ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಈ ದಿನದ ವಿವರ: ಕರ್ನಾಟಕದಲ್ಲಿ 1 ಪಾಸಿಟಿವ್, 71 ನೆಗಟಿವ್

|
Google Oneindia Kannada News

ಬೆಂಗಳೂರು, ಮಾರ್ಚ್ 17: ಕರ್ನಾಟಕದಲ್ಲಿಂದು ಒಟ್ಟು 71 ಕೊರೊನಾ ಶಂಕಿತರ ಫಲಿತಾಂಶ ನೆಗಿಟಿವ್ ಬಂದಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಖಚಿತಪಡಿಸಿದೆ.

ಕೊರೊನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕೃತ ವಿವರ ನೀಡಿರುವ ಕರ್ನಾಟಕ ಆರೋಗ್ಯ ಇಲಾಖೆ, ಇಂದು ಎಷ್ಟು ಜನರನ್ನು ಪರೀಕ್ಷೆ ಮಾಡಲಾಯಿತು, ಎಷ್ಟು ಜನರ ರಕ್ತ ಸಂಗ್ರಹಿಸಲಾಗಿದೆ ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿದೆ.

ಕೊರೊನಾ ಆತಂಕ: ಇರಾನ್‌ನಲ್ಲಿ 85,000 ಕೈದಿಗಳ ತಾತ್ಕಾಲಿಕ ಬಿಡುಗಡೆಕೊರೊನಾ ಆತಂಕ: ಇರಾನ್‌ನಲ್ಲಿ 85,000 ಕೈದಿಗಳ ತಾತ್ಕಾಲಿಕ ಬಿಡುಗಡೆ

ಇಂದಿನ ಇವರ

ಮಾರ್ಚ್ 17 ರಂದು ಒಟ್ಟು 351 ಜನರ ಮೇಲೆ ನಿಗಾ ವಹಿಸಲಾಗಿದೆ. 20 ಜನರು ಈ ದಿನಕ್ಕೆ 28 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 319 ಜನರನ್ನು ಇಂದು ಮನೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. 32 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. 48 ಜನರ ರಕ್ತದ ಮಾದರಿಯನ್ನು ಇಂದು ಸಂಗ್ರಹಿಸಲಾಗಿದೆ. 71 ಜನರ ಫಲಿತಾಂಶ ಇಂದು ನೆಗಿಟಿವ್ ಎಂದು ಬಂದಿದೆ. ಒಬ್ಬರ ಫಲಿತಾಂಶ ಪಾಸಿಟಿವ್ ಆಗಿದೆ.

Total 11 Cases Confirmed In Karnataka Said Health Department

ಒಟ್ಟಾರೆ ಕರ್ನಾಟಕದ ವಿವರ

ಇದುವರೆಗೂ ಕರ್ನಾಟಕದಲ್ಲಿ ಕೊರೊನಾ ಸೋಂಕು ಇದೆ ಎಂದು ಪಟ್ಟಿ ಮಾಡಿದವರಲ್ಲಿ 766 ಜನರಿಗೆ ಫಲಿತಾಂಶ ನೆಗಿಟಿವ್ ಬಂದಿದೆ. ಒಟ್ಟು 11 ಜನರಿಗೆ ಪಾಸಿಟಿವ್ ಬಂದಿದೆ. ಅದರಲ್ಲಿ ಒಬ್ಬ ವೃದ್ದ ಸಾವನ್ನಪ್ಪಿದ್ದಾನೆ.

ವಿಶ್ವ ಆರೋಗ್ಯ ಸಂಸ್ಥೆಯ ಇಬ್ಬರು ಸಿಬ್ಬಂದಿಗೆ ಕೊರೊನಾ ಸೋಂಕುವಿಶ್ವ ಆರೋಗ್ಯ ಸಂಸ್ಥೆಯ ಇಬ್ಬರು ಸಿಬ್ಬಂದಿಗೆ ಕೊರೊನಾ ಸೋಂಕು

ಭಾರತದಲ್ಲಿ ಒಟ್ಟು 137 ಕೊರೊನಾ ಸೋಕಿತರು ಪತ್ತೆಯಾಗಿದ್ದಾರೆ. ಮಹಾರಾಷ್ಟ್ರ ಒಂದರಲ್ಲೇ 41 ಜನ ದಾಖಲಾಗಿದ್ದಾರೆ. ಜಗತ್ತಿನಲ್ಲಿ 1,88,383 ಕೊರೊನಾ ಕೇಸ್‌ಗಳು ದಾಖಲಾಗಿದೆ. ಅದರಲ್ಲಿ 7,499 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಚೀನಾದಲ್ಲಿ 3226 ಜನರು, ಇಟಲಿಯಲ್ಲಿ 2158 ಜನರು ಹಾಗೂ ಇರಾನ್‌ನಲ್ಲಿ 988 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

English summary
Department of Health and Family Welfare Services, Bengaluru: Till date, 11 COVID19 positive cases have been reported in Karnataka state, including one death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X