Tomato Price Hike: ಶತಕ ದಾಟಿದ ಟೊಮೆಟೊ ದರ: ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಕೆಂಪು ಚೆಲುವೆ...

ಬೆಂಗಳೂರು ಜೂನ್ 20: ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಬೆನ್ನಲ್ಲೆ ಸಾಗಣೆ ವೆಚ್ಚ, ಬಹುತೇಕ ತರಕಾರಿಗಳ ಬೆಲೆ ಗಗನಕ್ಕೇರಿಕೆಯಾಗಿದೆ. ಅದರಲ್ಲೂ ಟೊಮೆಟೊ ದರ ಶತಕ ದಾಟಿದ್ದು ಗ್ರಾಹಕರು ಕಂಗೆಟ್ಟಿದ್ದಾರೆ.

ಹೌದು... ಕಳೆದ ಕೆಲ ದಿನಗಳಿಂದ ಏರಿಕೆಯಲ್ಲಿದ್ದ ಟೊಮೆಟೋ ಇದೀಗ ಶತಕದ ಗಡಿ ದಾಟಿದೆ. ದುಬಾರಿಯಾಗೇ ಇದ್ದ ದಿನಬಳಕೆಯ ತರಕಾರಿಗಳು, ಸೊಪ್ಪಿನ ಬೆಲೆ ಈಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಮತ್ತಷ್ಟು ತುಟ್ಟಿಯಾಗಿದ್ದು ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

Tomato Price Hike Tomato fare that crossed the century mark

ಇತ್ತ ರೈತರ ಅದೃಷ್ಟವನ್ನೇ ಟೊಮೆಟೊ ಬದಲಾಯಿಸಿದೆ. ಒಂದು ಎಕರೆ ಟೊಮೆಟೊ ಬೆಳೆದಿರುವವರು ಲಕ್ಷಾಧಿಪತಿಗಳಾಗುತ್ತಿದ್ದಾರೆ. ದರ ಕುಸಿದಾಗ ಕಂಗಾಲಾಗಿ ರಸ್ತೆಗೆ ಸುರಿದು ಪ್ರತಿಭಟನೆ ಮಾಡುತ್ತಿದ್ದರು. ಈಗ, ಟೊಮೆಟೊ ಬೆಳೆದ ರೈತರಿಗೆ ಅದೃಷ್ಟಲಕ್ಷ್ಮಿ ಒಲಿದು ಬಂದಂತಾಗಿದೆ. ಆದರೆ, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಚಿಲ್ಲರೆ ದರದಲ್ಲಿ ಒಂದು ಕೆ.ಜಿ. ಹಣ್ಣಿಗೆ 100 ರಿಂದ 130 ರೂ. ಇದೆ.

ತರಕಾರಿ-ದರ(ಕೆಜಿಗೆ)

ಬೆಳ್ಳುಳ್ಳಿ 340

ಟೊಮೆಟೋ 103

ಬೀನ್ಸ್ 224

ಬಿಳಿ ಬದನೆ 100

ಬಜ್ಜಿ ಮೆಣಸಿನಕಾಯಿ 98

ಕ್ಯಾಪ್ಸಿಕಂ 116

ನುಗ್ಗೇಕಾಯಿ 185

ಹೀರೇಕಾಯಿ 100

ಶುಂಠಿ 198

ಮೂಲಂಗಿ 70

ಕೊತ್ತಂಬರಿ 20-30 ಒಂದು ಕಟ್

ತಿಂಗಳ ಹಿಂದೆ ಬೆಳೆಗೆ ಹಾಯಿಸಲು ನೀರಿನ ಅಭಾವ, ವಿಪರೀತ ಬಿಸಿಲಿನ ವಾತಾವರಣದಿಂದ ಕೊಳೆಯುತ್ತಿದ್ದ ಕಾರಣದಿಂದ ಈವರೆಗೆ ತರಕಾರಿಗಳ ದರ ಏರಿಕೆಯಾಗಿತ್ತು. ಆದರೆ ಈಗ ಸರಕು ಸಾಗಣೆ ವೆಚ್ಚ ಹೆಚ್ಚಳ ಆಗುತ್ತಿರುವ ಕಾರಣ ತರಕಾರಿಗಳಿ ಇನ್ನಷ್ಟು ದುಬಾರಿಯಾಗುತ್ತಿದೆ.

