Get Updates
Get notified of breaking news, exclusive insights, and must-see stories!

Koramangala: ಕೋರಮಂಗಲದಲ್ಲಿ ಭೇಟಿ ನೀಡಲೇಬೇಕಾದ ಟಾಪ್‌ 10 ರೆಸ್ಟೋರೆಂಟ್‌ಗಳಿವು

ಬೆಂಗಳೂರು, ಜನವರಿ 16: ಬೆಂಗಳೂರಿನಲ್ಲಿ ಕೋರಮಂಗಲ ಎಂಜಾಯ್‌ ಮಾಡಬೇಕು ಎಂದುಕೊಂಡವರಿಗೆ ಹಾಟ್‌ ಸ್ಟಾಟ್‌. ಪಬ್‌ಗಳನ್ನು ಅತಿ ಹೆಚ್ಚು ಹೊಂದಿರುವ ಬೆಂಗಳೂರಿನ ಏರಿಯಾಗಳಲ್ಲಿ ಕೋರಮಂಗಲ ಕೂಡ ಒಂದು. ಇದೊಂದು ಬೆಂಗಳೂರಿನ ಐಟಿ ಹಬ್‌ಗಳಲ್ಲಿ ಇದು ಕೂಡ ಒಂದಾಗಿದ್ದು. ಇಲ್ಲಿ ಅನೇಕ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಈ ಭಾಗದಲ್ಲಿ ಜನಸಂಖ್ಯೆಯೂ ಹೆಚ್ಚಾಗಿದೆ.

ಕೋರಮಂಗಲ ಆಹಾರ ಪ್ರಿಯರಿಗೂ ಮೆಚ್ಚಿನ ತಾಣ. ಕೋರಮಂಗಲಕ್ಕೆ ಬಂದರೆ ಉತ್ತಮ ಊಟಕ್ಕಾಗಿ ಹೆಚ್ಚೇನು ಹುಡುಕ ಬೇಕೆಂದಿಲ್ಲ. ಯಾಕೆಂದರೆ ಇಲ್ಲಿನ ಹೆಜ್ಜೆ ಹೆಜ್ಜೆಗೂ ಅತ್ಯುತ್ತಮವಾದ ಹೋಟೆಲ್‌, ರೆಸ್ಟೋರೆಂಟ್‌ಗಳು ಲಭ್ಯವಿದೆ. ಹೀಗಾಗಿ ಕೋರಮಂಗಲದಲ್ಲಿ ನೀವು ಭೇಟಿ ನೀಡಬಹುದಾದ ಟಾಪ್‌ 10 ರೆಸ್ಟೋರೆಂಟ್‌ಗಳ ಪಟ್ಟಿ ಇಲ್ಲಿದೆ.

Top 10 Restaurants In Koramangala, Bengaluru

1.ಚೀನಾ ಪರ್ಲ್ (China Pearl)

ಚೈನಾ ಪರ್ಲ್ ಒಂದು ಸಾಂಪ್ರದಾಯಿಕ ಚೈನೀಸ್ ರೆಸ್ಟೋರೆಂಟ್ ಆಗಿದ್ದು, ಉತ್ತಮ ಗುಣಮಟ್ಟದ ಆಹಾರ ನೀಡುತ್ತದೆ. ಇಲ್ಲಿನ ವಾತಾವರಣ ಆಹ್ಲಾದಕರವಾಗಿದೆ. ಇಲ್ಲಿನ ಮೆನುವಿನಲ್ಲಿ ಸೂಪ್‌ಗಳು, ನೂಡಲ್ಸ್, ಸಲಾಡ್‌ಗಳು ಜನಪ್ರಿಯವಾಗಿದೆ. ಚಿಕನ್‌ ಹಾಗೂ ಫಿಶ್‌ನ ಎಲ್ಲಾ ರೀತಿಯ ಖಾದ್ಯಗಳು ಇಲ್ಲಿ ದೊರೆಯುತ್ತದೆ.

