಲ್ಲ ಏಕೆಂದರೆ ನಾವು ಕಾಲಕಾಲಕ್ಕೆ ರಿಯಾಯಿತಿಗಳನ್ನು ನೀಡುತ್ತೇವೆ" ಎಂದು ಅವರಿಗೆ ನಾವೇ ಸೂಚನೆ ನೀಡಿದಂತಾಗುತ್ತದೆ ಎಂಬ ಆತಂಕ ಹೊರಹಾಕಿದ್ದಾರೆ.

Traffic fine rebate will encourage violators says Experts

ಸಂಚಾರ ನಿಯಮ ಉಲ್ಲಂಘನೆಉ ದಂಡದಲ್ಲಿ ರಿಯಾಯಿತಿ ನೀಡುವ ಬದಲು, ಸಾಧ್ಯವಾದರೆ ಸರ್ಕಾರ ದಂಡವನ್ನು ಹೆಚ್ಚಿಸಬೇಕು ಎಂದು ಬೆಂಗಳೂರಿನ ನಾಗರಿಕರ ಕಾರ್ಯಸೂಚಿಯ ಸಂಸ್ಥಾಪಕ ಸಂದೀಪ್ ಅನಿರುಧನ್ ಅಭಿಪ್ರಾಯಪಟ್ಟಿದ್ದಾರೆ.

"ಬೆಂಗಳೂರಿನಲ್ಲಿ ಈಗೀನ ಕಾನೂನುಬಾಹಿರ ಪರಿಸ್ಥಿತಿಯನ್ನು ಗಮನಿಸಿದರೆ, ರಿಯಾಯಿತಿಯ ಮೂಲಕ ಪರಿಹಾರವನ್ನು ನೀಡುವ ಬದಲು ಹೆಚ್ಚಿನ ದಂಡವನ್ನು ವಿಧಿಸುವುದು ಅವಶ್ಯಕ. ಜನರು ರಾಂಗ್ ರೂಟ್‌ನಲ್ಲಿ ವಾಹನ ಚಲಾಯಿಸುವುದು, ಸಿಗ್ನಲ್‌ಗಳು ಮತ್ತು ಪಾರ್ಕಿಂಗ್ ಚಿಹ್ನೆಗಳನ್ನು ಉಲ್ಲಂಘಿಸುವುದು, ಫುಟ್‌ಪಾತ್‌ಗಳಲ್ಲಿ ಪಾರ್ಕಿಂಗ್ ಮಾಡುವುದನ್ನು ನಾವು ನೋಡಬಹುದು. ಕಾನೂನಿನ ಭಯವೇ ಇಲ್ಲದ ಸ್ಥಿತಿಗೆ ತಲುಪಿದೆ " ಎಂದು ಸಂದೀಪ್ ಅನಿರುಧನ್ ಹೇಳಿದ್ದಾರೆ.

ಮಾಹಿತಿ ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+