ಈದ್-ಮಿಲಾದ್, ಚಿತ್ರಸಂತೆಗಾಗಿ ಮಾರ್ಗ ಬದಲಾವಣೆ

ಬೆಂಗಳೂರು, ಜ.3 : ಜನವರಿ 4ರ ಭಾನುವಾರ ಮುಸ್ಲಿಂ ಬಾಂಧವರು 'ಈದ್-ಮಿಲಾದ್' ಹಬ್ಬವನ್ನು ಆಚರಣೆ ಮಾಡಲಿದ್ದಾರೆ. ಆದ್ದರಿಂದ ನೃಪತುಂಗ ರಸ್ತೆಯಲ್ಲಿನ ವೈ.ಎಂ.ಸಿ.ಎ ಮೈದಾನಕ್ಕೆ ಹೆಚ್ಚು ಜನರು ಅಲಂಕೃತ ವಾಹನ ಹಾಗೂ ಮೆರವಣಿಗೆ ಮೂಲಕ ಆಗಮಿಸಲಿದ್ದಾರೆ.

ಮೆರವಣಿಗೆ ಮತ್ತು ಜನರು ವೈ.ಎಂ.ಸಿ.ಎ.ಮೈದಾನಕ್ಕೆ ಆಗಮಿಸುವ ವೇಳೆಯಲ್ಲಿ ಜೆ.ಸಿ ರಸ್ತೆ, ಆರ್.ಆರ್.ಎಂ.ಆರ್ ರಸ್ತೆ, ಕೆ.ಬಿ ರಸ್ತೆ, ದೇವಾಂಗ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ಸೇಂಟ್ ಜಾನ್ ಚರ್ಚ್ ರಸ್ತೆ, ಹಜ್ ಕ್ಯಾಂಪ್ ಜಂಕ್ಷನ್, ಬ್ರಾಡವೇ ರಸ್ತೆ, ಕ್ವೀನ್ಸ್ ರಸ್ತೆಗಳಲ್ಲಿ ಹೆಚ್ಚು ವಾಹನ ಸಂಚಾರವಿರುತ್ತದೆ.

ಆದ್ದರಿಂದ ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸಂಚಾರಗಳ ಮಾರ್ಗಗಳನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಸಂಚಾರ ಮಾರ್ಗ ಬದಲಾವಣೆಯನ್ನು ಸಾರ್ವಜನಿಕರು ಗಮನಿಸಿ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.

Traffic Police

ಸಂಚಾರ ಮಾರ್ಗ ಹೀಗಿದೆ
* ನಾಗವಾರ ಕಡೆಯಿಂದ ಪ್ಯಾಟರಿ ರಸ್ತೆ ಕಡೆಗೆ ಬರುವ ವಾಹನ ಸಂಚಾರವನ್ನು ನಿರ್ಭಂದಿಸಲಾಗಿದ್ದು, ನಾಗವಾರ ಸಿಗ್ನಲ್ ಬಳಿ ಎಡತಿರುವು ಪಡೆದು ಕೊಂಡು ಹೆಚ್.ಬಿ.ಅರ್. ಲೇಔಟ್ ಮುಖಾಂತರ ಲಿಂಗರಾಜಪುರ ಮತ್ತು ಡೇವಿಸ್‍ರಸ್ತೆಗೆ ಸೇರಿ ಅಲ್ಲಿಂದ ಮುಂದೆ ಸಾಗಬಹುದಾಗಿದೆ.

* ಬಂಬೂ ಬಜಾರ್ ಕಡೆಯಿಂದ ಟ್ಯಾನರಿ ರಸ್ತೆ ನಾಗವಾರ ಕಡೆಗೆ ಹೋಗುವ ವಾಹನ ಸಂಚಾರವನ್ನು ನಿರ್ಭಂದಿಸಲಾಗಿದ್ದು, ಬಂಬೂಬಜಾರ್ ನಿಂದ ನೇತಾಜಿ ರಸ್ತೆ ಮುಖಾಂತರ ಸಂಚರಿಸಿ ಹೆಣ್ಣೂರು ಮುಖ್ಯ ರಸ್ತೆ ಸೇರಿ ಲಿಂಗರಾಜಪುರಕ್ಕೆ ಮುಖಾಂತರ ಹೆಚ್.ಬಿ.ಅರ್. ಲೇಔಟ್‍ಗೆ ಸೇರಿ ಅಲ್ಲಿಂದ ನಾಗವಾರ ಕಡೆಗೆ ಸಂಚರಿಸಬೇಕು.