ಸಸ್ಯಹಾರಿ ಖಾದ್ಯಗಳು ಹಾಗೂ ಸಿಹಿತಿಂಡಿಗಳು ಲಭ್ಯವಿದ್ದು, ಕೇಕ್ ಮತ್ತು ಐಸ್ ಕ್ರೀಮ್ ಪ್ರತಿಯೊಂದು ಕೂಡ ಇಲ್ಲಿ ಉತ್ತಮ ರುಚಿಯನ್ನು ಹೊಂದಿದೆ. ಇಲ್ಲಿನ ಚೈನೀಸ್ ಖಾದ್ಯಗಳು ಹೆಚ್ಚು ಹೆಸರುವಾಸಿಯಾಗಿದ್ದು, ಈ ರೆಸ್ಟೋರೆಂಟ್‌ಗೆ ಡ್ರಂಕನ್ ಫಿಶ್, ಕ್ಲೇ ಪಾಟ್ ರೈಸ್, ಕ್ರ್ಯಾಬ್ ಮೀಟ್ ಸೂಪ್, ಡ್ರಮ್ ಸ್ಟಿಕ್ಸ್ ಮತ್ತು ಚಿಲ್ಲಿ ಪೊಟ್ಯಾಟೋಸ್‌ ಮಿಸ್‌ ಮಾಡದೇ ಟೇಸ್ಟ್‌ ಮಾಡಿ.

ಕೋರಮಂಗಲದ ಆರನೇ ಬ್ಲಾಕ್‌ನಲ್ಲಿರುವ ಈ ರೆಸ್ಟೋರೆಂಟ್ ವಾರದ ಏಳು ದಿನವೂ ತೆರದಿರುತ್ತದೆ. ಮಧ್ಯಾಹ್ನ 12:00 ಗಂಟೆಯಿಂದ ರಾತ್ರಿ 10:45ರವರೆಗೆ ತೆರೆದಿರುತ್ತದೆ. ವೆಜ್‌ ಹಾಗೂ ನಾನ್‌ವೆಜ್‌ ಎರಡೂ ರೀತಿಯ ಆಹಾರಗಳು ಇಲ್ಲಿ ಲಭ್ಯವಿದೆ.

2. ಟ್ರಫಲ್ಸ್‌( Truffles)

ಬೆಂಗಳೂರಿನಲ್ಲಿ ದಿ ಬೆಸ್ಟ್‌ ಬರ್ಗರ್‌ ರುಚಿ ನೋಡಬೇಕೆಂದುಕೊಂಡವರು ಟ್ರಫಲ್ಸ್‌ಗೆ ಭೇಟಿ ನೀಡಿ. ಈ ರೆಸ್ಟೋರೆಂಟ್‌ ಬರ್ಗರ್‌ಗೆ ಹೆಚ್ಚು ಜನಪ್ರಿಯತೆ ಪಡೆದಿದ್ದು, ಇಲ್ಲಿನ ಇತರ ಖಾದ್ಯಗಳು ಕೂಡ ಉತ್ತಮ ಗುಣಮಟ್ಟದ್ದಾಗಿದೆ. ಇಲ್ಲಿನ ಚಿಕನ್‌ ಹಾಗೂ ಫಿಶ್‌ ಪೆರಿ ಪೆರಿ ಬರ್ಗರ್, ಅಮೇರಿಕನ್ ಬರ್ಗರ್ ಹೆಚ್ಚು ಜನಪ್ರಿಯತೆ ಪಡೆದಿದ್ದು, ಬರ್ಗರ್ ಜೊತೆಗೆ ರುಚಿಯಾದ ಚಿಪ್ಸ್‌ಗಳನ್ನು ಸಹ ನೀಡುತ್ತಾರೆ.

