ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಣಿಜ್ಯ ವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕೆ ಮೂರು ಹೊಸ ವಾಣಿಜ್ಯ ಕೋರ್ಟ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19: ರಾಜ್ಯದಲ್ಲಿ ಮೂರು ವಾಣಿಜ್ಯಾತ್ಮಕ ನ್ಯಾಯಾಲಯವನ್ನು ಸ್ಥಾಪಿಸಲು ಸಮ್ಮತಿ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್‌ಗೆ ಜಾಮೀನು, ಬೀಸೋ ದೊಣ್ಣೆಯಿಂದ ಪಾರುಡಿ.ಕೆ.ಶಿವಕುಮಾರ್‌ಗೆ ಜಾಮೀನು, ಬೀಸೋ ದೊಣ್ಣೆಯಿಂದ ಪಾರು

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಾಣಿಜ್ಯ ವ್ಯವಹಾರಗಳ ದಾವೆಗಳ ಸುಗಮ ನಿರ್ವಹಣೆಗಾಗಿ ಈ ಮೂರು ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಒಂದು ನ್ಯಾಯಾಲಯ ಬಳ್ಳಾರಿಯಲ್ಲಿ ಸ್ಥಾಪನೆ ಮಾಡಲು ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.

ಭಾರತಕ್ಕೆ ಮಲ್ಯ ಹಸ್ತಾಂತರ: ಸೆ. 18ಕ್ಕೆ ವಿಚಾರಣೆ ಮುಂದೂಡಿಕೆಭಾರತಕ್ಕೆ ಮಲ್ಯ ಹಸ್ತಾಂತರ: ಸೆ. 18ಕ್ಕೆ ವಿಚಾರಣೆ ಮುಂದೂಡಿಕೆ

'ಕಮರ್ಷಿಯಲ್ ಕೋರ್ಟ್ಸ್, ಕಮರ್ಷಿಯಲ್ ಡಿವಿಷನ್ ಅಂಡ್ ಕಮರ್ಷಿಯಲ್ ಅಪೆಲೇಟ್ ಡಿವಿಷನ್ ಆಫ್ ಹೈಕೋರ್ಟ್ಸ್ ಆಕ್ಟ್, 2015' ರಲ್ಲಿ ದಾಖಲಾಗುವ ಪ್ರಕರಣಗಳನ್ನು ಈ ನ್ಯಾಯಾಲಯದಲ್ಲಿ ನಿರ್ವಹಿಸಲಾಗುತ್ತದೆ.

Three more new commercial courts in Karnataka

ಈ ನ್ಯಾಯಾಲಯಗಳಿಗೆ ಅಗತ್ಯವಾದ ಹುದ್ದೆಗಳಿಗೂ ಸಹ ಮಂಜೂರಾತಿ ನೀಡಲಾಗಿದೆ. ಪ್ರತಿ ನ್ಯಾಯಾಲಯಕ್ಕೆ ಒಬ್ಬರು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು, ಒಬ್ಬರು ಶಿರಸ್ತೆದಾರರು, ತೀರ್ಪು ಬರಹಗಾರರು, ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು, ಅಟೆಂಡರ್ ಹಾಗೂ ಜವಾನ ಸೇರಿದಂತೆ 8 ಹುದ್ದೆಗಳಿಗೆ ನೇಮಕ ಮಾಡುವಂತೆ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

English summary
Parliamentary affairs, Law and Prosecution minister Krishna Byregowda has said that the state government has given consent to formation of three new commercial courts to ease the redressing commercial disputes in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X