ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಗರಿಷ್ಠ ತಾಪಮಾನ ಒಂದೇ ದಿನದಲ್ಲಿ 3 ಡಿಗ್ರಿ ಏರಿಕೆ

|
Google Oneindia Kannada News

ಬೆಂಗಳೂರು, ಮೇ 3: ನಗರದ ಗರಿಷ್ಠ ತಾಪಮಾನ ಒಂದೇ ದಿನದಲ್ಲಿ 3 ಡಿಗ್ರಿಯಷ್ಟು ಏರಿಕೆ ಕಂಡಿದೆ. ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ತಾಪಮಾನದಲ್ಲಿ ಕೊಂಚ ಇಳಿಮುಖ ಗೋಚರಿಸಿತ್ತು.

ಇದೀಗ ಒಂದೇ ದಿನದಲ್ಲಿ 30 ಡಿಗ್ರಿ ಸೆಲ್ಸಿಯಸ್‌ನಿಂದ 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶಕ್ಕೆ ಏರಿಕೆಯಾಗಿದೆ. ಫ್ಯಾನಿ ಚಂಡಮಾರುತ ತೀವ್ರತೆ ಕಡಿಮೆಯಾಗಬಹುದುಗಿರುವುದರಿಂದ ನಗರದಲ್ಲಿ ಮಳೆ ಮಾಯವಾಗಿ ತಾಪಮಾನ ಏರಿಕೆಯಾಗಿದೆ.

ಕಡು ಬೇಸಿಗೆಯ ತಿಂಗಳಾದ ಮೇನಲ್ಲಿ ಸಾಮಾನ್ಯವಾಗಿ 36-37 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇನ್ನುಮುಂದೆ ದಕ್ಷಿಣ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ.

three-degree-celcius-maximum-temperature-increased-in-bengaluru
ದಕ್ಷಿಣ ಒಳನಾಡಿನ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಗರದಲ್ಲಿ ತಾಪಮಾನ ಏರಿಳಿಕೆ ಹೆಚ್ಚಿದೆ. ಪ್ರತಿ ವರ್ಷ ಮೇ ತಿಂಗಳ ಆರಂಭದಲ್ಲೇ ಸೆಕೆ ಜೋರಾಗಿತ್ತು. ಈ ಬಾರಿ ವಾಡಿಕೆಗಿಂತ 2 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಕಡಿಮೆಯಾಗಿದೆ.

ಬೆಂಗಳೂರಲ್ಲಿ ಒಂದೇ ಒಂದು ಮಳೆ, ಗರಿಷ್ಠ ತಾಪಮಾನದಲ್ಲಿ ಭಾರಿ ಇಳಿಕೆ ಬೆಂಗಳೂರಲ್ಲಿ ಒಂದೇ ಒಂದು ಮಳೆ, ಗರಿಷ್ಠ ತಾಪಮಾನದಲ್ಲಿ ಭಾರಿ ಇಳಿಕೆ

ಏಪ್ರಿಲ್‌ನಲ್ಲಿ ಬಹುತೇಕ ದಿನಗಳಲ್ಲಿ ಹಗಲಿನ ಜೊತೆಗೆ ರಾತ್ರಿಯೂ ಸೆಕೆ ವಿಪರೀತವಾಗಿತ್ತು. ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 33.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್, ಕೆಐಎಎಲ್‌ನಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್, ಗರಿಷ್ಠ 20.8 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ಕನಿಷ್ಠ 21.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

English summary
Bengaluru once again witnessing high temperature. In one day three degree celcius maximum temperature increased
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X