ತಮಿಳುನಾಡಿನ ತಿರುಮುಗನ್ ಗಾಂಧಿ ಬೆಂಗಳೂರಲ್ಲಿ ಬಂಧನ

ಬೆಂಗಳೂರು, ಆಗಸ್ಟ್ 09 : ತಮಿಳುನಾಡು ಮೂಲದ ಮಾನವ ಹಕ್ಕು ಹೋರಾಟಗಾರ ತಿರುಮುಗನ್ ಗಾಂಧಿ ಬಂಧಿಸಲಾಗಿದೆ. ತಮಿಳುನಾಡು ಪೊಲೀಸರು ಗಾಂಧಿ ಬಂಧನಕ್ಕೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು.

ಗುರುವಾರ ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಿರುಮುಗನ್ ಗಾಂಧಿ ಬಂಧಿಸಲಾಗಿದೆ. ತೂತುಕುಡಿಯಲ್ಲಿ ಸ್ಟರ್‌ಲೈಟ್‌ ಕೈಗಾರಿಕಾ ಘಟಕವನ್ನು ಮುಚ್ಚುವಂತೆ ನಡೆದ ಪ್ರತಿಭಟನೆ ವೇಳೆ ಕೊಲೆ ಮಾಡಿರುವ ಆರೋಪವೂ ತಿರುಮುಗನ್ ಗಾಂಧಿ ವಿರುದ್ಧ ಇದೆ.

ತಮಿಳುನಾಡು ಪೊಲೀಸರು ತಿರುಮುಗನ್ ಗಾಂಧಿ ಬಂಧನಕ್ಕಾಗಿ ಲುಕ್‌ ಔಟ್ ನೋಟಿಸ್ ಜಾರಿ ಮಾಡಿದ್ದರು. ಯುರೋಪ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ತಿರುಮುಗನ್ ಗಾಂಧಿಯನ್ನು ಪೊಲೀಸರು ಬಂಧಿಸಿದರು.

Thirumurugan Gandhi arrested in Bengaluru airport

ಜಿನೀವಾಕ್ಕೆ ಪ್ರಯಾಣ ಬೆಳೆಸಿದ್ದ ತಿರುಮುಗನ್ ಗಾಂಧಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ತೂತುಕುಡಿಯಲ್ಲಿ 2018ರ ಮೇ ನಲ್ಲಿ ನಡೆದ ಪ್ರತಿಭಟನೆ ಬಗ್ಗೆ ಅಲ್ಲಿ ಮಾತನಾಡಿದ್ದರು.

ತಿರುಮುಗನ್ ಗಾಂಧಿ ವಿರುದ್ಧ 2017ರಲ್ಲಿ ತಮಿಳುನಾಡು ಪೊಲೀಸರು ಗೂಂಡಾ ಕಾಯ್ದೆ ಹಾಕಿದ್ದರು. ತಮಿಳುನಾಡು ಪೊಲೀಸರು ತಿರುಮುಗನ್ ಗಾಂಧಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಮೇ ತಿಂಗಳಿನಲ್ಲಿ ತಮಿಳುನಾಡಿನ ತೂತುಕುಡಿಯಲ್ಲಿ ತಾಮ್ರ ಘಟಕ ಮುಚ್ಚುವಂತೆ ಆಗ್ರಹಿಸಿ ರೈತರು ಬೃಹತ್ ಪ್ರತಿಭಟನೆ ನಡಸಿದ್ದರು. ಪ್ರತಿಭಟನೆ ಹಿಂಸಾರೂಪ ಪಡೆದಾಗ ಪೊಲೀಸರು ಗೋಲಿಬಾರ್ ನಡೆಸಿದ್ದರು. 12 ರೈತರು ಈ ವೇಳೆ ಮೃತಪಟ್ಟಿದ್ದರು.

ಅಂತಿಮವಾಗಿ ಮುಖ್ಯಮಂತ್ರಿ ಪಳನಿಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೂತುಕುಡಿಯ ತಾಮ್ರ ಘಟಕ ಮುಚ್ಚಲು ತೀರ್ಮಾನ ಕೈಗೊಳ್ಳಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+