Namma Metro: ಹಳದಿ ಮಾರ್ಗಕ್ಕೆ ರೈಲುಗಳ ಪೂರೈಕೆ, ಕಾರ್ಯಾಚರಣೆ: ತೇಜಸ್ವಿ ಸೂರ್ಯ ಕೊಟ್ರು ಬಿಗ್ ಅಪ್ಡೇಟ್
ಬೆಂಗಳೂರು, ಜನವರಿ 02: ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ನಮ್ಮ ಮೆಟ್ರೋ ಗುಡ್ ನ್ಯೂಸ್ ನೀಡಲಿದೆ. ಇನ್ನೇನು ಕೆಲವೇ ವಾರಗಳಲ್ಲಿ ಹೊಸೂರು ರಸ್ತೆವರೆಗಿನ ಮೆಟ್ರೋ ಹಳದಿ ಮಾರ್ಗವನ್ನು ತೆರೆಯಲು BMRCL ಸಜ್ಜಾಗಿದೆ. ಇದಕ್ಕೆ ಬೇಕಾದ ಮೆಟ್ರೋ ರೈಲುಗಳ ಪೂರೈಕೆಗೆ ಇದ್ದ ಅಡ್ಡಿ ನಿವಾರಿಸಲಾಗಿದೆ. ಇನ್ಮುಂದೆ ಪ್ರತಿ ತಿಂಗಳು ಟಿಟಾಗರ್‌ನಿಂದ ಬೆಂಗಳೂರಿಗೆ ಹೊಸ ಒಂದು ಇಲ್ಲವೇ ಎರಡು ಮೆಟ್ರೋಗಳು ಬರಲಿವೆ. ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಬಿಗ್ ಅಪ್ಡೇಟ್ ನೀಡಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ಬೆಂಗಳೂರಿನ ಆರ್.ವಿ.ರಸ್ತೆ-ಬೊಮ್ಮಸಂದ್ರ ರಸ್ತೆವರೆಗಿನ ನಮ್ಮ ಮೆಟ್ರೋ ಹಳದಿ ಮಾರ್ಗದ ಕಾರ್ಯಾಚರಣೆ ಆರಂಭವಾಗುವುದು ವಿಳಂಬವಾಗುತ್ತಿದೆ. ಬೆಂಗಳೂರು ಮೆಟ್ರೋ ರೈಲು ನಿಮಗವು (BMRCL) ಹಲವು ಗಡುವುಗಳನ್ನು ಮೀರಿದೆ. ಇದು ಮೆಟ್ರೋದ ಲಕ್ಷಾಂತರ ಪ್ರಯಾಣಿಕರ ನಿರೀಕ್ಷೆ, ಆಸೆ ಹುಸಿ ಮಾಡಿದೆ ಎಂದು ಸಂಸದರು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸಂಸದರ ಕೊಟ್ಟ ಸುಹಿ ಸುದ್ದಿಗಳು
ಮೆಟ್ರೋ ಹಳದಿ ಮಾರ್ಗ ಕಾರ್ಯಾಚರಣೆ ವಿಳಂಭಕ್ಕೆ ರೈಲುಗಳ ಅಲಭ್ಯತೆಯೇ ಪ್ರಮುಖ ಕಾರಣವಾಗಿದೆ. ಇದೆಲ್ಲದರ ಮಧ್ಯೆ ಒಂದಷ್ಟು ಒಳ್ಳೆಯ, ಸಿಹಿ ಸುದ್ದಿಗಳು ಹೊಸ ವರ್ಷಕ್ಕೆ ಸಿಕ್ಕಿವೆ ಎಂದು ಅವರು ವಿವರಿಸಿದ್ದಾರೆ.
