ಬಿಎಂಟಿಸಿಯ 2,225 ಹುದ್ದೆಗಳಿಗೆ ಮೂರು ಲಕ್ಷ ಅರ್ಜಿ ಸಲ್ಲಿಕೆ!

ಬೆಂಗಳೂರು, ಡಿಸೆಂಬರ್ 29 : ಬೆಂಗಳೂರು ನಗರ ಸಾರಿಗೆ ಸಂಸ್ಥೆಯು ವಿವಿಧ 2,225 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಅದಕ್ಕೆ ಬರೋಬ್ಬರಿ 3 ಲಕ್ಷ ಆನ್ ಲೈನ್ ಅರ್ಜಿಗಳು ಸಲ್ಲಿಕೆಯಾಗಿದೆ.

ಬಿಎಂಟಿಸಿ ಚಾಲಕ, ನಿರ್ವಾಹಕ, ಸಹಾಯಕ ಸಂಚಾರ ನಿರೀಕ್ಷಕ, ಭದ್ರತಾ ರಕ್ಷಕ, ಕುಶಲಕರ್ಮಿ ಹಾಗೂ ತಾಂತ್ರಿಕ ಸಹಾಯ ಹೀಗೆ 2,225 ಹುದ್ದೆಗಳಿಗೆ ಆನ್ ಲೈನ್ ಮೂಲಕ 3 ಲಕ್ಷ ಅರ್ಜಿ ಸಲ್ಲಿಕೆಯಾಗಿದೆ. ಡಿ.11 ರಿಂದ ಡಿ.26 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು.

Three lakh aspirants for 2.2k jobs in BMTC

500 ಚಾಲಕ ಹಾಗೂ 534 ನಿರ್ವಾಹಕ ಹುದ್ದೆಗಳಿಗೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಅಂತರ್ ನಿಗಮ ವರ್ಗಾವಣೆ ಸಂದರ್ಭದಲ್ಲಿ ನಿಗಮದಿಂದ ಹೊರಹೋಗಲು 10 ಸಾವಿರಕ್ಕೂ ಅಧಿಕ ಸಿಬ್ಬಂದಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ವರ್ಗಾವಣೆಗೆ 2,337 ಸಿಬ್ಬಂದಿ ಅರ್ಹರಾಗಿದ್ದರು.

ವರ್ಗಾವಣೆಯಿಂದ ತೆರವಾಗುವ ಸ್ಥಾನ ತುಂಬಲು ನಿಗಮ ಅರ್ಜಿ ಆಹ್ವಾನಿಸಿತ್ತು. ಸಲ್ಲಿಯಾಗಿರುವ ಅರ್ಜಿ ಸಂಖ್ಯೆ ನೋಡಿದರೆ ಯುವಕರು ನಿಗಮದಲ್ಲಿ ಕಾರ್ಯನಿರ್ವಹಿಸಲು ಉತ್ಸುಕರಾಗಿರುವುದು ತಿಳಿಯುತ್ತದೆ. ಶೀಘ್ರದಲ್ಲಿ ಪರೀಕ್ಷಾ ದಿನಾಂಕ ಘೋಷಣೆ ಮಾಡಲಾಗುತ್ತದ. ಚಾಲಕ ಹುದ್ದೆಗೆ ನೇರ ನೇಮಕಾತಿ ಇರಲಿದ್ದು, ಉಳಿದ ಎಲ್ಲ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್ ತಿಳಿಸಿದ್ದಾರೆ.

ಚಾಲಕ-500 ಹೈ.ಕ. ಮೀಸಲು ಹುದ್ದೆ 108, ನಿರ್ವಾಹಕ-534, ಸ.ಸಂ. ನಿರೀಕ್ಷಕ 39 ಮೀಸಲು ಹುದ್ದೆ 16, ತಾಂತ್ರಿಕ ಸಹಾಯಕ-898 ಮೀಸಲು ಹುದ್ದೆ 120, ಕುಶಲಕರ್ಮಿ-82 ಮೀಸಲು ಹುದ್ದೆ 28ಒಟ್ಟು 2,225 ಇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+