ಸಿದ್ದರಾಮಯ್ಯ ಎದುರು ಪ್ರತ್ಯಕ್ಷವಾದ ದೇವರು ಯಾರು ಗೊತ್ತಾ?
Recommended Video
ಬೆಂಗಳೂರು, ನವೆಂಬರ್.28: ವಿಧಾನಸಭಾ ಉಪ ಚುನಾವಣಾ ಕಣದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಮಾಜಿ ಮುಖ್ಮಮಂತ್ರಿ ಸಿದ್ದರಾಮಯ್ಯ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಕಾಂಗ್ರೆಸ್ ತೊರೆದು ಹೋಗಿರುವ ಅನರ್ಹ ಶಾಸಕರಿಗೆ ಪಾಠ ಕಲಿಸಲು ರಣತಂತ್ರ ಹೆಣೆಯುತ್ತಿದ್ದಾರೆ. 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆ ಗೆಲುವಿನ ಮಾಲೆ ತೊಡಿಸಲು ಪಣ ತೊಟ್ಟಿರುವ ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿಗೆ ಇದೀಗ ದೇವರೇ ದರ್ಶನ ಕೊಟ್ಟಿದ್ದಾನಂತೆ.
ಅರೆ, ಇಂಥ ಕಲಿಗಾಲದಲ್ಲಿ ದೇವರು ಪ್ರತ್ಯಕ್ಷನಾಗಿ ದರ್ಶನ ಕೊಡುವುದು ಅಂದರೆ ಹೇಗೆ ಎಂದು ಆಶ್ಚರ್ಯ ಪಡಬೇಡಿ. ಇಲ್ಲಿ ದೇವರು ಅಂದರೆ ನಿಜವಾದ ದೇವರಲ್ಲ. ಪುಟ್ಟ ಮಕ್ಕಳನ್ನೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೇವರಿಗೆ ಹೋಲಿಸಿದ್ದಾರೆ.

ಹೌದು, ಮಕ್ಕಳ ಮುಗ್ಧ ಮನಸ್ಸಲ್ಲಿ ದೇವರಿದ್ದಾನೆ ಎನ್ನುತ್ತಾರೆ. ಇಂದು ಬೆಳಿಗ್ಗೆ ಕುಮಾರಪಟ್ಟಣದಲ್ಲಿ ವಾಯುವಿಹಾರ ನಡೆಸುತ್ತಿದ್ದಾಗ ಭೇಟಿಯಾದ ಈ ಪುಟಾಣಿಗಳಲ್ಲಿ 'ದೇವರ ದರ್ಶನ' ಆಯ್ತು. ರಾಜಕೀಯದ ಮಧ್ಯೆ ಸಿಕ್ಕ ಬಿಡುವಿನ ಈ ಕ್ಷಣಗಳಿಂದ ಮನಸ್ಸು ಮುದಗೊಂಡಿತು. ಈ ಪುಟಾಣಿಗಳಿಗೆ ಧನ್ಯವಾದಗಳು ಎಂದು ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಟ್ವೀಟ್ ಮಾಡಿದ್ದಾರೆ.












Click it and Unblock the Notifications