Karnataka Rails: ರಾಜ್ಯದ ವಿವಿಧ ಎಕ್ಸ್‌ಪ್ರೆಸ್ ರೈಲುಗಳ ಸಮಯ ಬದಲಾವಣೆ, ಹೊಸ ವೇಳಾಪಟ್ಟಿ
Railway Updates: ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಚರಿಸುವ ಹಾಗೂ ವಿವಿಧ ಮಾರ್ಗಗಳ ಸಂಚಾರ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ. ನಿಲ್ದಾಣಕ್ಕೆ ಬರುವ ಸಮಯ ಹಾಗೂ ಹೋಗುವ ಸಮಯ ಪರಿಷ್ಕರಣೆ ಮಾಡಲಾಗಿದೆ. ತಿರುಪತಿ-ಚಾಮರಾಜನಗರ, ಎಸ್‌ಎಂವಿಟಿ ಬೆಂಗಳೂರು - ಗೋಮತಿ ನಗರ, ಹುಬ್ಬಳ್ಳಿ ರೈಲುಗಳ ಸಮಯ ಪರಿಷ್ಕರಿಸಲಾಗಿದೆ. ಅದರ ಹೊಸ ವೇಳಾಪಟ್ಟಿ, ಅಪ್ಡೇಟ್ಸ್ ವಿವರ ಇಲ್ಲಿದೆ.
ತಿರುಪತಿ-ಚಾಮರಾಜನಗರ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16220) ಮತ್ತು ಅನಂತಪುರದಲ್ಲಿ SMVT ಬೆಂಗಳೂರು ಗ್ವಾಲಿಯರ್ ಎಕ್ಸ್‌ಪ್ರೆಸ್‌ನ ರೈಲು (11085) ಆಗಮನ ಮತ್ತು ನಿರ್ಗಮನ ಸಮಯ ಪರಿಷ್ಕರಣೆ ಆಗಿದೆ. ಪ್ರಸ್ತುತ ಪಕಳ ಜಂಕ್ಷನ್‌ಗೆ ತಿರುಪತಿ ಚಾಮರಾಜನಗರ ದೈನಂದಿನ ಎಕ್ಸ್‌ಪ್ರೆಸ್ ರೈಲು (16220) ಸದ್ಯ 22.29 ಗಂಟೆಗೆ ಆಗಮಿಸುವ 22.30ಕ್ಕೆ ಹೊರಡುವ ರೈಲು ಈಗ 22.19/22.20 ಗಂಟೆಗೆ ಆಗಮಿಸಲಿದೆ/ಹೊರಡಲಿದೆ. ಜುಲೈ 17 ರಿಂದಲೇ ಈ ಹೊಸ ವೇಳಾಪಟ್ಟಿ ಜಾರಿಗೆ ಬಂದಿದೆ.

SMVT ಬೆಂಗಳೂರು ಗ್ವಾಲಿಯರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (11085) ಅನಂತಪುರ ರೈಲು ನಿಲ್ದಾಣಕ್ಕೆ ಸದ್ಯ 20.18 ಗಂಟೆಗೆ ಆಗಮಿಸಿ 20.20 ಗಂಟೆಗೆ ಹೊರಡುತ್ತದೆ. ಅದು ಪರಿಷ್ಕೃತ ಸಮಯದಲ್ಲಿ ಜುಲೈ 22ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರುವಂತೆ ಈ ನಿಲ್ದಾಣಕ್ಕೆ ರಾತ್ರಿ 20.23 ಗಂಟೆಗೆ ಆಗಮಿಸಿ 20.25ಕ್ಕೆ ಹೊರಡುತ್ತದೆ.
ರೈಲುಗಳ ವೇಳಾಪಟ್ಟಿ ಬದಲಾವಣೆ
* ರೈಲು ಸಂಖ್ಯೆ 07315 ಎಸ್‌ಎಸ್‌ಎಸ್ ಹುಬ್ಬಳ್ಳಿ - ಮುಜಫರ್‌ಪುರ ಎಕ್ಸ್‌ಪ್ರೆಸ್ ರೈಲು ಇಂದಿನಿಂದ (ಜುಲೈ 22) ಕಾರ್ಯಾಚರಣೆಯ ಕಾರಣಗಳಿಂದಾಗಿ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಸಂಜೆ 6.05 ಕ್ಕೆ (ನಿಗದಿತ ನಿರ್ಗಮನ 17.00 ಗಂಟೆಗೆ) ಹೊರಡುವಂತೆ ಮರು ನಿಗದಿಪಡಿಸಲಾಗಿದೆ.
* ಅಷ್ಟೇ ಅಲ್ಲದೇ ರೈಲು ಸಂಖ್ಯೆ 06529 ಎಸ್‌ಎಂವಿಟಿ ಬೆಂಗಳೂರು- ಗೋಮತಿ ನಗರ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆಯ ಕಾರಣಗಳಿಂದಾಗಿ ಬೆಳಗ್ಗೆ 6.30 ಕ್ಕೆ (ನಿಗದಿತ ನಿರ್ಗಮನ 19.00 ಗಂಟೆಗೆ) ಹೊರಡುವಂತೆ ಮರು ನಿಗದಿಪಡಿಸಲಾಗಿದೆ ಎಂದಯ ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಕರ್ನಾಟಕ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಆಗಾಗ ವಿವಿಧ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಕೆಲವು ರೈಲ್ವೆ ಸಂಚಾರದಲ್ಲಿ ಬದಲಾವಣೆ ಆಗಿದೆ. ನಿಲುಗಡೆ, ಮಾರ್ಗ ಮಧ್ಯ ನಿಯಂತ್ರಣ ಮಾಡಲಾಗುತ್ತಿದೆ ಎಂದು ಇತ್ತೀಚೆಗೆ ರೈಲ್ವೆ ಅಧಿಕಾರಿಗಳು ತಿಳಿಸಿದ್ದರು.












Click it and Unblock the Notifications