ಜನಸಾಮಾನ್ಯರ ಜತೆ ನಂದನ್ ಬಸ್ಸಿನಲ್ಲಿ ಸಂಚಾರ
ಬೆಂಗಳೂರು,ಏ.4: ನಂದನ್ ನಿಲೇಕಣಿ ಮತ್ತು ರೋಹಿಣಿ ನಿಲೇಕಣಿ ದಂಪತಿ ಪರಿಪೂರ್ಣ ಯೋಜನೆಯೊಂದಿಗೆ ಪ್ರತಿ ದಿನದ ಚುನಾವಣಾ ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದಾರೆ. ನಂದನ್ ಅವರಿಗೆ ಸಾಹಿತಿಗಳು, ಸಿನಿಮಾ ರಂಗದ ಗಣ್ಯರು, ಉದ್ಯಮಿಗಳು ಸೇರಿದಂತೆ ಜನ ಸಾಮಾನ್ಯರು ಸ್ವಯಂಪ್ರೇರಿತರಾಗಿ ಬೆಂಬಲ ಘೋಷಿಸುತ್ತಿದ್ದಾರೆ. ಶುಕ್ರವಾರ ಕೂಡಾ ನಂದನ್ ಅವರು ಜಯನಗರದಲ್ಲಿ ಜನ ಸಾಮಾನ್ಯರ ಜತೆ ಸಾರ್ವಜನಿಕ ಸಾರಿಗೆ ಸಂಸ್ಥೆ ಬಸ್ ನಲ್ಲಿ ಸಂಚರಿಸಿದರು.
ನಂದನ್ ಅವರ ಬಸ್ ಸಂಚಾರ ವಿವರಕ್ಕೂ ಮುನ್ನ ಗುರುವಾರ ಮಹಿಳಾ ಉದ್ಯಮಿಗಳ ಜತೆ ನಂದನ್ ದಂಪತಿ ನಡೆಸಿದ ಸಂವಾದ ಕಾರ್ಯಕ್ರಮದ ವಿವರ ಓದಿ....ವಿಜಯನಗರ ವಿಧಾನಸಭಾ ಕ್ಷೇತ್ರದ ಗಂಗೊಡನಹಳ್ಳಿಯಲ್ಲಿ 75 ಕ್ಕೂ ಹೆಚ್ಚು ಮಹಿಳೆಯರ ಗುಂಪನ್ನು ಉದ್ದೇಶಿಸಿ ನಂದನ್ ಮಾತನಾಡಿದರು. ಆ ಕ್ಷೇತ್ರದ ಮಹಿಳೆಯರು ಎದುರಿಸುವ ಸಮಸ್ಯೆಗಳು, ಮಹಿಳೆಯರಲ್ಲಿ ಉದ್ಯಮಶೀಲತೆ, ಮಕ್ಕಳ ಶಿಕ್ಷಣ ಇತ್ಯಾದಿ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
ಚರ್ಚೆಯಲ್ಲಿ ಮಕ್ಕಳ ಶಿಕ್ಷಣ, ಮಹಿಳೆಯರಿಗೆ ತರಬೇತಿ ಇನ್ನಿತರ ಕಾರ್ಯಗಳಲ್ಲಿ ತೊಡಗಿಸಿಕೊಂಡ ಆಯೇಶಾ, ಮದೀನ್ ತಾಜ್, ನೌಶಾದ್, ಜರೀನ್ ತಾಜ್, ತಸ್ಮಿಯಾ ಇನ್ನಿತರರೂ ಸೇರಿದಂತೆ ಹಲವಾರು ಪ್ರಮುಖ ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು ಭಾಗವಹಿಸಿದ್ದರು. ಅಕ್ಷರ ಪ್ರತಿಷ್ಠಾನದೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡು ತಮ್ಮದೇ ಬಾಲವಾಡಿಗಳನ್ನು ನಡೆಸುವ ತರಬೇತಿ ಪಡೆದಿದ್ದನ್ನು ವಿವರಿಸಿದರು.

ಮಹಿಳಾ ಉದ್ಯಮಿ, ಮಕ್ಕಳ ಶಿಕ್ಷಣ ಬಗ್ಗೆ ನಂದನ್
ಈ ಮಹಿಳಾ ಉದ್ಯಮಿಗಳು ತಮ್ಮ ಬಡಾವಣೆಗಳಲ್ಲಿ ಎಲ್ಲ ಮಕ್ಕಳಿಗೆ ಮೂಲ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನಂದನ್ ಮತ್ತು ರೋಹಿಣಿಯವರು ಗುಂಪಿನಲ್ಲಿರುವ ತಾಯಂದಿರೊಂದಿಗೂ ಚರ್ಚೆ ನಡೆಸಿ, ಮಕ್ಕಳನ್ನು ಬೆಳೆಸುವಲ್ಲಿ ಅವರ ಕಷ್ಟಸುಖವನ್ನು ಹಂಚಿಕೊಂಡು, ಪರಿಹಾರವನ್ನು ಚರ್ಚಿಸಿದರು. ನಂದನ್ ಅವರು ಉತ್ತಮ ಬೆಂಗಳೂರಿಗಾಗಿ ಮುಖ್ಯವಾಗಿ ಶಿಕ್ಷಣ ಮತ್ತು ಉದ್ಯೋಗಾವಕಾಶವನ್ನು ಒದಗಿಸುವಲ್ಲಿ ತಮ್ಮ ಆಲೋಚನೆಗಳನ್ನು, ಯೋಜನೆಗಳನ್ನು ಹಂಚಿಕೊಳ್ಳಲಿದ್ದಾರೆ.