ನಾನು ಕಳೆದ ಕೆಲವು ತಿಂಗಳುಗಳಿಂದ ರೈಲು ಉತ್ಪಾದಕ ಕಂಪನನಿ ಟಿಟಾಘರ್ ರೈಲು ವ್ಯವಸ್ಥೆ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ರೈಲು ಬೋಗಿ ತಯಾರಿಕೆಯನ್ನು ತ್ವರಿತಗೊಳಿಸುವಂತೆ ಒತ್ತಾಯಿಸಲಾಗಿದೆ. ಈಗಾಗಲೇ ಮೇಟ್ರೋ ಪೂರೈಸುವ ಕಂಪನಿಯ ಎಂಜಿನಿಯರ್‌ಗಳಿಗೆ ಉಂಟಾಗಿದ್ದ ವೀಸಾ, ಇನ್ನಿತರ ಅಡ್ಡಿ ಆತಂಕ ನಿವಾರಿಸಳಾಗಿದೆ. ರೈಲುಗಳು ಬೆಂಗಳೂರಿಗೆ ಪೂರೈಕೆ ಯಾವ ಮಾರ್ಗದಲ್ಲಿ ಮಾಡಬೇಕು ಎಂಬುದನ್ನು BMRCL ತಿಳಿಸಿದೆ.

ಜನವರಿ 6 ರಂದು ಮೆಟ್ರೋ ಪೂರೈಕೆ
ಹೊಸ ವರ್ಷದ ಮೊದಲ ವಾರ ಅಂದರೆ ಜನವರಿ 6 ರಂದು ಬೆಂಗಳೂರಿಗೆ ಮೊದಲು ರೈಲು ಪೂರೈಕೆಗೆ ಎಲ್ಲ ಸಿದ್ಧತೆ ನಡೆದಿದೆ. ಆ ರೈಲು ತಿಂಗಳಾಂತ್ಯಕ್ಕೆ ಬೆಂಗಳೂರಿಗೆ ಬರಲಿದೆ. ಅದರ ಬೆನ್ನಲ್ಲೆ ಫೆಬ್ರವರಿ ಮೊದಲ ವಾರ ಎರಡನೇ ರೈಲು ಪೂರೈಕೆ, ಏಪ್ರಿಲ್ ತಿಂಗಳಲ್ಲಿ ಮೂರನೇ ರೈಲು ಬೆಂಗಳೂರಿಗೆ ಕಳುಹಿಸುವುದಾಗಿ ಟಿಟಾಘರ್ ಒಪ್ಪಿದೆ ಎಂದು ಸಂಸದರು ಹೇಳಿದರು.
ಸೆಪ್ಟೆಂಬರ್ ವೇಳೆಗೆ ಮಾಸಿಕ 2 ರೈಲು ಪೂರೈಕೆ
ಇಷ್ಟು ಮಾತ್ರವಲ್ಲದೇ ಪ್ರತಿ ತಿಂಗಳಿಗೆ ಒಂದು ಸೆಟ್ ರೈಲು ತಲುಪಿಸುವುದಾಗಿ ಟಿಟಾಘರ್ ಕಂಪನಿ ಬದ್ಧವಾಗಿದೆ. ಇದೇ ವರ್ಷ ಸೆಪ್ಟೆಂಬರ್ ವೇಳೆಗೆ ತಿಂಗಳಿಗೆ 2 ರೈಲುಗಳನ್ನು ಬೆಂಗಳೂರಿಗೆ ಕಳುಹಿಸುವ ಪ್ರಯತ್ನ ಸಹ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೈಲುಗಳು ಬೆಂಗಳೂರಿಗೆ ಬರುತ್ತಿದ್ದಂತೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ (CMRS) ಅನುಮೋದನೆ ಪಡೆದು ಕಾರ್ಯಾಚದರಣೆ ನಡೆಸಲಾಗುವುದು. ಈ ಕುರಿತು ಬಿಎಂಆರ್‌ಸಿಎಲ್ ಜೊತೆಗೂ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ರೈಲು ಕಾರ್ಯಾಚರಣೆ ವಿಳಂಬವಾಗದಂತೆ ಸೂಚಿಸಲಾಗಿದೆ ಎಂದರು.