ವಿವಿಧ ರೀತಿಯ ಕೇಕ್‌ ಹಾಗೂ ಜ್ಯೂಸ್‌ಗಳು ಇಲ್ಲಿ ಲಭ್ಯವಿದ್ದು, ಆಹ್ಲಾದಕರ ವಾತಾವರಣದಲ್ಲಿ ಒಂದೊಳ್ಳೆ ಸಂಜೆ ಕಳೆಯಲು ಇದು ಕೋರಮಂಗಲದಲ್ಲಿ ಉತ್ತಮವಾದ ಸ್ಥಳವಾಗಿದೆ. ಇಲ್ಲಿಗೆ ಭೇಟಿ ನೀಡಿದಾಗ ಬರ್ಗರ್‌ ಜೊತೆ ಬಟರ್‌ ಫ್ರಾನ್ಸ್‌, ಬಬಲ್ ಟೀ, ಗ್ರೀನ್ ಆಪಲ್/ಮಿಂಟ್ ಮೊಜಿಟೊದಂತಹ ವಿಶೇಷವಾದ ಖಾದ್ಯವನ್ನು ಟೇಸ್ಟ್‌ ಮಾಡಲು ಮಿಸ್‌ ಮಾಡಬೇಡಿ.

Top 10 Restaurants In Koramangala, Bengaluru

3. ಬಾಂಬೆ ಅಡ್ಡಾ(Bombay Adda)

ಬೆಂಗಳೂರಿನಲ್ಲಿ ನೆಟ್‌ ಔಟ್‌ ಎಂಜಾಯ್‌ ಮಾಡಲು ಬಾಂಬೆ ಅಡ್ಡಾ ಸೂಕ್ತವಾದ ಸ್ಥಳ. ಜೊತೆಗೆ ರುಚಿಕರವಾದ ಊಟವನ್ನು ಸವಿಯಲು ಕೂಡ ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ಭಾರತೀಯ ಮತ್ತು ಯುರೋಪಿಯನ್ ಶೈಲಿಯ ವಿವಿಧ ಖಾದ್ಯಗಳು ಲಭ್ಯವಿದೆ. ಇಲ್ಲಿನ ಗನ್ಪೌಡರ್ ಫಿಶ್, ಮುಂಬೈ ಸ್ಯಾಂಡ್ವಿಚ್, ಚಾಕೊಲೇಟ್ ಮೌಸ್ಸ್ ಕೇಕ್, ಚಾಕೊಲೇಟ್ ಡೆಸರ್ಟ್, ನ್ಯಾಚೋಸ್ ಎನ್ ಸಾಲ್ಸಾ ಮಿಸ್‌ ಮಾಡದೇ ಟೇಸ್ಟ್‌ ಮಾಡಿ.

ಈ ರೆಸ್ಟೋರೆಂಟ್‌ನಲ್ಲಿ ಆಗಾಗ ಈವೆಂಟ್‌ಗಳು ಮತ್ತು ಪಾರ್ಟಿಗಳನ್ನು ಆಯೋಜಿಸಲಾಗುತ್ತದೆ. ಡಾನ್ಸ್‌, ಹಾಡು, ರುಚಿಕರವಾರ ಆಹಾರದ ಜೊತೆ ಇಲ್ಲಿ ಸಮಯ ಕಳೆಯಬಹುದು. ವೀಕೆಂಡ್‌ ಮಾತ್ರವಲ್ಲದೇ ವಾರದ ದಿನಗಳಲ್ಲಿ ಸಹ ಎಂಜಾಯ್‌ ಮಾಡಬೇಕು ಎಂದುಕೊಂಡವರು ಬಾಂಬೆ ಅಡ್ಡಾ ಸೂಕ್ತವಾದ ಸ್ಥಳ.

4.ದಿ ಬ್ಲ್ಯಾಕ್‌ ಪರ್ಲ್‌( The Black Pearl)

ಜ್ಯೋತಿ ನಿವಾಸ್ ಪ್ರಿ-ಯೂನಿವರ್ಸಿಟಿ ಕಾಲೇಜು ಹತ್ತಿರ ಇರುವ ದಿ ಬ್ಲ್ಯಾಕ್‌ ಪರ್ಲ್‌ ರೆಸ್ಟೋರೆಂಟ್‌ ವಿವಿಧ ದೇಶದ ವಿವಿಧ ಬಗೆಯ ರುಚಿಕರ ಆಹಾರ ಸವಿಯ ಬಯಸುವವರಿಗೆ ಸೂಕ್ತವಾದ ಸ್ಥಳ ಇಲ್ಲಿನ ಆಹ್ಲಾದಕರ ವಾತಾವರಣ, ಬಡಿಸುವ ಪದ್ಧತಿ ನಿಮ್ಮನ್ನು ಆಕರ್ಷಿಸುತ್ತದೆ.