ಜಯನಗರ ಬಸ್ ರೂಟ್ ನಂಬರ್ 2ಎ
ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಅವರು ಶುಕ್ರವಾರ ಬಸ್ ಡೇ ಅಂಗವಾಗಿ ಜಯನಗರ ಬಸ್ ನಿಲ್ದಾಣದಿಂದ ರೂಟ್ ನಂಬರ್ 2A ಹತ್ತಿ ಜೆಪಿ ನಗರದ ಇಂದಿರಾ ಗಾಂಧಿ ಸರ್ಕಲ್ ತನಕ ಪ್ರಯಾಣಿಸಿದರು. 7,700 ಕೋಟಿ ಆಸ್ತಿ ಘೋಷಿಸಿರುವ ನಂದನ್ ಅವರು ತಮ್ಮ ಪ್ರಯಾಣದ ವೆಚ್ಚ 12 ರು ನೀಡಿ ಟಿಕೆಟ್ ಪಡೆದರು.

ಬಸ್ ಡೇ ಬಗ್ಗೆ ಮೆಚ್ಚುಗೆ ಮಾತು
ಬಸ್ ಡೇ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ನಂದನ್ ಅವರು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೆಚ್ಚಿನ ಬಳಕೆಯಾಗಬೇಕು ಎಂದರು. ಬಸ್ ಹಾಗೂ ಮೆಟ್ರೋ ವ್ಯವಸ್ಥೆ ಬಲಗೊಂಡರೆ ಬೆಂಗಳೂರಿನ ಸಂಚಾರ ವ್ಯವಸ್ಥೆ ಸುಧಾರಣೆಗೊಳ್ಳುತ್ತದೆ ಎಂದರು.

ಸಾರ್ವಜನಿಕ ಸಾರಿಗೆ ಬಗ್ಗೆ ಕಲ್ಪನೆ
ಪಕ್ಷಾತೀತವಾಗಿ ಬಿಎಂಟಿಸಿ ಬಸ್ ವ್ಯವಸ್ಥೆಗೆ ಈವರೆಗೂ ಸರ್ಕಾರಗಳು ಕಲ್ಪಿಸಿರುವ ವ್ಯವಸ್ಥೆ ಬಗ್ಗೆ ನನಗೆ ಮೆಚ್ಚುಗೆ ಇದೆ. ಸಾರ್ವಜನಿಕರನ್ನು ಮೂಲ ಸೌಕರ್ಯ ಕುರಿತಂತೆ ಕೇಳಿದ ಪ್ರಶ್ನೆಗಳಲ್ಲಿ ಸಾರಿಗೆ ಸಮಸ್ಯೆ ಸುಧಾರಣೆ ಮುಖ್ಯವಾಗಿ ಕೇಳಿ ಬಂದಿದೆ. ನಮ್ಮಲ್ಲೂ ವಿಶ್ವದರ್ಜೆಯ ಬಸ್,ಮೆಟ್ರೋ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಾಧ್ಯವಿದೆ ಎಂದರು
|
ನಂದನ್ ಪಕ್ಕದಲ್ಲಿ ಕುಳಿತಿದ್ದವ ಟೆಕ್ಕಿ ವಿನಯ್
ಬೆಳಗ್ಗೆ ಬಿಟಿಎಂ ಲೇಔಟ್ ನಲ್ಲಿ ಮಾರ್ನಿಂಗ್ ವಾಕ್ ಮುಗಿಸಿದ ನಂದನ್ ಅವರು ಬಸ್ ಹತ್ತಿದ್ದರು. ಅವರ ಪಕ್ಕದಲ್ಲಿ ಕುಳಿತಿದ್ದ ಸಾಫ್ಟ್ ವೇರ್ ಉದ್ಯೋಗಿ ವಿನಯ್ ಸಹಜವಾಗಿ ಖುಷಿಗೊಂಡು ಮಾತನಾಡಿದರು

ಬೆಂಗಳೂರು ದಕ್ಷಿಣ ಕ್ಷೇತ್ರದ ಬಗ್ಗೆ
ಬೆಳಗ್ಗೆ ಬಿಟಿಎಂ ಲೇಔಟ್ ನಲ್ಲಿ ಮಾರ್ನಿಂಗ್ ವಾಕ್ ಮುಗಿಸಿದ ನಂದನ್ ಅವರು ಬಸ್ ಹತ್ತಿದ್ದರು. ಅವರ ಪಕ್ಕದಲ್ಲಿ ಕುಳಿತಿದ್ದ ಸಾಫ್ಟ್ ವೇರ್ ಉದ್ಯೋಗಿ ವಿನಯ್ ಸಹಜವಾಗಿ ಖುಷಿಗೊಂಡು ಮಾತನಾಡಿದರು












Click it and Unblock the Notifications