'ಉತ್ತಮ ಬೆಂಗಳೂರಿಗಾಗಿ ಬನ್ನಿ ಕೈ ಜೋಡಿಸಿ'
ಬೆಂಗಳೂರು, ಮಾ.11: ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಂದನ್ ನಿಲೇಕಣಿ ಅವರು ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡು ಪ್ರಾಥಮಿಕ ಸದಸ್ಯತ್ವ ಪಡೆಯುವ ಹೊತ್ತಿಗೆ ಕೆಪಿಸಿಸಿ ಕಚೇರಿ ಹೊರಗಡೆ ನಿಂತಿದ್ದ ಸಾವಿರಾರು ಮಂದಿ ಅಭಿಮಾನಿಗಳನ್ನು ನೋಡಿ ಥ್ರಿಲ್ ಆಗಿದ್ದಾರೆ.
ಉತ್ತಮ ಬೆಂಗಳೂರಿಗಾಗಿ ಕೈ ಜೋಡಿಸಿ ಎಂಬ ಅಭಿಮಾನದ ಮೂಲಕ ಯುವಕರನ್ನು, ಬೆಂಗಳೂರಿನ ಬಗ್ಗೆ ಕಾಳಜಿಯುಳ್ಳ ವಿವಿಧ ರಂಗದ ಗಣ್ಯರನ್ನು ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ನಡಿಗೆ ಜಾಥಾ ಕೂಡಾ ಯಶಸ್ವಿಯಾಗಿ ನಡೆಸಿದ್ದಾರೆ.
ನಂದನ್ ಅವರಿಗೆ ಶುಭ ಹಾರೈಸಲು ರಂಗಕರ್ಮಿ ಅರುಂಧತಿ ನಾಗ್, ಬಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಮುಂತಾದವರು ಆಗಮಿಸಿದ್ದರು. ಬೆಂಗಳೂರಿನ ಟ್ರಾಫಿಕ್ ದಟ್ಟಣೆ ಹೆಚ್ಚಿಸದೆ ಶಾಂತಿ ರೀತಿಯಿಂದ ವಾಕಾಥನ್ ನಲ್ಲಿ ಪಾಲ್ಗೊಂಡ ಅಭಿಮಾನಿಗಳಿಗೆ ನಂದನ್ ಥ್ಯಾಂಕ್ಸ್ ಹೇಳಿದ್ದಾರೆ. ಇದರ ಜತೆಗೆ ಮೊಣಕೈ ಮುರಿದುಕೊಂಡರೂ ವಿಶ್ರಾಂತಿ ಪಡೆಯದೆ ಜತೆಯಲ್ಲೇ ಇದ್ದು ಪತಿ ಬೆಂಬಲಕ್ಕೆ ನಿಂತ ರೋಹಿಣಿ ಅವರಿಗೂ ನಂದನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಂದನ್ ಪ್ರಚಾರ ಆರಂಭದ ಚಿತ್ರಗಳು ಇಲ್ಲಿವೆ ನೋಡಿ..

ಪತಿ ನಂದನ್ ಪರ ರೋಹಿಣಿ ಪ್ರಚಾರ
ಉತ್ತಮ ಹಾಗೂ ಆರೋಗ್ಯಕರ ನಗರಕ್ಕಾಗಿ ನಮ್ಮ ಜತೆ ಕೈಜೋಡಿಸಿ ಎಂದು ವಾಕಾಥನ್ ನಡೆಸಿದ ಲೋಕಸಭಾ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ನಂದನ್ ನಿಲೇಕಣಿ

ನಂದನ್ ಪರ ಎಲ್ಲಾ ಸ್ತರದವರ ಪ್ರಚಾರ
ಕೆಪಿಸಿಸಿ ಕಚೇರಿಯಲ್ಲಿ ನಂದನ್ ಅವರು ಕಾಂಗ್ರೆಸ್ ಸದಸ್ಯತ್ವ ಪಡೆಯುತ್ತಿದ್ದಂತೆ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಶುಭ ಹಾರೈಸಿದರು.

ಸಂಚಾರ ದಟ್ಟಣೆ ಹೆಚ್ಚಿಸದೆ ನಡೆದ ಜಾಥ
ಬೆಂಗಳೂರಿನ ಟ್ರಾಫಿಕ್ ದಟ್ಟಣೆ ಹೆಚ್ಚಿಸದೆ ಶಾಂತಿ ರೀತಿಯಿಂದ ವಾಕಾಥನ್ ನಲ್ಲಿ ಪಾಲ್ಗೊಂಡ ಅಭಿಮಾನಿಗಳಿಗೆ ನಂದನ್ ಥ್ಯಾಂಕ್ಸ್ ಹೇಳಿದ್ದಾರೆ.

ಕಾರ್ಯಕರ್ತರನ್ನು ಹೊಗಳಿದ ನಂದನ್
ಉತ್ತಮ ಹಾಗೂ ಆರೋಗ್ಯಕರ ನಗರಕ್ಕಾಗಿ ನಮ್ಮ ಜತೆ ಕೈಜೋಡಿಸಿ ವಾಕಾಥಾನ್ ಯಶಸ್ವಿಗೊಳಿಸಿದ ಕಾರ್ಯಕರ್ತರನ್ನು ನಂದನ್ ಹೊಗಳಿದ್ದಾರೆ.

ನಂದನ್ ಗೆ ಶುಭ ಹಾರೈಸಿದ ಗಣ್ಯರು
ನಂದನ್ ಅವರಿಗೆ ಶುಭ ಹಾರೈಸಲು ರಂಗಕರ್ಮಿ ಅರುಂಧತಿ ನಾಗ್, ಬಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಮುಂತಾದವರು ಆಗಮಿಸಿದ್ದರು.

ವೇದಿಕೆಯಲ್ಲಿ ನಂದನ್ ಪತ್ನಿ ರೋಹಿಣಿ
ಅನಾರೋಗ್ಯದ ನಡುವೆಯೂ ವೇದಿಕೆಯಲ್ಲಿ ನಂದನ್ ಜತೆ ಕಾಣಿಸಿಕೊಂಡ ಪತ್ನಿ ಸಮಾಜಿಕ ಕಾರ್ಯಕರ್ತೆ ರೋಹಿಣಿ ನಿಲೇಕಣಿ

ಅಭಿಮಾನಿಗಳ ನಡುವೆ ನಂದನ್ ನಿಲೇಕಣಿ
ಅಭಿಮಾನಿಗಳ ನಡುವೆ ನಂದನ್ ನಿಲೇಕಣಿ ಕಾಣಿಸಿಕೊಂಡಿದ್ದು ಹೀಗೆ












Click it and Unblock the Notifications