Bengaluru Traffic Advisory: ಮೇ 6ಕ್ಕೆ ಪ್ರಧಾನಿ ಮೋದಿ ರೋಡ್ ಶೋ, 34 ರಸ್ತೆಗಳಲ್ಲಿ ಸಂಚಾರ ಬಂದ್, ವಿವರ
ಬೆಂಗಳೂರು, ಮೇ 05: ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆ ಸಂಬಂಧ ರಾಜಕೀಯ ಪಕ್ಷಗಳು ಸಖತ್ ಆಕ್ವೀವ್ ಆಗಿವೆ. ಅದರಲ್ಲೂ ಬಿಜೆಪಿ ಪರ ಮತಯಾಚನೆ ಮತ್ತು ಪ್ರಚಾರ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿವಯರು ರಾಜ್ಯದ ಮೂಲೆ ಮೂಲೆಗಳಲ್ಲೂ ಸಂಚರಿಸುತ್ತಿದ್ದಾರೆ. ನಾಳೆ ಶನಿವಾರ ಮೇ 6ರಂದು ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬೃಹತ್ ರೋಡ್ ಶೋ ನಡೆಯಲಿದ್ದು, ನಗರದ ಈ ಮಾರ್ಗಗಳಲ್ಲಿನ ಸಂಚಾರ ನಿಷೇಧಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಒಟ್ಟು ಬೆಂಗಳೂರಿನ 36 ಕಿಲೋ ಮೀಟರ್ ರೋಡ್ ಶೋ ನಡೆಸಲಿದ್ದಾರೆ. ನಗರದ ಹೃದಯ ಭಾಗದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಡೆಸಲಿದ್ದಾರೆ. ಈ ಸಂಬಂಧ ಪೊಲೀಸರು ಸಾಕಷ್ಟು ಭದ್ರತೆ ಕೈಗೊಂಡಿದ್ದಾರೆ.

ಇತ್ತ ಸಂಚಾರಿ ಪೊಲೀಸರು ನಗರ ಜನರಿಗೆ ನಾಳೆ ಶನಿವಾರಕ್ಕೆ ಸಂಬಂಧಿಸಿದಂತೆ ಕೆಲವು ಮಾರ್ಗಗಳನ್ನು ನಿಷೇಧಿಸಿರುವ ಬಗ್ಗೆ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 8ಗಂಟೆಯಿಂದ ಮಧ್ಯಾಹ್ನ 01 ಗಂಟೆವರೆಗೆ ನಗರದಲ್ಲಿ ಈ ಕೆಳಕಂಡ 34 ರಸ್ತೆಗಳನ್ನು ಬಂದ್ ಮಾಡಲಾಗಿದೆ. ಆದರೆ ಪರ್ಯಾಯ ಮಾರ್ಗಗಳನ್ನು ಯಾವುದೆಂದು ಇನ್ನು ತಿಳಿಸಿಲ್ಲ.
ರದ್ದಾದ ಸಂಚಾರ ಮಾರ್ಗಗಳ ವಿವರ
* ರಾಜಭವನ ರಸ್ತೆ
* ರಮಣಮಹರ್ಷಿ ರಸ್ತೆ
* ಮೇಖ್ರೀ ವೃತ್ತ
* ಆರ್.ಬಿ.ಐ ಲೇಔಟ್, ಜೆ.ಪಿನಗರ
* ರೋಸ್ ಗಾರ್ಡನ್, ಜೆ.ಪಿ ನಗರ
* ಶಿರ್ಸಿ ವೃತ್ತ
* ಜೆ.ಜೆ ನಗರ
* ಜಿನ್ನಿ ಮಿಲ್ ರಸ್ತೆ
* ಶಾಲಿನಿ ಮೈದಾನ
* ಸೌತ್ ಎಂಡ್ ವೃತ್ತ
* ಆರ್ಮುಗಂ ವೃತ್ತ
* ಬುಲ್ ಟೆಂಪಲ್ ರಸ್ತೆ
* ರಾಮಕೃಷ್ಣಾಶ್ರಮ
* ಉಮಾ ಟಾಕೀಸ್
* ಟಿ.ಆರ್.ಮೀಲ್
* ಚಾಮರಾಜಪೇಟೆ ಮುಖ್ಯರಸ್ತೆ
* ಬಾಳೇಕಾಯಿ ಮಂಡಿ
* ಕೆ.ಪಿ ಆಗ್ರಹಾರ

* ಮಾಗಡಿ ಮುಖ್ಯರಸ್ತೆ
* ಚೋಳರುಪಾಳ್ಯ
* ಎಂ.ಸಿ ವೃತ್ತ
* ಪಶ್ಚಿಮ ಕಾರ್ಡ್ ವೃತ್ತ
* ಎಂ.ಸಿ.ಲೇಔಟ್, ನಾಗರಬಾವಿ ಮುಖ್ಯ ರಸ್ತೆ
* ಬಿ.ಜಿ.ಎಸ್ ಮೈದಾನ
* ಹಾವನೂರು ವೃತ್ತ
* 8ನೇ ಮುಖ್ಯರಸ್ತೆ, ಬಸವೇಶ್ವರನಗರ
* ಬಸವೇಶ್ವರ ನಗರ 15ನೇ ಮುಖ್ಯರಸ್ತೆ
* ಶಂಕರಮಠ
* ಮೋದಿ ಆಸ್ಪತ್ರೆ ರಸ್ತೆ
* ನವರಂಗ್ ವೃತ್ತ
* ಎಂ.ಕೆ.ಕೆ. ರಸ್ತೆ
* ಮಲ್ಲೇಶ್ವರಂ ವೃತ್ತ
* ಸಂಪಿಗೆ ರಸ್ತೆ
*ಸ್ಯಾಂಕಿ ರಸ್ತೆ,












Click it and Unblock the Notifications