Bengaluru Traffic: ಓಕಳೀಪುರ ರೈಲ್ವೇ ಮೂರನೇ ಕೆಳಸೇತುವೆ ನಿರ್ಮಾಣಕ್ಕೆ ಆರ್‌ಸಿಸಿ ಬಾಕ್ಸ್ ಸ್ಥಾಪನೆ
ಬೆಂಗಳೂರಿನ ವಾಹನ ಸವಾರರಿಗೆ ಖುಷಿಯ ಸುದ್ದಿ ಸಿಕ್ಕಿದೆ, ನಗರದ ಅತ್ಯಂತ ಜನನಿಬಿಡ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದ (ಮೆಜೆಸ್ಟಿಕ್) ಸಮೀಪದಲ್ಲಿ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆಯ ಭಾಗವಾಗಿ, ಮೂರನೇ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಅಧಿಕಾರಿಗಳು ಓಕಳೀಪುರದಲ್ಲಿ ಆರ್‌ಸಿಸಿ ಬಾಕ್ಸ್ ಅನ್ನು ಅಳವಡಿಸಿದ್ದಾರೆ.
ಮಂಗಳವಾರ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 5.30ರ ವರೆಗೆ ಈ ಕಾಮಗಾರಿ ನಡೆಸಲಾಗಿದೆ. ಕಾಮಗಾರಿ ಸಂದರ್ಭದಲ್ಲಿ ನೈಋತ್ಯ ರೈಲ್ವೆ 3ನೇ ಸಾಲಿನಲ್ಲಿ ವಿದ್ಯುತ್ ಸರಬರಾಜು ಮತ್ತು ರೈಲುಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಹಳೆದ 9.15 ಮೀಟರ್ ಗಿರ್ಡರ್ ಅನ್ನು ತೆರವು ಮಾಡಿ 20.5 ಮೀಟರ್ ಸ್ಟೀಲ್ ಗರ್ಡರ್ ಅನ್ನು ಸ್ಥಾಪಿಸಲಾಗಿದೆ. ಕೆಳಸೇತುವೆ ಸಂಖ್ಯೆ 867ರಲ್ಲಿ 11 ಮೀಟರ್ ಆರ್ ಸಿಸಿ ಬಾಕ್ಸ್ ಅನ್ನು ತಳ್ಳಲು ಸಹಾಯ ಮಾಡಿದೆ.

100ಕ್ಕೂ ಹೆಚ್ಚಿನ ಕಾರ್ಮಿಕರು ಮತ್ತು 350 ಟನ್ ರೋಡ್ ಕ್ರೇನ್ ಸಹಾಯದಿಂದ ಈ ಮಹತ್ವದ ಕಾಮಗಾರಿಯನ್ನು ಮುಗಿಸಲಾಗಿದೆ. ಕಾಮಗಾರಿಗಾಗಿ ಏಳು ಗಂಟೆಗಳ ಕಾಲ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಕಾಮಗಾರಿ ಸಂದರ್ಭದಲ್ಲಿ ಸಿಗ್ನಲಿಂಗ್ ಮತ್ತು ದೂರಸಂಪರ್ಕ ಕೇಬಲ್‌ಗಳನ್ನು ಬೇರೆ ಕಡೆಗೆ ತಿರುಗಿಸಲಾಗಿತ್ತು. ರೈಲ್ವೆ ಅಧಿಕಾರಿಗಳು, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಈ ಕಾಮಗಾರಿಗಾಗಿ ಜಂಟಿಯಾಗಿ ಕೆಲಸ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಬೆಂಗಳೂರಿನಿಂದ ಹೊರಹೋಗು ಎರಡು ರೈಲುಮಾರ್ಗಗಳಲ್ಲಿ ಒಂದು ಕಿಲೋಮೀಟರ್ ಫ್ಲೈ ಓವರ್ ಗಳು ಮತ್ತು ಅಂಡರ್ ಪಾಸ್‌ಗಳ ಜಾಲವನ್ನು ನಿರ್ಮಿಸುತ್ತಿರುವ ಬಿಬಿಎಂಪಿ ಈ ಕಾರ್ಯಕ್ಕೆ ಹಣವನ್ನು ಒದಗಿಸಿದೆ. ರೈಲ್ವೆ ಕೆಳಸೇತುವೆಯನ್ನು ಎಸ್‌ಡಬ್ಲ್ಯೂಆರ್‌ನಿಂದ ನಿರ್ಮಿಸಲಾಗುತ್ತಿದ್ದು, ಇದು ಶೀಘ್ರದಲ್ಲೇ ನಾಲ್ಕನೇ ಮತ್ತು ಅಂತಿಮ ಆರ್‌ಸಿಸಿ ಬಾಕ್ಸ್ ಅನ್ನು ಸ್ಥಾಪಿಸಲಿದೆ.
ದಶಕದಿಂದ ನಡೆಯುತ್ತಿದೆ ಕಾಮಗಾರಿ
ಈಗಾಗಲೇ ಎರಡು ಕೆಳಸೇತುವೆಗಳ ಕಾಮಗಾರಿ ಮುಗಿದಿದ್ದು ಸಂಚಾರಕ್ಕೆ ಮುಕ್ತವಾಗಿವೆ. ಇನ್ನುಳಿದ ಎರಡು ಕೆಳಸೇತುವೆಗಳು ಸಂಚಾರಕ್ಕೆ ಮುಕ್ತವಾದ ನಂತರ, ರಾಜಾಜಿನಗರದಿಂದ ಮೆಜೆಸ್ಟಿಕ್ ಮತ್ತು ವಿಧಾನಸೌಧದ ಕಡೆಗೆ ವಾಹನ ಸಂಚಾರ ಮತ್ತಷ್ಟು ಸುಲಭವಾಗುತ್ತದೆ.
ಈ ಕಾಮಗಾರಿ ಕಳೆದ ಒಂದು ದಶಕದಿಂದ ನಡೆಯುತ್ತಿದ್ದು ಸದ್ಯ ಮುಕ್ತಾಯದ ಹಂತಕ್ಕೆ ಬಂದಿದೆ. 2018-19ರಲ್ಲಿ ಮೊದಲ ಎರಡು ಕೆಳಸೇತುವೆಗಳನ್ನು ನಿರ್ಮಿಸಿದರು, ಉಳಿದ ಎರಡು ಕೆಳಸೇತುವೆಗಳನ್ನು ನಿರ್ಮಿಸಲು ಹಲವು ಅಡ್ಡಿಗಳು ಎದುರಾದವು. 2013-14ರಲ್ಲಿ ಎಂಟುಲೈನ್‌ನ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ ಕಾಮಗಾರಿಯನ್ನು 103 ಕೋಟಿ ರುಪಾಯಿ ವೆಚ್ಚದಲ್ಲಿ ಪ್ರಾರಂಭಿಸಲಾಗಿತ್ತು. ಕಾಮಗಾರಿ ಆರಂಭವಾಗಿ 10 ವರ್ಷ ಕಳೆದರೂ ಇನ್ನೂ ಮುಕ್ತಾಯವಾಗಿಲ್ಲ.












Click it and Unblock the Notifications