Tomato Price Hike Tomato fare that crossed the century mark

ಹೋಟೆಲ್ ಮಾಲೀಕರು ಹಲವು ಅಡುಗೆ, ತಿಂಡಿಗಳಿಗೆ ಟೊಮೆಟೊ ಪೇಸ್ಟ್ ಬಳಸಲು ಮುಂದಾಗಿದ್ದಾರೆ. ಕೆಲವರು ಟೊಮೆಟೊ ಬಳಸುವ ತಿಂಡಿಗಳನ್ನೇ ಕಡಿಮೆ ಮಾಡಿದ್ದಾರೆ. ಸುಮಾರು 20 ರೂ.ಗೆ ಖರೀದಿಸುವ ಟೊಮೆಟೊ ಪೇಸ್ಟ್ ಒಂದು ಕೆ.ಜಿ ಟೊಮೆಟೊ ಬೆಲೆಯಲ್ಲಿ ಐದಾರು ಕೊಂಡುಕೊಳ್ಳಬಹುದು.

ಬೆಂಗಳೂರು ಹಾಪ್‌ಕಾಮ್ಸ್‌ನಲ್ಲಿ ಟೊಮೆಟೋ ಬೆಲೆ 100 ರೂಪಾಯಿ ದಾಟಿದೆ. ಮಾತ್ರವಲ್ಲದೇ ಮೈಸೂರು, ಶಿವಮೊಗ್ಗ, ಕಲಬುರ್ಗಿ ಸೇರಿದಂತೆ ರಾಜ್ಯದೆಲ್ಲೆಡೆ ಟೊಮೆಟೋ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಮೊದಲೇ ತರಕಾರಿಗಳ ಅಭಾವ ಮಾರುಕಟ್ಟೆಯಲ್ಲಿ ಕಾಡುತ್ತಿದೆ.

ಮದುವೆ, ಗೃಹ ಪ್ರವೇಶ, ಧಾರ್ಮಿಕ ಕಾರ್ಯಕ್ರಮಗಳಿಗೆ, ಹೋಟೆಲ್‌ಗಳಿಂದ ಬೇಡಿಕೆ ಇರುವಷ್ಟು ಪೂರೈಕೆ ಆಗುತ್ತಿಲ್ಲ. ರಾಜ್ಯದಲ್ಲಿ ತರಕಾರಿ ಕೊರತೆ ಉಂಟಾಗಿದ್ದು ಬಟಾಣಿ, ಟೊಮೆಟೋವನ್ನು ಹೊರ ರಾಜ್ಯಗಳಿಂದ ತರಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ.

ಸದ್ಯ ಬೆಂಗಳೂರು ಮಾರುಕಟ್ಟೆ ಟೊಮೆಟೋಗೆ ಮಹಾರಾಷ್ಟ್ರವನ್ನೇ ನೆಚ್ಚಿಕೊಂಡಿದೆ. ಮಂಡ್ಯ, ಮೈಸೂರು, ಮದ್ದೂರು, ಕನಕಪುರ ಬೆಲ್ಟ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಟೊಮೆಟೋ ಪ್ರಮಾಣ ಬಹುತೇಕ ಕುಸಿದಿದೆ. ಚಿಕ್ಕಮಗಳೂರು, ಕಡೂರು ಕಡೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಟೊಮೆಟೋ ಬರುತ್ತಿಲ್ಲ. ಇನ್ನು ಕೋಲಾರದಲ್ಲೂ ಮಳೆ, ರೋಗಬಾಧೆ ಪೂರೈಕೆ ಮುಕ್ಕಾಲು ಭಾಗದಷ್ಟು ಕಡಿಮೆಯಾಗಿದೆ.

ಈರುಳ್ಳಿ ದರ ಕೂಡ ಕಳೆದ ಎರಡು ವಾರದಿಂದ ಹೊಯ್ದಾಟದಲ್ಲಿದೆ. ಬಜ್ಜಿ ಮೆಣಸಿನಕಾಯಿ, ಬಿಳಿ ಬದನೆ, ನುಗ್ಗಿಕಾಯಿ, ನವಿಲುಕೋಸು ದರವೂ ಏರಯಗತಿಯಲ್ಲೇ ಇದೆ. ಬೀನ್ಸ್‌ ಕಳೆದ ಹದಿನೈದು ದಿನಗಳಿಂದಲೂ 220 ಆಸುಪಾಸಿನಲ್ಲೇ ಇದೆ. ಉಳಿದಂತೆ ಕೊತ್ತಂಬರಿ ಸೊಪ್ಪು ಒಂದು ಕಂತೆಗೆ 100 ಮುಟ್ಟಿದೆ ಮೆಂತ್ಯ, ಪಾಲಕ್, ಬಸಳೆ, ಸಬ್ಬಸಗಿ ಸೊಪ್ಪಗಳೆಲ್ಲ ಸಾಮಾನ್ಯ ದಿನಕ್ಕಿಂತ 40- 70ವರೆಗೂ ಬೆಲೆ ಹೆಚ್ಚಿಸಿಕೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+