ಟಿಪ್ಪು ಜಯಂತಿ ವಿವಾದ: ಹೆಗಡೆ ವಿರುದ್ಧ ಕಾನೂನು ಕ್ರಮಕ್ಕೆ ಟಿಪ್ಪು ಕುಟುಂಬ ಒತ್ತಾಯ
ಬೆಂಗಳೂರು, ಅಕ್ಟೋಬರ್ 23: ಟಿಪ್ಪು ಸುಲ್ತಾನ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಟಿಪ್ಪು ಕುಟುಂಬಸ್ಥರು, ಅವರ ವಿರುದ್ಧ ಕಾನೂನು ಸಮರ ನಡೆಸಲಾಗುವುದು ಎಂದಿದ್ದಾರೆ.
16 ನೇ ಶತಮಾನದಲ್ಲಿ ಮೈಸೂರನ್ನು ಆಳಿದ ಟಿಪು ಸುಲ್ತಾನ್ ಒಬ್ಬ ಅತ್ಯಾಚಾರಿ ಮತ್ತು ಕೊಲೆಗಡುಕ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು. ನ.10 ರಂದು ನಡೆಯಲಿರುವ ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಮುದ್ರಿಸದಿರುವಂತೆಯೂ ಹೇಳಿದ್ದರು. ಈ ಕುರಿತು ಟಿಪ್ಪು ಸುಲ್ತಾನನ ಆರನೇ ಪೀಳಿಗೆಯ ಭಕ್ತಿಯಾರ್ ಅಲಿ, ತಮ್ಮ ಇತರೆ ಕುಟುಂಬಸ್ಥರೊಂದಿಗೆ ಚರ್ಚಿಸಿ, ಹೆಗಡೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಮನವಿ ಮಾಡುವುದಾಗಿ ಹೇಳಿದ್ದಾರೆ.

'ಟಿಪ್ಪು ಸುಲ್ತಾನ್ ಒಬ್ಬ ಅಪ್ರತಿಮ ವೀರ, ಹೋರಾಟಗಾರ. ಅಂಥವರ ವಿರುದ್ಧ ಇಂಥ ಅವಹೇಳನಾಕಾರಿ ಹೇಳಿಕೆ ನೀಡುವುದು ತರವಲ್ಲ. ಇದು ಟಿಪ್ಪು ಸುಲ್ತಾನನ ವ್ಯಕ್ತಿತ್ವವನ್ನು ಜನರ ಕಣ್ಣಲ್ಲಿ ಕೀಳಾಗುವಂತೆ ಮಾಡುತ್ತದೆ' ಎಂದು ಅಲಿ ಹೇಳಿದ್ದಾರೆ.












Click it and Unblock the Notifications