ಊಟದ ರುಚಿಯ ಕೂಡ ಬೆಸ್ಟ್‌ ಆಗಿದ್ದು, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟಕ್ಕೆ ಸೂಕ್ತವಾದ ಸ್ಥಳವಾಗಿದೆ. ಇಲ್ಲಿನ ಚಾಕೊಲೇಟ್ ಸ್ಯಾಂಡ್‌ವಿಚ್‌ಗಳು, ಬರ್ಗರ್‌ಗಳು, ಸೀ ಫುಡ್‌ಗಳು, ಆಮ್ಲೆಟ್‌ಗಳು ಜೊತೆಗೆ ಸಸ್ಯಹಾರಿ ಆಹಾರಗಳು ಇಲ್ಲಿನ ಉತ್ತಮ ಆಯ್ಕೆಯಾಗಿರುತ್ತದೆ.

5. ಬಾರ್ಬೆಕ್ಯು ನೇಷನ್ (Barbeque Nation)

ಬೆಂಗಳೂರಿನ ವಿವಿಧ ಭಾಗಗಳಲ್ಲಿರುವ ಬಾರ್ಬೆಕ್ಯು ನೇಷನ್ ರೆಸ್ಟೋರೆಂಟ್‌ ಅನ್‌ಲಿಮಿಟೆಡ್‌ ಆಹಾರಕ್ಕೆ ಹೆಸರುವಾಸಿ. ಇಲ್ಲಿನ ಅನ್‌ಲಿಮಿಟೆಡ್‌ ಊಟದ ಆಯ್ಕೆಗಳು, ಬಡಿಸುವ ಪದ್ಧತಿ ಹಾಗೂ ರುಚಿಯಿಂದಲೇ ಈ ರೆಸ್ಟೋರೆಂಟ್‌ ಹೆಚ್ಚು ಜನಪ್ರಿಯವಾಗಿದೆ.

Top 10 Restaurants In Koramangala, Bengaluru

ಕುಟುಂಬ ಅಥವಾ ಸ್ನೇಹಿತರೊಂದಿಗೆ ಸಮಯ ಕಳೆಯಲು ಇದೊಂದು ಸೂಕ್ತವಾದ ಸ್ಥಳವಾಗಿದೆ. ಕೋರಮಂಗಲ 1ನೇ ಬ್ಲಾಕ್‌ನಲ್ಲಿರುವ ಈ ಹೋಟೆಲ್‌ನಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಲಭ್ಯವಿರುತ್ತದೆ. ಇಲ್ಲಿನ ಸೀಗಡಿ, ಮೀನು, ಚಿಕನ್‌ ಬಾರ್ಬೆಕ್ಯು ಜೊತೆಗೆ ಬಿರಿಯಾನಿ ಹಾಗೂ ಖುಲ್ಫಿಗಳನ್ನು ಮಿಸ್‌ ಮಾಡದೇ ಟೇಸ್ಟ್‌ ಮಾಡಿ.

6. ಬದ್ಮಾಶ್ ಕೋರಮಂಗಲ(Badmaash Koramangala)

ಬದ್ಮಾಶ್ ಕೋರಮಂಗಲವು ಕೋರಮಂಗಲದಲ್ಲಿರುವ ರೆಸ್ಟೋರೆಂಟ್ ಮತ್ತು ಬಾರ್ ಆಗಿದೆ. ಇದು ಆಧುನಿಕ ಮತ್ತು ಸಾಂಪ್ರದಾಯಿಕ ಭಾರತೀಯ ಆಹಾರ ಶೈಲಿಗೆ ಜನಪ್ರಿಯವಾಗಿದೆ. ಕಾಕ್‌ಟೇಲ್‌ಗಳು ಮತ್ತು ಮಾಕ್‌ಟೇಲ್‌ಗಳ ಜೊತೆಗೆ ಡಿಜೆ ಡಾನ್ಸ್‌ನೊಂದಿಗೆ ಸಮಯ ಕಳೆಯಲು ಇದು ಸೂಕ್ತವಾದ ಸ್ಥಳವಾಗಿದೆ. ರಾತ್ರಿ ಊಟಕ್ಕೆ ಇದೊಂದು ಸೂಕ್ತವಾದ ಸ್ಥಳವಾಗಿದ್ದು, ಇಲ್ಲಿನ ಚಿಲ್ಲಿ ಚಿಕನ್, ಸೀಗಡಿ ಖಾದ್ಯಗಳು ಹಾಗೂ ಬಿರಿಯಾನಿಗಳನ್ನು ಮಿಸ್‌ ಮಾಡದೇ ರುಚಿ ನೋಡಿ.

