ಜೂನ್ ಮೊದಲ ವಾರ ಆಗಸದಲ್ಲಿ ಸಂಭವಿಸಲಿದೆ ಈ ಅಚ್ಚರಿ! ಮಿಸ್ ಮಾಡದೇ ಓದಿ
ಬೆಂಗಳೂರು, ಜೂನ್ 01: ಜೂನ್ ಮೊದಲ ವಾರ ಪೂರ್ವ ಆಕಾಶದಲ್ಲಿ ಬೆಳಗಿನ ಸೂರ್ಯೋದಯಕ್ಕೆ ಮುನ್ನ ಆರು ಗ್ರಹಗಳನ್ನು ನೋಡಬಹುದಾಗಿದೆ. ಬರಿಗಣ್ಣಿಗೆ ಕಾಣುವ ಶನಿ , ಮಂಗಳ, ಗುರು ಹಾಗೂ ಬುಧನ ಜೊತೆ ಬೈನಾಕುಲರ್‌ನಲ್ಲಿ ನೋಡಬಹುದಾದ ನೆಪ್ಚೂನ್ ಹಾಗೂ ಯುರೇನಸ್ ಗ್ರಹಗಳ ಮೆರವಣಿಗೆ ಎನ್ನುವ ರೀತಿಯಲ್ಲಿ ಕಾಣಿಸಲಿವೆ.
ಕೆಲ ವಾರಗಳಿಂದ ಸೂರ್ಯನ ನೇರ ಬಂದು ಅಸ್ತವಾಗಿದ್ದ ಗುರು ಗ್ರಹ, ಜೂನ್ ಒಂದರಿಂದ ಪೂರ್ವ ಆಕಾಶದಲ್ಲಿ ಕಾಣಿಸಲಿದೆ. ಗುರು ಗ್ರಹದ ಜೊತೆ ಜೊತೆಯಾಗಿ ಅಪರೂಪದ ಬುಧ ಗ್ರಹವೂ ಗೋಚರಿಸಲಿದೆ. ಬುಧ ಯಾವಾಗಲೂ ಬರಿಗಣ್ಣಿಗೆ ಕಾಣಿಸುವುದಿಲ್ಲ. ವರ್ಷದಲ್ಲಿ ಬರೇ ಆರು ಬಾರಿ ಕೆಲ ದಿನಗಳು ಕೆಲ ನಿಮಿಷಗಳು ಮಾತ್ರ ಗೋಚರಿಸುತ್ತದೆ.

ಸುಮಾರು ಸೂರ್ಯೋದಯಕ್ಕೆ 20 ನಿಮಿಷ ಮುಂಚಿತವಾಗಿ ಪೂರ್ವ ಆಕಾಶದಲ್ಲಿ ದಿಗಂತದಿಂದ ಗುರು , ಬುಧ, ಯರೇನಸ್, ಮಂಗಳ, ನೆಪ್ಚೂನ್‌ನ ನಂತರ ಶನಿಗ್ರಹಗಳು ಗೋಚರಿಸಲಿವೆ. ಇವನ್ನೆಲ್ಲಾ ಪರಿಚಯಿಸಲೋ ಎನ್ನುವಂತೆ ಅಮವಾಸ್ಯೆಗೆ ಸೂರ್ಯನನ್ನು ಸಮೀಪಿಸುವ ಚಂದ್ರ ಈ ಎಲ್ಲಾ ಗ್ರಹಗಳ ಸಮೀಪ ಹಾದು ದಿಗಂತದೆಡೆಗೆ ಸರಿಯುತ್ತಿರುತ್ತದೆ. ಜೂನ್ ಮೊದಲ ವಾರ ಈ ವಿಸ್ಮಯವನ್ನು ಕಣ್ತಿಂಬಿಗೊಳ್ಳಬಹುದಾಗಿದೆ.
ಜೂನ್ 21ರಂದು ದೀರ್ಘ ಹಗಲು
ಜೂನ್ 21ರಂದು ಅತಿ ದೀರ್ಘದ ದಿನ ಎಂದು ಕರೆಯಲಾಗುತ್ತದೆ. ಅದೇ ಅಯನ ಸಂಕ್ರಾಂತಿ. ಜೂನ್ 21ರಿಂದ ಹಗಲು ಕಡಿಮೆಯಾಗಿ, ರಾತ್ರಿ ಹೆಚ್ಚಾಗಲು ಶುರುವಾಗುತ್ತದೆ. ಅಯನ ಸಂಕ್ರಾಂತಿ ಬೇಸಿಗೆ ಅಥವಾ ಚಳಿಗಾಲದ ಆರಂಭಕ್ಕೆ ಕಾರಣವಾದ ಖಗೋಳ ಘಟನೆ. ಈ ಆಕಾಶ ಘಟನೆಗಳು ವರ್ಷದ ಮೇಲ್ಮೈಯಲ್ಲಿ ಸೌರ ಕಿರಣಗಳ ಸಂಭವವು ಭೂಮಿಯ ಮೇಲ್ಮೈಯಲ್ಲಿ ಗರಿಷ್ಠ ಅಥವಾ ಕನಿಷ್ಠವಾಗಿದ್ದರೆ, ವರ್ಷದ ದೀರ್ಘ ಮತ್ತು ಕಡಿಮೆ ದಿನವನ್ನು ನಿರ್ಧರಿಸುತ್ತದೆ.

ಉತ್ತರ ಗೋಳಾರ್ಧ, ಬೇಸಿಗೆ ಅಯನ ಸಂಕ್ರಾಂತಿಯು ಜೂನ್ 21 ರಿಂದ 23 ರವರೆಗೆ ಮತ್ತು ಚಳಿಗಾಲದ ಅಯನ ಸಂಕ್ರಾಂತಿಯು ಡಿಸೆಂಬರ್ 21 ರಿಂದ 23 ರವರೆಗೆ ನಡೆಯುತ್ತದೆ. ಭೂಮಿಯ ಜ್ಯಾಮಿತಿ ಮತ್ತು ಸೂರ್ಯನ ಸುತ್ತ ಅದರ ಚಲನೆಯಿಂದಾಗಿ, ದಕ್ಷಿಣ ಗೋಳಾರ್ಧದಲ್ಲಿ ಬೇಸಿಗೆಯ ಅಯನ ಸಂಕ್ರಾಂತಿಯು ಉತ್ತರ ಗೋಳಾರ್ಧದಲ್ಲಿ ಚಳಿಗಾಲದ ಅಯನ ಸಂಕ್ರಾಂತಿಯಂತೆಯೇ ಸಂಭವಿಸುತ್ತದೆ.












Click it and Unblock the Notifications