ಮೆಟ್ರೋ ಪೂರೈಕೆಗೆ ಕೇಂದ್ರ ಸಚಿವರು ಹಸಿರು ನಿಶಾನೆ
ವಸತಿ ಮತ್ತು ನಗರ ವ್ಯವಹಾರಗಳ ಸಚಿವ (MoHUA) ಮನೋಹರ್ ಲಾಲ್ ಖಟ್ಟರ್ ಅವರು ಜನವರಿ 6 ರಂದು ಮೆಟ್ರೋ ರೈಲು ಉತ್ಪಾದನಾ ಘಟಕಕ್ಕೆ ಭೇಟಿ ಕೊಡಲಿದ್ದಾರೆ. ಈ ವೇಳೆ ಅವರು ಬೆಂಗಳೂರಿಗೆ ಬರಲಿರುವ ಮೆಟ್ರೋ ರೈಲು ಪೂರೈಕೆಗೆ ಫ್ಲಾಗ್ ಆಫ್ ಮಾಡಲಿದ್ದಾರೆ. ರೈಲುಗಳ ತ್ವರಿತ ಪೂರೈಕೆಗೆ ಸೂಚಿಸುವ ಜೊತೆಗೆ ಘಟಕ ಪರಿಶೀಲಿಸುತ್ತಾರೆ. ಈ ಸಂಬಂಧ ನಾನು ಕೊಲ್ಕತ್ತಾಗೆ ತೆರಳಲಿದ್ದೇನೆ ಎಂದು ಸಂಸದರು ಮಾಹಿತಿ ನೀಡಿದರು.
ಮೆಟ್ರೋ ಪ್ರಯಾಣಿಕರ ಆಸೆ ಈಡೇರಲಿದೆ
ನಮ್ಮ ಮೆಟ್ರೋ ಹಳದಿ ಮಾರ್ಗದ ಕಾರ್ಯಾಚರಣೆ ನಿರಂತರವಾಗಿ ವಿಳಂಬವಾಗುತ್ತಿರುವುದಕ್ಕೆ ನಾನು ಸಹ ನಿಮ್ಮಂತೆ (ಪ್ರಯಾಣಿಕರಂತೆ) ನಿರಾಶೆಗೊಂಡಿದ್ದೇನೆ. ಈ ಮಾರ್ಗ ಕಾರ್ಯಾಚರಣೆ ಅಗತ್ಯತೆ, ಇಲ್ಲಿನ ಸಂಚಾರ ಪರಿಸ್ಥಿತಿ ಕುರಿತು ವಿವರಿಸಲಿದ್ದೇನೆ. ಶೀಘ್ರವೇ ಮೆಟ್ರೋ ಕಾರ್ಯಾಚರಣೆ ಆರಂಭಿಸಲು ಮೆಟ್ರೋ ನಿಗಮವನ್ನು ಒತ್ತಾಯಿಸುತ್ತಿದ್ದು, ನಿಮ್ಮ ಆಸೆ ಶೀಘ್ರವೇ ಈಡೇರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಇನ್ನೂ ಬೆಂಗಳೂರು ನಮ್ಮ ಮೆಟ್ರೋ ವಿವಿಧ ಕಡೆಗಳಲ್ಲಿ ಮೆಟ್ರೋ ವಿಸ್ತರಣೆ ಮಾಡುತ್ತಿದೆ. ನೀಲಿ ಮಾರ್ಗ, ಗುಲಾಬಿ ಮಾರ್ಗದ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಗುಲಾಬಿ ಮಾರ್ಗವು ಬಹುತೇಕ ಸುರಂಗದಲ್ಲಿ ಬರುತ್ತದೆ. ಇನ್ನೂ ನೀಲಿ ಮಾರ್ಗವು ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂ ಮಾರ್ಗವಾಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ.
ಮತ್ತೊಂದೆಡೆ ರಾಜ್ಯ ಸರ್ಕಾರ ನೆಲಮಂಗಳ, ರಾಮನಗರ, ಕನಕುಪುರದವರೆಗೂ ನಮ್ಮ ಮೆಟ್ರೋ ಅನ್ನು ವಿಸ್ತರಣೆ ಮಾಡಲು ಚಿಂತನೆ ನಡೆಸಿದೆ. ಇತ್ತ ಬಿಎಂಆರ್‌ಸಿಎಲ್ ಬೆಂಗಳೂರು ನಗರದಿಂದ ಹೊರ ವಲಯದ ವರೆಗೂ ಮೆಟ್ರೋ ವಿಸ್ತರಣೆ ಮಾಡಬಹುದಾ ಎಂಬುದರ ಕುರಿತು ಚಿಂತನೆ ನಡೆಸಿದೆ.












Click it and Unblock the Notifications