7. ಫೆನ್ನಿಸ್ ಲೌಂಜ್ ಮತ್ತು ಕಿಚನ್ (Fenny's Lounge and Kitchen)

ಕೋರಮಂಗಲ 7ನೇ ಬ್ಲಾಕ್‌ನಲ್ಲಿರುವ ಫೆನ್ನಿಸ್ ಲೌಂಜ್ ಮತ್ತು ಕಿಚನ್ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಸೂಕ್ತವಾದ ಸ್ಥಳ. ಇಲ್ಲಿನ ವಾತಾವರಣ, ಬಡಿಸುವ ಪದ್ಧತಿ ಮತ್ತು ಆಸನ ವ್ಯವಸ್ಥೆಗೆ 10 ರಲ್ಲಿ 10 ಅಂಕಗಳನ್ನು ನೀಡಬಹುದು. ಇಲ್ಲಿನ ಚಿಕನ್‌, ಸಲಾಡ್‌ಗಳು, ಕ್ರ್ಯಾಬ್‌ ಖಾದ್ಯಗಳು, ಸ್ಟ್ರಾಬೆರಿ ಕಾಕ್ಟೈಲ್‌ಗಳನ್ನು ಮಿಸ್‌ ಮಾಡದೇ ಟ್ರೈ ಮಾಡಿ.

8. ಚಿಯಾಂಟಿ(Chianti)

ಇಟಾಲಿಯನ್ ಫುಡ್‌ ಇಷ್ಟ ಪಡುವವರಿಗೆ ಚಿಯಾಂಟಿ ಬೆಸ್ಟ್ ರೆಸ್ಟೋರೆಂಟ್‌. ಚಿಯಾಂಟಿಗೆ ಭೇಟಿ ನೀಡಿದವರು ಇಟಾಲಿಯನ್‌ನ ಮೂರು ರೀತಿಯ ಮೆನುವನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು. ಸ್ಟಾರ್ಟರ್‌ಗಳು, ಮೈನ್‌ ಊಟದ ಜೊತೆಗೆ ಇಲ್ಲಿನ ಸಿಹಿತಿಂಡಿಗಳು ಕೂಡ ರುಚಿಕರವಾಗಿದೆ.

Top 10 Restaurants In Koramangala, Bengaluru

ಇಲ್ಲಿನ ಅತ್ಯುತ್ತಮ ತಿನಿಸುಗಳಲ್ಲಿ ಮೆಲಂಜೇನ್ ರಿಪೈನ್ (ಸ್ಟಫ್ಡ್ ಬದನೆಕಾಯಿ), ಕ್ಯಾಪ್ರೀಸ್ ಸಲಾಡ್ ಹಾಗೂ ಚಾಕೊಲೇಟ್ ಬಾಂಬ್‌ಗಳನ್ನು ಮಿಸ್‌ ಮಾಡದೇ ಟ್ರೈ ಮಾಡಿ. ನೀವು ನೀಡಿದ ಹಣಕ್ಕೆ ಇಲ್ಲಿನ ಖಾದ್ಯಗಳು ನ್ಯಾಯ ಒದಗಿಸುತ್ತವೆ.