* YMCA ಮೈದಾನದಲ್ಲಿ ನಡೆಯುವ ಸಭೆಯ ಅಂಗವಾಗಿ ನೃಪತುಂಗ ರಸ್ತೆಯಲ್ಲಿನ ಸಂಚಾರವನ್ನು ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಕಾರ್ಯಕ್ರಮ ಮುಕ್ತಾಯವಾಗುವ ತನಕ ನಿರ್ಬಂಧಿಸಲಾಗಿದೆ. ನೃಪತುಂಗ ರಸ್ತೆಯಲ್ಲಿ ಕೆ.ಆರ್ ಸರ್ಕಲ್‍ನಿಂದ ಪೊಲೀಸ್ ಕಾರ್ನರ್ ವರೆಗೆ ವಾಹನ ಸಂಚಾರ ಮತ್ತು ನಿಲುಗಡೆ ನಿಷೇಧಿಸಲಾಗಿದೆ.

* ಕೆ.ಆರ್ ಸರ್ಕಲ್‍ನಿಂದ ನೃಪತುಂಗ ರಸ್ತೆಯನ್ನು ಬಳಸಿ ಹಾದು ಹೋಗುವ ವಾಹನಗಳು ಕೆ.ಆರ್ ವೃತ್ತದಲ್ಲಿ ಕಬ್ಬನ್ ಉದ್ಯಾನವನವನ್ನು ಪ್ರವೇಶಿಸಿ ಸಿದ್ದಲಿಂಗಯ್ಯ ವೃತ್ತ, ಮಲ್ಯ ಆಸ್ಪತ್ರೆ ರಸ್ತೆ, ಹಾಗೂ ಆರ್.ಆರ್.ಎಂ.ಆರ್ ಮೂಲಕ ಮುಂದಕ್ಕೆ ಕೆ.ಆರ್ ಮಾರುಕಟ್ಟೆ, ಜಯನಗರ, ಹೊಸೂರು ರಸ್ತೆ, ಕನಕಪುರ ರಸ್ತೆ, ಬನಶಂಕರಿ ಮುಂತಾದ ಕಡೆ ಸಾಗಬಹುದಾಗಿದೆ.

* ಕೆ.ಜಿ.ರಸ್ತೆಯನ್ನು ಪೊಲೀಸ್ ಕಾರ್ನರ್ ವೃತ್ತದಿಂದ ಮೈಸೂರು ಬ್ಯಾಂಕ್ ವೃತ್ತದ ವರೆಗೆ ದ್ವಿಮುಖ ವಾಹನ ಸಂಚಾರ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಮಾಡಲಾಗಿದ್ದು, ವಾಹನ ಸವಾರರು ಕೆ.ಆರ್.ವೃತ್ತದ ಮೂಲಕ ಹಳೇ ಅಂಚೆ ಕಛೇರಿ ರಸ್ತೆಯಲ್ಲಿ (ಸಿಟಿ ಸಿವಿಲ್ ಕೋರ್ಟ್) ಸಾಗಿ ಕೆ.ಜಿ.ರಸ್ತೆಗೆ ಎಡ ತಿರುವು ಪಡೆದು ಪೊಲೀಸ್ ಕಾರ್ನರ್ ಮೂಲಕವೂ ಮುಂದೆ ಸಾಗಬಹುದಾಗಿದೆ.

kumarakrupa road

ಕುಮಾರಕೃಪಾ ರಸ್ತೆ ಬಂದ್ : ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್‌ನಲ್ಲಿ ಭಾನುವಾರ ಚಿತ್ರಸಂತೆ ನಡೆಯುವುದರಿಂದ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯ ತನಕ ಕುಮಾರಕೃಪಾ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ. ವಾಹನ ಸವಾರರು ರೇಸ್ ಕೋರ್ಸ್ ರಸ್ತೆ ಮೂಲಕ ಬಳ್ಳಾರಿ ರಸ್ತೆ ಮತ್ತು ಮೆಜೆಸ್ಟಿಕ್‌ಗೆ ತಲುಪಬಹುದು ಎಂದು ಪೊಲೀಸರು ಪ್ರಕಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+