• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು: 16 ಕೋಟಿ ಮೌಲ್ಯದ 70 ಕೆಜಿ ಚಿನ್ನ ಕದ್ದ ಐನಾತಿ ಕಳ್ಳರು

|

ಬೆಂಗಳೂರು, ಡಿಸೆಂಬರ್ 24: ನಗರದಲ್ಲಿ ಬರೋಬ್ಬರಿ ಕತರ್ನಾಕ್ ಕಳ್ಳರ ಗುಂಪೊಂದು ಬರೋಬ್ಬರಿ 70 ಕೆ.ಜಿ ಚಿನ್ನ ಕಳ್ಳತನ ಮಾಡಿದ್ದಾರೆ.

ಪುಲಕೇಶಿ ನಗರ ಠಾಣೆ ವ್ಯಾಪ್ತಿಯ ಲಿಂಗರಾಜಪುರಂನ ಮುತೂಟ್ ಫೈನಾನ್ಸ್‌ ಕಚೇರಿಗೆ ನುಗ್ಗಿದ ಕಳ್ಳರ ಗುಂಪು ಬರೋಬ್ಬರಿ 70 ಕೆ.ಜಿ ಚಿನ್ನಾಭರಣ ಎತ್ತೊಯ್ದಿದ್ದಾರೆ. ಇದರ ಒಟ್ಟು ಮೌಲ್ಯ 16 ಕೋಟಿ ರೂಪಾಯಿಗಳು.

ಮೊದಲೇ ಯೋಜನೆ ರೂಪಿಸಿಕೊಂಡಂತಿರುವ ಕಳ್ಳರು, ಬಾತ್‌ರೂಂ ನಿಂದ ಕನ್ನ ಕೊರೆದು ಕಚೇರಿಯ ಒಳಕ್ಕೆ ಬಂದು, ಗ್ಯಾಸ್ ಕಟರ್‌ಗಳನ್ನು ಬಳಸಿ ತಿಜೋರಿಗಳ ಬಾಗಿಲು ತೆಗೆದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಕಳ್ಳತನ ಮಾಡುವುದಕ್ಕೂ ಮೊದಲು ಈ ಕಳ್ಳರು ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಳಿಸಿದ್ದಾರೆ. ಕಳ್ಳರು ಭಾರಿ ಯೋಜನೆ ರೂಪಿಸಿಯೇ ಕಳ್ಳತನ ಮಾಡಿರುವುದು ಗೊತ್ತಾಗುತ್ತಿದೆ.

ಚಿನ್ನಾಭರಣ ಗಿರವಿ ಇಟ್ಟುಕೊಂಡು ಸಾಲ ನೀಡುತ್ತಿದ್ದ ಮುತೂಟ್ ಫೈನಾನ್ಸ್‌ ಅವಧಿ ಮೀರಿದ ಚಿನ್ನಾಭರಣಗಳನ್ನು ಹರಾಜು ಹಾಕಲೆಂದು ದಾಸ್ತಾನು ಮಾಡಿಟ್ಟುಕೊಂಡಿತ್ತು. ಈ ಆಭರಣಗಳನ್ನೇ ಕಳ್ಳರು ದೋಚಿದ್ದಾರೆ.

English summary
In Bengaluru's Lingarajapuram robbers robbed 70 kg gold in Muthoot finance. Police registered case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X