• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಧಾನಗತಿಯ ಮೆಟ್ರೋ ಕಾಮಗಾರಿ ಚುರುಕುಗೊಳಿಸಲು ಹೊಸ ವಿಧಾನ

|

ಬೆಂಗಳೂರು, ಜನವರಿ 4: ನಿಧಾನಗತಿಯಲ್ಲಿ ಸಾಗುತ್ತಿರುವ ಮೆಟ್ರೋ ಕಾಮಗಾರಿಯನ್ನು ಚುರುಕುಗೊಳಿಸಲು ಹೊಸ ವಿಧಾನವೊಂದನ್ನು ಬಿಎಂಆರ್‌ಸಿಎಲ್ ಕಂಡುಕೊಂಡಿದೆ.

ಹೊಸ ವಿಧಾನವೇನೆಂದರೆ ಮೈಸೂರು ರಸ್ತೆಯ ಮೆಟ್ರೋ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಸವಾಲಿನಲ್ಲಿರುವ ಬಿಎಂಆರ್‌ಸಿಎಲ್, ಗುತ್ತಿಗೆ ಕಂಪನಿಯ ಉದ್ಯೋಗಿಗಳು, ಉಪ ಗುತ್ತಿಗೆದಾರರ ಜೊತೆ ನೇರವಾಗಿ ಸಂಪರ್ಕಿಸಿ ಕೆಲಸ ಮಾಡಲು ತೀರ್ಮಾನಿಸಿದೆ.

ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ

2019ರಲ್ಲಿ ಸಿವಿಲ್ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಒತ್ತಡದಲ್ಲಿ ಅಧಿಕಾರಿಗಳು, ನೇರವಾಗಿ ಕಂಪನಿಯ ಉದ್ಯೋಗಿಗಳೊಂದಿಗೆ ಸಂಪರ್ಕ ಹೊಂದಿ ಕೆಲಸ ಮಾಡಿಸುತ್ತಿದ್ದಾರೆ.

ಐಎಲ್ ಅಂಡ್ ಎಫ್‌ಎಸ್ ಕಂಪನಿಯು ನಾಯಂಡಹಳ್ಳಿಯಿಂದ ಪಟ್ಟಣಗೆರೆವರೆಗೆ 3 ಕಿ.ಮೀ ಉದ್ದದ ಮಾರ್ಗ ನಿರ್ಮಿಸುತ್ತಿದೆ. ಕಂಪನಿಯು ಆರ್ಥಿಕ ನಷ್ಟಕ್ಕೊಳಗಾಗಿರುವುದರಿಂದ ಅನೇಕ ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ.

ಕೆಆರ್‌ಪುರ-ಸಿಲ್ಕ್ ಬೋರ್ಡ್ ಮಾರ್ಗದ ನಿರ್ಮಾಣ

ಕೆಆರ್‌ಪುರ-ಸಿಲ್ಕ್ ಬೋರ್ಡ್ ಮಾರ್ಗದ ನಿರ್ಮಾಣ

ಕೆಆರ್‌ಪುರ-ಸಿಲ್ಕ್ ಬೋರ್ಡ್ ಮಾರ್ಗದ ನಿರ್ಮಾಣಕ್ಕೆ ಇದೇ ಕಂಪನಿ ಅರ್ಜಿ ಹಾಕಿತ್ತು. ಕಂಪನಿ ಆರ್ಥಿಕ ನಷ್ಟದಲ್ಲಿರುವುದು ಹಾಗೂ ಮೈಸೂರು ರಸ್ತೆಯ ಮಾರ್ಗದ ಕಾಮಗಾರಿ ತಡವಾಗಿರುವ ಅಂಶಗಳನ್ನು ಗಮನಿಸಿ ಈ ಕಂಪಪನಿಗೆ ಟೆಂಡರ್ ಕೊಡದಿರಲು ನಿರ್ಧರಿಸಲಾಗಿದೆ.

