ಶಂಕಿತ ಉಗ್ರ ಮೆಹದಿ ಬಂಧನ : ಟಾಪ್ 10 ಬೆಳವಣಿಗೆ
ಬೆಂಗಳೂರು, ಡಿ. 13: ಇಡೀ ದೇಶದ ನಿದ್ದೆಗೆಡಿಸಿದ್ದ ಪಶ್ಚಿಮ ಬಂಗಾಳ ಮೂಲದ ಶಂಕಿತ ಉಗ್ರ ಮೆಹದಿ ಮಸ್ರೂರ್ ಬಿಸ್ವಾಸ್ (24) ಬೆಂಗಳೂರು ಪೊಲೀಸ್ ಬಲೆಗೆ ಬೀಳುವ ಮೊದಲು ಹಾಗೂ ನಂತರದ ಟಾಪ್ 10 ಬೆಳವಣಿಗೆಗಳ ಕುರಿತು ಒಂದು ಸಮಗ್ರ ಪಕ್ಷಿನೋಟ ಇಲ್ಲಿದೆ.

- ವರ್ಷಗಳಿಂದ ಐಎಸ್ಐಎಸ್ ಪರ ಟ್ವಿಟ್ಟರ್ ಖಾತೆ ನಿರ್ವಹಿಸುತ್ತಿದ್ದ ಮೆಹದಿ ಕುರಿತು ಇಂಗ್ಲೆಂಡ್ ಮೂಲದ ಚಾನಲ್ 4 ನಿಂದ ಭಾರತಕ್ಕೆ ಮಾಹಿತಿ
- ತಕ್ಷಣ ಬೆಂಗಳೂರು ಪೊಲೀಸರಿಗೆ ಎನ್ಐಎ ಸಂಸ್ಥೆಯಿಂದ ಮಾಹಿತಿ ರವಾನೆ. [ಟ್ವಿಟ್ಟರ್ ಉಗ್ರನ ರಹಸ್ಯ ಬಯಲು]
- ವಿಷಯ ಬಯಲಾದದ್ದು ತಿಳಿದ ತಕ್ಷಣ ತನ್ನ ಟ್ವಿಟ್ಟರ್ ಖಾತೆ @shamiwitness ಅನ್ನು ಮೆಹದಿ ಅಳಿಸಿಹಾಕಿದ. ಚಾನಲ್ 4 ಜೊತೆ ಮಾತನಾಡಿ "ನನಗೆ ಸಾಯಲು ಇಷ್ಟವಿಲ್ಲ, ನಾನೇನೂ ತಪ್ಪು ಮಾಡಿಲ್ಲ, ನಾನು ಯಾವುದೇ ದೇಶದ ಕಾನೂನು ಉಲ್ಲಂಘಿಸಿಲ್ಲ" ಎಂದು ಸಮರ್ಥಿಸಿಕೊಂಡ [ಪೊಲೀಸರಿಗೆ ಮೆಹದಿ ಸಿಕ್ಕಿಬಿದ್ದಿದ್ದು ಹೇಗೆ?]
