ಕೊಲೆ ಮಾಡುವವನು ಆತುರದಲ್ಲಿ ಮಾಡಿರುತ್ತಾನೆ, ಟೈಮ್‌ ಕೊಡಬೇಕಿತ್ತು: ದರ್ಶನ್‌ ಹೀಗೆ ಹೇಳಿದ್ದು ಏಕೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಮೈಸೂರಿನಲ್ಲಿ ಬಂಧಿಸಲಾಗಿದೆ. ಈ ಸುದ್ದಿ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಕಕ್ಕಾಬಿಕ್ಕಿಯಾದರು. ಆದರೆ, ಈ ಪ್ರಕರಣದಲ್ಲಿ ಎಷ್ಟರ ಮಟ್ಟಿಗೆ ಸಿಕ್ಕಿಕೊಂಡಿದ್ದಾರೆ ಎಂದು ದಿನ ಕಳೆದಂತೆ ಹೊರ ಬರುತ್ತಲೆ ಇದೆ. ದರ್ಶನ್‌ ಸುತ್ತ ಹಲವು ಸಾಕ್ಷಿಗಳು ಎದ್ದು ನಿಂತಂತೆ ಕಾಣುತ್ತಿವೆ. ಈ ಕೇಸ್‌ನಿಂದ ದರ್ಶನ್‌ ಹೊರ ಬರುವುದು ಕಷ್ಟ ಎಂದು ಹೇಳಲಾಗುತ್ತಿದೆ.

ಈ ಪ್ರಕರಣ ಬಯಲಾಗುತ್ತಿದ್ದಂತೆ ಸಾಮಾಜಿಕ ತಾಣದಲ್ಲಿ ದರ್ಶನ್‌ ಅವರ ಹಳೆಯ ವಿಡಿಯೋಗಳು ವೈರಲ್‌ ಆಗುತ್ತಿವೆ. ಅದರಲ್ಲಿ ಖ್ಯಾತ ಪತ್ರಕರ್ತ ರವಿ ಬೆಳಗೆರೆ, ದರ್ಶನ್ ಬಗ್ಗೆ ಮಾತನಾಡಿರುವ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಬೆಳ್ಳ ಬೆಳಗ್ಗೆ ಬೆಳಗೆರೆ ಕಾರ್ಯಕ್ರಮದ ಒಂದು ಸಂಚಿಕೆಯಲ್ಲಿ ರವಿ ಬೆಳಗೆರೆ ದರ್ಶನ್‌ ವಿಚಾರವಾಗಿ ಮಾತನಾಡಿದ್ದಾರೆ. ಈ ಆಡಿಯೋದಲ್ಲಿ ದರ್ಶನ್‌ರ ಆರಂಭಿಕ ದಿನಗಳಿಂದ ಹಿಡಿದು, ಅವನು ಬೆಳೆದು ನಿಂತ ಪರಿ, ಹಾಗೂ ಆಗಿನ ಸನ್ನಿವೇಶವನ್ನು ಬೆಳಗೆರೆ ತಳಕು ಹಾಕಿದ್ದಾರೆ.

The killer acted hastily with more time a solution could have been found Darshan

ನಾ ಆಡಿದ್ದೇ ಆಟ

ಇನ್ನು ಇನ್ನೊಂದು ವಿಡಿಯೋ ಸಹ ಸಖತ್‌ ಸದ್ದು ಮಾಡುತ್ತಿದೆ. ಈ ವಿಡಯೋದಲ್ಲಿ ದರ್ಶನ್‌, ಆಗಷ್ಟೇ ಚಿತ್ರರಂಗಕ್ಕೆ ಬಂದಿದ್ದರು ಎಂದು ತಿಳಿಯುತ್ತದೆ. ಅವರ ಮುಖವನ್ನು ನೋಡಿದರೆ, ಮುಗ್ಧತೆ ಕಾಣುತ್ತದೆ. ತಮ್ಮ ತಂದೆ ಅವರನ್ನು ಕೈ ಹಿಡಿದ ನಡೆಸಬೇಕಿತ್ತು. ಅವರನ್ನು ನಾನು ಕಳೆದುಕೊಂಡಿದ್ದೇನೆ. ನೀನು ಮಾಡ್ತಾ ಇರುವುದು ತಪ್ಪು ಎಂದು ಹೇಳುವರು ಯಾರು ಇಲ್ಲ. ಅಭಿಮಾನಿಗಳೇ ನಾನು ಎಡವಿದ್ದಲ್ಲಿ ಎತ್ತಿ ಹಿಡಿಯುತ್ತಾರೆ. ನೀವು ಹೀಗೆ ಮಾಡಬಾರದು ಎಂದು ಕಿವಿ ಮಾತು ಹೇಳುತ್ತಾರೆ ಎಂಬ ವಿಡಿಯೋ ಸಹ ಸಖತ್ ವೈರಲ್ ಆಗುತ್ತಿದೆ.

ಜೈಲಿನ ಅನುಭವ

ಈ ಮಧ್ಯೆ ದರ್ಶನ್‌ ಅವರ ಮತ್ತೊಂದು ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಅಂದಹಾಗೆ ಈ ಹಿಂದೆ ದರ್ಶನ್‌ 14 ದಿನ ಜೈಲು ವಾಸ ಅನುಭವಿಸಿ ಬಂದಿದ್ದಾರೆ. ಈ ವೇಳೆ ಜೈಲಿನಲ್ಲಿ ಆದ ಅನುಭವವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಕಾರಗ್ರಹದಲ್ಲಿ ಹಲವರನ್ನು ಭೇಟಿ ಆಗಿದ್ದಾಗಿ ದರ್ಶನ್ ಹೇಳಿಕೊಂಡಿದ್ದಾರೆ. ಅಲ್ಲಿ ಶಿಕ್ಷೆ ಅನುಭವಿಸುತ್ತಿರುವ ಜನರಲ್ಲಿ ತಾವು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ಗುಂಪು ಒಂದಾದರೆ, ಇನ್ನೊಂದು ಗುಂಪು ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವುದು ಆಗಿದೆ. ಇನ್ನು ಹಲವರು ಕೋಪದ ಕೈಗೆ ಬುದ್ದಿಯನ್ನು ಕೊಟ್ಟು ಜೈಲು ಪಾಲಾಗಿದ್ದರು ಎಂದು ತಿಳಿಯಿತು. ಕೊಲೆ ಮಾಡುವವನು ಆತುರದಲ್ಲಿ ಮಾಡಿ, ನಂತರ ಕೊರಗುತ್ತಾನೆ. ನಾನು ಸಹ ಸ್ವಲ್ಪ ಸಮಯ ನೀಡಬೇಕಿತ್ತು. ಎಲ್ಲದಕ್ಕೂ ಒಂದು ಪರಿಹಾರ ಇದ್ದೇ ಇರುತ್ತದೆ ಎಂದು ಅವರು ಹೇಳುತ್ತಿದ್ದರು. ಇದೆಲ್ಲಾ ನಾನು ಅಲ್ಲಿ ಕಲಿತ ಪಾಠ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

The killer acted hastily with more time a solution could have been found Darshan

ದರ್ಶನ್‌ ತಾವು ಜೀವನದಲ್ಲಿ ಕಲಿತ ಪಾಠವನ್ನೇ ಮರೆತು ಬಿಟ್ಟರಾ ಎಂದು ಪ್ರಶ್ನಿಸಲಾಗುತ್ತಿದ್ದು, ಈಗ ಈ ತುಣುಕುಗಳನ್ನು ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+