ಮೆಟ್ರೋ ಕಾಮಗಾರಿ ಪೂರ್ಣ ಗುರಿ ಮುಂದಕ್ಕೆ

ಮೆಟ್ರೋ ಕಾಮಗಾರಿ ಪೂರ್ಣ ಗುರಿ ಮುಂದಕ್ಕೆ

ಈ ಹಿಂದೆ ನಾಯಂಡಹಳ್ಳಿ-ಕೆಂಗೇರಿ ಮಾರ್ಗವು 2019ರ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತವಾಗಬಹುದೆಂದು ಅಂದಾಜಿಸಲಾಗಿತ್ತು. ಈ ಗುರಿಯನ್ನು ಇಟ್ಟುಕೊಂಡೇ ಕಾಮಗಾರಿ ನಡೆಸಲಾಗಿತ್ತು. ಗುತ್ತಿಗೆ ಕಂಪನಿ ಆರ್ಥಿಕ ನಷ್ಟಕ್ಕೊಳಗಾದ ಕಾರಣ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿದಿಲ್ಲ.

ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ?

ನಾಯಂಡಹಳ್ಳಿ-ಕೆಂಗೇರಿ ಮಾರ್ಗ 2020ಕ್ಕೆ ಸಂಚಾರಕ್ಕೆ ಮುಕ್ತ

ನಾಯಂಡಹಳ್ಳಿ-ಕೆಂಗೇರಿ ಮಾರ್ಗ 2020ಕ್ಕೆ ಸಂಚಾರಕ್ಕೆ ಮುಕ್ತ

ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಮಾರ್ಗ 2020ಕ್ಕೆ ಸಂಚಾರಕ್ಕೆ ಮುಕ್ತವಾಗಲಿದೆ. 2019ಕ್ಕೆ ಸಿವಿಲ್ ಕಾಮಗಾರಿ ಮುಗಿದರೆ, ನಿಲ್ದಾಣದ ಒಳಭಾಗದ ಕಾಮಗಾರಿ ಸೇರಿದಂತೆ ಇನ್ನಿತರೆ ಕಾಮಗಾರಿ ಮುಗಿಯಲು ಹಲವು ತಿಂಗಳಾಗಬಹುದು.

ಉಪನಗರ ರೈಲು: ಬಿಎಂಆರ್‌ಸಿಎಲ್ ಜೊತೆ ಚರ್ಚೆಗೆ ಸಿಎಂ ಸೂಚನೆ

ಉಪನಗರ ರೈಲು: ಬಿಎಂಆರ್‌ಸಿಎಲ್ ಜೊತೆ ಚರ್ಚೆಗೆ ಸಿಎಂ ಸೂಚನೆ

ಬೆಂಗಳೂರು ಉಪನಗರ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಹಾಗೂ ಬಿಎಂಆರ್‌ಸಿಎಲ್ ಜೊತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ರೈಲ್ವೆ ಯೋಜನೆಯ ಕಾರ್ಯ ಸಾಧ್ಯತಾ ಅಧ್ಯಯನ ವರದಿಯ ಪ್ರಾತ್ಯಕ್ಷಿಕೆ ವೀಕ್ಷಿಸಿದ ಅವರು, ಉಪನಗರ ರೈಲ್ವೆ ಹಾಗೂ ಮೆಟ್ರೋ ರೈಲು ಮಾರ್ಗ ಒಂದೇ ವ್ಯಾಪ್ತಿಗೆ ಬರುವ ಪ್ರದೇಶಗಳ ತಾಂತ್ರಿಕ ಅಂಶಗಳ ಕುರಿತು ಸಭೆ ನಡೆಸುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ ಕಾರ್ಯ ಸಾಧ್ಯತಾ ವರದಿ ಕುರಿತಂತೆ ವಿಸ್ತೃತವಾಗಿ ಚರ್ಚಿಸಲಾಯಿತು. ಉಪನಗರಗಳಾದ ತುಮಕೂರು, ಮಂಡ್ಯ, ರಾಜಾನುಕುಂಟೆ, ಹೊಸೂರು, ವೈಟ್‌ಫೀಲ್ಡ್ ವರೆಗೂ ವಿಸ್ತರಿಸಲು ಅವಕಾಶವಿರುವ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯಲಾಯಿತು.

ಮೆಟ್ರೋ ಕುರಿತ ವಾಟ್ಸಪ್ ವದಂತಿ ನಂಬಬೇಡಿ: ಬಿಎಂಆರ್‌ಸಿಎಲ್ ಮನವಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BMRCL has decided to directly contact with contractors and subcontractors of metro project. They believed that other will help them to speed up the present works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more