• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಾಲಹಳ್ಳಿ ಬಳಿಯ ಎಟಿಎಂ ಯಂತ್ರದಲ್ಲಿತ್ತು ಸ್ಕಿಮ್ಮರ್

|

ಬೆಂಗಳೂರು, ಡಿಸೆಂಬರ್ 3: ಇನ್ನುಮುಂದೆ ಎಟಿಎಂಗೆ ಹೋಗಿ ಹಣ ಡ್ರಾ ಮಾಡುವ ಮುನ್ನ ಅಕ್ಕಪಕ್ಕ ಒಮ್ಮೆ ಪರೀಕ್ಷಿಸಿ.

ಜಾಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ಎಟಿಎಂ ಘಟಕದ ಯಂತ್ರದಲ್ಲಿ ಸ್ಕಿಮ್ಮರ್ ಉಪಕರಣ ಹಾಗೂ ಗುಪ್ತ ಕ್ಯಾಮರಾ ಪತ್ತೆಯಾಗಿದೆ.

ಎಟಿಎಂನಲ್ಲಿ ಹಣ ಲಪಟಾಯಿಸಲು ಯತ್ನಿಸಿದವ 15 ದಿನಗಳ ನಂತರ ಸಿಕ್ಕಿಬಿದ್ದಎಟಿಎಂನಲ್ಲಿ ಹಣ ಲಪಟಾಯಿಸಲು ಯತ್ನಿಸಿದವ 15 ದಿನಗಳ ನಂತರ ಸಿಕ್ಕಿಬಿದ್ದ

ಈ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಶನಿವಾರ ಬೆಳಗ್ಗೆಯಿಂದ ಹಲವರು ಘಟಕಕ್ಕೆ ಬಂದು ಹೋಗಿದ್ದರು. ಅವರೆಲ್ಲರ ಕಾರ್ಡ್ ಮಾಹಿತಿ ಉಪಕರಣದಲ್ಲಿ ದಾಖಲಾಗಿತ್ತು. ಸಂಜೆ ಘಟಕಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಸ್ಕಿಮ್ಮರ್ ಉಪಕರಣವಿದ್ದುದನ್ನು ಗಮನಿಸಿ. ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎಟಿಎಂ ದರೋಡೆ, ಪಿನ್ ಕಳ್ಳತನ ಹೀಗೆ ಹಲವು ಘಟನೆಗಳನ್ನು ನಾವು ನೋಡಿರುತ್ತೇವೆ ಆದರೆ ಈ ರೀತಿ ಸ್ಕಿಮ್ಮರ್ ಅಳವಡಿಕೆ ಗಮನಿಸಿದರೆ ಹಣ ತೆಗೆಯುವುದಕ್ಕೇ ಭಯವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ.

ಯಂತ್ರಕ್ಕೆ ಉಪಕರಣ ಅಳವಡಿಸಿದ್ದ ಆರೋಪಿಗಳು ಅದರ ಸಮೀಪದಲ್ಲೇ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಸ್ಥಳೀಯರೇ ಅವರನ್ನು ಬೆನ್ನಟ್ಟಿ ಹಿಡಿದು ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಟಿಎಂ ಘಟಕಕ್ಕೆ ಬರುವ ಗ್ರಾಹಕರ ಕಾರ್ಡ್ ಮಾಹಿತಿ ಕದ್ದು, ನಕಲಿ ಕಾರ್ಡ್‌ಗಳನ್ನು ಸೃಷ್ಟಿಸಿ ಖಾತೆಗೆ ಕನ್ನ ಹಾಕಲು ಆರೋಪಿಗಳು ಸಂಚು ರೂಪಿಸಿದ್ದರು. ಅದರಂತೆ ಘಟಕಕ್ಕೆ ಬಂದು ಉಪಕರಣ ಹಾಗೂ ಕ್ಯಾಮರಾ ಅಳವಡಿಸಿದ್ದರು ಎಂದರು.

English summary
Now go to the ATM and check the side by side before drawing money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X