9. ಸುಲ್ತಾನ್ ಆಫ್ ಸ್ಪೈಸ್(Sultans Of Spice)

ಕೋರಮಂಗಲದಲ್ಲಿ ದೆಹಲಿಯ ಹಳೆಯ ಪಾಕ ಪದ್ಧತಿಯ ಆಹಾರಗಳನ್ನು ಸೇವಿಸಬೇಕು ಎಂದರೆ ಸುಲ್ತಾನ್ ಆಫ್ ಸ್ಪೈಸ್ ಉತ್ತಮ ಆಯ್ಕೆ. ಇಲ್ಲಿನ ಬಫೆಯು ನಿಮಗೆ ಬಹು ದೊಡ್ಡ ಆಯ್ಕೆಯನ್ನು ನೀಡುತ್ತದೆ. ದಮ್ ಆಲೂ, ಚಿಕನ್ ವಿಂಗ್ಸ್, ಕಬಾಬ್, ಸೀಫುಡ್‌ ಹಾಗೂ ಮಟನ್ ಖೈಮಾ ಜನಪ್ರಿಯವಾದ ಖಾದ್ಯಗಳಾಗಿದ್ದು ಇಲ್ಲಿ ನೀವು ಪಂಜಾಬಿ ಶೈಲಿಯ ಊಟವನ್ನು ಸಹ ಸವಿಯಬಹುದು.

ಪನೀರ್ ಟಿಕ್ಕಾ ಆಚಾರಿ, ಆಲೂ ಟಕ್, ಬ್ಲೂಬೆರ್ರಿ ಮೌಸ್ಸ್, ಚಾಕೊಲೇಟ್ ಪಾನಿ ಪುರಿ ಮತ್ತು ಪಾನ್‌ಗಳನ್ನು ಮಿಸ್‌ ಮಾಡದೇ ಪ್ರಯತ್ನಿಸಿ.ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಇದು ಸೂಕ್ತವಾದ ಸ್ಥಳವಾಗಿದೆ.

10. ಬಫ್ ಬಫೆಟ್ ಬಫ್(Buff Buffet Buff)

ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಕೋರಮಂಗಲದಲ್ಲಿ ಸೂಕ್ತವಾದ ಸ್ಥಳವೆಂದರೆ ಬಫ್ ಬಫೆಟ್ ಬಫ್ ರೆಸ್ಟೋರೆಂಟ್‌. ಇಲ್ಲಿ ಒಂದಲ್ಲ ಎರಡಲ್ಲ 80ಕ್ಕೂ ಹೆಚ್ಚು ಖಾದ್ಯಗಳು ನಿಮ್ಮ ಆಯ್ಕೆಗೆ ಸಿಗುತ್ತವೆ. ಚಿಕನ್ ಮತ್ತು ಮಟನ್ ಮತ್ತು ರುಚಿಕರವಾದ ಮೀನಿನ ವಿವಿಧ ಖಾದ್ಯಗಳು ಇಲ್ಲಿ ಲಭ್ಯವಿದ್ದು, ಸೀಗಡಿ ಹಾಗೂ ಪೆಪ್ಪರ್ ಚಿಕನ್‌ ಸ್ಟಾಟರ್ಸ್‌ಗಳಲ್ಲಿ ಬೇರೆ ರೀತಿ ರುಚಿಯನ್ನೇ ನೀಡುತ್ತದೆ.

ಇನ್ನು ಸಿಹಿ ವಿಭಾಗದಲ್ಲಿ ಜಾಮೂನ್ ಮತ್ತು ಕಾಶಿ ಹಲ್ವಾ ಕೂಡ ಇಲ್ಲಿ ಲಭ್ಯವಿದೆ. ಊಟದ ರುಚಿ ಹಾಗೂ ಇಲ್ಲಿನ ವಾತಾವರಣ ನೀವು ನೀಡುವ ಹಣಕ್ಕೆ ನ್ಯಾಯ ಒದಗಿಸುತ್ತವೆ.ಕೋರಮಂಗಲ 5ನೇ ಬ್ಲಾಕ್‌ನಲ್ಲಿ ಈ ಹೋಟೆಲ್‌ ಇದ್ದು, ವಾರದ ಏಳು ದಿನವೂ ತೆರೆದಿರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+