- ಮೆಹದಿ ಬಂಧನಕ್ಕೆ ಬೆಂಗಳೂರು ಸಿಸಿಬಿ ಪೊಲೀಸರಿಂದ ತಂಡ ರಚನೆ. ಜಾಲಹಳ್ಳಿಯ ಅಯ್ಯಪ್ಪನಗರದ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ರಾತ್ರಿ ಬಂಧನ
- ನನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ, ಐಎಸ್ಐಎಸ್ ಪರ ಸಂದೇಶ ರವಾನಿಸಿದ್ದು ನಾನಲ್ಲ ಎಂದು ಸಮರ್ಥನೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರಿಂದ ಶನಿವಾರ ಮಧ್ಯಾಹ್ನದವರೆಗೆ ವಿಚಾರಣೆ ಆರಂಭ
- ಮಗನ ಬಂಧನದಿಂದ ಅವಾಕ್ಕಾದ ತಂದೆ ಎಂ. ಬಿಸ್ವಾಸ್‌ರಿಂದ ಕೊಲ್ಕೊತ್ತದಲ್ಲಿ ಹೇಳಿದ್ದು ಹೀಗೆ - "ತನ್ನ ಖಾತೆ ಹ್ಯಾಕ್ ಆಗಿತ್ತು ಎಂದು ಮಗ ಹೇಳಿದ್ದಾನೆ. ನನ್ನ ಮಗನಿಗೆ ಐಎಸ್ಐಎಸ್ ಜೊತೆ ಸಂಪರ್ಕವಿತ್ತು ಎಂಬುದನ್ನು ನಾನು ನಂಬುವುದಿಲ್ಲ" [ಜಾಣ ಮೆಹದಿ ಪೊಲೀಸರ ಕಣ್ಣು ತಪ್ಪಿಸಿದ್ದು ಹೇಗೆ]
- ಐಎಸ್ಐಎಸ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದನ್ನು ಪೊಲೀಸ್ ವಿಚಾರಣೆಯಲ್ಲಿ ಮೆಹದಿ ಬಾಯಿ ಬಿಟ್ಟ. ಭಾರತ ಬಿಟ್ಟು ಇತರ ದೇಶಗಳ ಅದರಲ್ಲಿಯೂ ಇಂಗ್ಲಿಷ್ ಬಲ್ಲ ಉಗ್ರರೊಂದಿಗೆ ಸಂಪರ್ಕ ಹೊಂದಿರುವುದನ್ನು, ಯುವಕರಿಗೆ ಐಎಸ್ಐಎಸ್ ಸೇರಲು ಒತ್ತಾಯಿಸಿದ್ದನ್ನು ಒಪ್ಪಿಕೊಂಡ.
- ಮಧ್ಯಾಹ್ನ ಮೆಹದಿ ಮಸ್ರೂರ್ ಬಿಸ್ವಾಸ್‌ನ ಬಂಧನವನ್ನು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಕ್ಕೆ ಪೊಲೀಸ್ ಮಹಾನಿರ್ದೇಶಕ ಪಚಾವೋ ಹಾಗೂ ಬೆಂಗಳೂರು ಆಯುಕ್ತ ಎಂ.ಎನ್. ರೆಡ್ಡಿ ಅವರಿಂದ ಮಾಹಿತಿ [ಲಷ್ಕರ್ ದಾಳಿ ಎಚ್ಚರಿಕೆ, ದೆಹಲಿಯಲ್ಲಿ ಹೈ ಅಲರ್ಟ್]
- ಮೆಹದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಸೆಕ್ಷನ್ 125 (ಭಾರತ ಸರ್ಕಾರದೊಂದಿಗೆ ಸ್ನೇಹ ಸಂಬಂಧ ಹೊಂದಿರುವ ಏಷ್ಯಾ ದೇಶದ ವಿರುದ್ಧ ಯುದ್ಧ ಘೋಷಣೆ ಮಾಡಿದ ಅಪರಾಧ), ಕಾನೂನು ಬಾಹಿರ ಚಟುವಟಿಕೆ ಹಾಗೂ ಸೆಕ್ಷನ್ 66 ಅಡಿ ಪ್ರಕರಣ
- ಮೆಹದಿ ಕೆಲಸ ಮಾಡುತ್ತಿದ್ದ ಐಟಿಸಿ ಲಿ. ಕೋಲ್ಕತ್ತ ಉನ್ನತಾಧಿಕಾರಿಗಳಿಂದ ಬೆಂಗಳೂರು ಪೊಲೀಸರಿಗೆ ತನಿಖೆಯಲ್ಲಿ ಸಹಕಾರ ನೀಡುವುದಾಗಿ ಪತ್ರಿಕಾ ಪ್ರಕಟಣೆ ಬಿಡುಗಡೆ











Click it and Unblock the Notifications